ಭಾರತ ಸರ್ಕಾರದ ನಿಯಮಾವಳಿಗಳೊಂದಿಗೆ ಜೋಡಿಸಲಾದ, ಪ್ರತಿ ಭಾರತೀಯರಿಗೆ ಅತ್ಯಂತ ಪ್ರಮುಖ ಗುರುತಿನ ಸಾಧನಗಳಲ್ಲಿ ಆಧಾರ್ ಕಾರ್ಡ್ ಆಗಿದೆ. ಇದನ್ನು ಈಗ ಡಿಮ್ಯಾಟ್ ಅಕೌಂಟ್ ಅಥವಾ ಬ್ಯಾಂಕ್ ಅಕೌಂಟ್ ತೆರೆಯುವುದು ಮುಂತಾದ ಹಲವಾರು ದಿನನಿತ್ಯದ ಕೆಲಸಗಳಿಗೆ ಬಳಸಲಾಗುತ್ತದೆ. ಆಧಾರ್ ಕಾರ್ಡ್ ಬಯೋಮೆಟ್ರಿಕ್‌ಗಳನ್ನು ಒಳಗೊಂಡಂತೆ ವ್ಯಕ್ತಿಯ ಪ್ರಮುಖ ಗುರುತಿನ ಮಾಹಿತಿಯನ್ನು ಒಳಗೊಂಡಿದೆ. ಪ್ರತಿ ಆಧಾರ್ ಕಾರ್ಡ್ ಯುಐಡಿ (UID)/ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಬರುತ್ತದೆ.
ಆಧಾರ್ ಕಾರ್ಡ್‌ಗಳನ್ನು ನೋಂದಣಿ ಕೇಂದ್ರಗಳಿಂದ ಪಡೆಯಬಹುದು ಮತ್ತು ಆನ್ಲೈನಿನಲ್ಲೂ ಡೌನ್ಲೋಡ್ ಮಾಡಬಹುದು. ನೀವು ಅದಕ್ಕಾಗಿ ಅಪ್ಲೈ ಮಾಡಿದ್ದರೆ, ಅದು ಸಿದ್ಧವಾದ ನಂತರ ನೀವು ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ಯುಐಡಿಎಐ (UIDAI) (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ)ದ ಆಧಾರ್ ಕಾರ್ಡಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪರಿಶೀಲಿಸುವುದು.
ಆಧಾರ್ ನಂಬರ್ ಬಳಸಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು
ನಿಮ್ಮ ಆಧಾರ್ ನಂಬರ್ ಬಳಸಿಕೊಂಡು ನೀವು ನಿಮ್ಮ ಆಧಾರ್ ಕಾರ್ಡ್ ಆನ್ಲೈನಿನಲ್ಲಿ ಡೌನ್ಲೋಡ್ ಮಾಡಬಹುದು:
- ಅಧಿಕೃತ ಆಧಾರ್ ವೆಬ್‌ಸೈಟ್‌ಗೆ ಭೇಟಿ ನೀಡಿ.
- “ಆಧಾರ್ ನಂಬರ್” ಆಯ್ಕೆಯನ್ನು ಆರಿಸಿ.
- ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ನಿಮ್ಮ ಭದ್ರತಾ ಕೋಡ್ ನಮೂದಿಸಿ.
- “ಒಟಿಪಿ (OTP) ಕಳುಹಿಸಿ” ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಒಟಿಪಿ (OTP) ಯನ್ನು ಪಡೆಯುತ್ತೀರಿ.
- “ಮಾಸ್ಕ್ ಆದ ಆಧಾರ್” ಕಾರ್ಡ್ ಡೌನ್ಲೋಡ್‌ಗೆ ಆಯ್ಕೆಯನ್ನು ಆರಿಸಿ.
- ನೀವು ಇನ್ನೊಂದು ಒಟಿಪಿ (OTP) ಪಡೆದ ನಂತರ, ನೀವು “ವೆರಿಫೈ ಮಾಡಿ ಮತ್ತು ಡೌನ್ಲೋಡ್” ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಪೂರ್ಣವಾಗಿದೆ ಮತ್ತು ಡೌನ್ಲೋಡ್ ಮಾಡಲಾದ ಕಾರ್ಡ್ ನಿಮ್ಮ ಡಿವೈಸಿನ ಡೌನ್ಲೋಡ್ ಫೋಲ್ಡರಿನಲ್ಲಿರುತ್ತದೆ.
ಹೆಸರು ಮತ್ತು ಹುಟ್ಟಿದ ದಿನಾಂಕದ ಪ್ರಕಾರ ಇ–ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಹಂತಗಳು
ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ನೀವು ಆಧಾರ್ ಕಾರ್ಡನ್ನು ಆನ್ಲೈನಿನಲ್ಲಿ ಡೌನ್ಲೋಡ್ ಮಾಡಲು ಬಯಸಿದರೆ, ನೀವು ಮೊದಲು ನಿಮ್ಮ ಇಐಡಿ (EID) (ನೋಂದಣಿ ಐಡಿ (ID) ಯನ್ನು ಪಡೆಯಬೇಕು. ಇದು ಈ ಕೆಳಗಿನ ಹಂತಗಳೊಂದಿಗೆ ಸಾಧ್ಯವಾಗುತ್ತದೆ:
- ಯುಐಡಿಎಐ (UIDAI) ವೆಬ್‌ಸೈಟಿನಲ್ಲಿ ‘ಇಐಡಿ (EID) ಪಡೆಯಿರಿ’ ಪೇಜಿಗೆ ಹೋಗಿ.
- ನಿಮ್ಮ ಹೆಸರು ಮತ್ತು ಭದ್ರತಾ ಕೋಡ್ ನಮೂದಿಸಿ.
- “ಒಟಿಪಿ (OTP) ಕಳುಹಿಸಿ” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಫೋನಿನಲ್ಲಿ ನೀವು ಪಡೆಯುವ ಒಟಿಪಿ (OTP) ಯನ್ನು ನಮೂದಿಸಿ ಮತ್ತು “ಒಟಿಪಿ (OTP) ವೆರಿಫೈ ಮಾಡಿ” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಫೋನಿನಲ್ಲಿ ನೀವು ನಿಮ್ಮ ಇಐಡಿ (EID) ಯನ್ನು ಪಡೆಯುತ್ತೀರಿ.
- ಇದರ ನಂತರ, ಯುಐಡಿಎಐ (UIDAI) ವೆಬ್‌ಸೈಟಿನಿಂದ ನಿಮ್ಮ ಇ-ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಲು ನೀವು ನಿಮ್ಮ ಇಐಡಿ (EID) ಯನ್ನು ಬಳಸಬಹುದು.
- ನೀವು ನಿಮ್ಮ ಇಐಡಿ (EID) ಮತ್ತು ಭದ್ರತಾ ಕೋಡ್ ನಮೂದಿಸುವ ಅದೇ ರೀತಿಯ ಮೆನು-ಚಾಲಿತ ಪ್ರಕ್ರಿಯೆಯನ್ನು ನೋಡಿ, ಒಟಿಪಿ (OTP) ಪಡೆಯಿರಿ, ಒಟಿಪಿ (OTP) ಪರಿಶೀಲಿಸಿ ಮತ್ತು ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಅನ್ನು ಆನ್ಲೈನಿನಲ್ಲಿ ಪಡೆಯಿರಿ.
ವರ್ಚುವಲ್ ಐಡಿ (ವಿಐಡಿ (VID) ಮೂಲಕ ಇ–ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಹಂತಗಳು
ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವಿಐಡಿ (VID) ಅಥವಾ ವರ್ಚುವಲ್ ಐಡಿ (ID) ಯನ್ನು ಬಳಸಿಕೊಂಡು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಒಂದು ಮಾರ್ಗವಾಗಿದೆ:
- ಆಧಾರ್ ಪೋರ್ಟಲ್‌ಗೆ ಭೇಟಿ ನೀಡಿ.
- “ವಿಐಡಿ (VID)” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವಿಐಡಿ (VID), ಭದ್ರತಾ ಕೋಡ್ ಭರ್ತಿ ಮಾಡಿ.
- ಒಟಿಪಿ (OTP) ಜನರೇಟ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರಿನಲ್ಲಿ ನೀವು ಪಡೆಯುವ ಒಟಿಪಿ (OTP) ಯನ್ನು ನಮೂದಿಸಿ.
- ನಿಮ್ಮ ಇ-ಆಧಾರ್ ಅನ್ನು ನಿಮ್ಮ ಡಿವೈಸಿಗೆ ಡೌನ್ಲೋಡ್ ಮಾಡಲಾಗುತ್ತದೆ.
ನಿಮ್ಮ ವರ್ಚುವಲ್ ಐಡಿ(ID) ಬಳಸಿಕೊಂಡು ಆಧಾರ್ ಕಾರ್ಡ್ ಹೀಗೆ ಡೌನ್ಲೋಡ್ ಮಾಡಿಕೊಳ್ಳಬಹುದು.
ನೋಂದಣಿ ಸಂಖ್ಯೆ (ಇಐಡಿ (EID)) ಬಳಸಿ ಇ–ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು
ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡಿಗೆ ಅಪ್ಲೈ ಮಾಡಿದ್ದರೆ ಮತ್ತು ಅದನ್ನು ಇನ್ನೂ ಪಡೆಯದಿದ್ದರೆ, ಅಥವಾ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಬಯಸಿದರೆ, ನಿಮ್ಮ ನೋಂದಣಿ ಐಡಿ (ID) (ಇಐಡಿ (EID) ಯೊಂದಿಗೆ ನೀವು ಅದನ್ನು ಮಾಡಬಹುದು. ಹಂತಗಳು ಇಲ್ಲಿವೆ:
- ಯುಐಡಿಎಐ (UIDAI) ವೆಬ್‌ಸೈಟ್‌ಗೆ ಹೋಗಿ.
- “ಆಧಾರ್ ಡೌನ್ಲೋಡ್ ಮಾಡಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಇಐಡಿ (EID) ಮತ್ತು ನಿಮ್ಮ ಭದ್ರತಾ ಕೋಡ್ ಭರ್ತಿ ಮಾಡಿ.
- ನಿಮ್ಮ ಮೊಬೈಲ್ ನಂಬರಿನಲ್ಲಿ ಪಡೆಯಲಾಗುವ ಒಟಿಪಿ (OTP) ಯನ್ನು ಜನರೇಟ್ ಮಾಡಿ.
- ಪಡೆದ ಒಟಿಪಿ (OTP) ಯನ್ನು ನಮೂದಿಸಿ ಮತ್ತು “ವೆರಿಫೈ ಮಾಡಿ ಮತ್ತು ಡೌನ್ಲೋಡ್” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಯಶಸ್ವಿಯಾಗಿದೆ ಮತ್ತು ಅದು ನಿಮ್ಮ ಸಿಸ್ಟಮ್‌ನ ಡೌನ್ಲೋಡ್‌ಗಳ ವಿಭಾಗದಲ್ಲಿರುತ್ತದೆ.
ಡಿಜಿಲಾಕರ್ ಅಕೌಂಟಿನಿಂದ ಇ–ಆಧಾರ್ ಡೌನ್ಲೋಡ್ ಮಾಡುವುದು ಹೇಗೆ
ಡಿಜಿಲಾಕರ್ ಒಂದು ಕ್ಲೌಡ್-ಆಧಾರಿತ ಪ್ಲಾಟ್‌ಫಾರ್ಮ್ ಆಗಿದ್ದು, ಯಾವುದೇ ಡಿಜಿಲಾಕರ್ ಅಕೌಂಟನ್ನು ಆಧಾರ್‌ಗೆ ಲಿಂಕ್ ಮಾಡಿದಾಗ ಬಳಕೆದಾರರಿಗೆ ಇ-ಆಧಾರ್ ಲಭ್ಯವಾಗುವಂತೆ ಮಾಡಲು ಯುಐಡಿಎಐ (UIDAI0ಯೊಂದಿಗೆ ಸಹಯೋಗ ಮಾಡಿದೆ. ನೀವು ಡಿಜಿಲಾಕರ್‌ನಿಂದ ನಿಮ್ಮ ಆಧಾರ್‌ನ ಡಿಜಿಟಲ್ ಆವೃತ್ತಿಯನ್ನು (ಇ-ಆಧಾರ್) ಪಡೆಯಲು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ:
- ಡಿಜಿಲಾಕರ್ ಅಧಿಕೃತ ವೆಬ್‌ಸೈಟಿಗೆ ಹೋಗಿ.
- ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ, ಸೈನ್ ಇನ್ ಮಾಡಿ ಮತ್ತು ನಿಮ್ಮ ಆಧಾರ್ ನಂಬರನ್ನು ಭರ್ತಿ ಮಾಡಿ.
- “ವೆರಿಫೈ” ಮೇಲೆ ಕ್ಲಿಕ್ ಮಾಡುವ ಮೂಲಕ ಒಟಿಪಿ (OTP) ಜನರೇಟ್ ಮಾಡಿ.
- ನಿಮ್ಮ ಮೊಬೈಲ್ ನಂಬರಿನಲ್ಲಿ ಪಡೆದ ಒಟಿಪಿ (OTP) ಯನ್ನು ಭರ್ತಿ ಮಾಡಿ.
- “ವಿತರಿಸಲಾದ ಡಾಕ್ಯುಮೆಂಟ್” ಪೇಜ್ ತೋರಿಸಲಾಗುತ್ತದೆ. ಇ-ಆಧಾರ್ ಡೌನ್ಲೋಡ್ ಮಾಡಲು “ಸೇವ್” ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಅನ್ನು ಆನ್ಲೈನಿನಲ್ಲಿ ನಿಮ್ಮ ಡಿಜಿಲಾಕರ್ ಅಕೌಂಟ್ ಮೂಲಕ ಮಾಡಲಾಗುತ್ತದೆ.
ನೋಂದಾಯಿತ ಮೊಬೈಲ್ ನಂಬರ್ ಇಲ್ಲದೆ ಆಧಾರ್ ಕಾರ್ಡ್ ಪಡೆಯಿರಿ
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಇಲ್ಲದೆ, ನೀವು ಆಧಾರ್ ಕಾರ್ಡನ್ನು ಆನ್ಲೈನಿನಲ್ಲಿ ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಬದಲಾಗಿ, ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಆಧಾರ್ ನೋಂದಣಿ ಕೇಂದ್ರದಲ್ಲಿ, ಗುರುತಿನ ಪುರಾವೆಗಾಗಿ ನೀವು ನಿಮ್ಮ ಬಯೋಮೆಟ್ರಿಕ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಅಗತ್ಯವಿರುವ ಮಾಹಿತಿಯನ್ನು ಒದಗಿಸಿದ ನಂತರ, ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ಪಿವಿಸಿ (PVC) ಕಾರ್ಡಿನ ಪ್ರಿಂಟ್ ಔಟ್ ಪಡೆಯಬಹುದು.
ಉಮಾಂಗ್ (Umang) ಆ್ಯಪ್ ಮೂಲಕ ಇ–ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು
ಆನ್ಲೈನಿನಲ್ಲಿ ಆಧಾರ್ ಡೌನ್ಲೋಡ್ ಮಾಡುವ ಮಾರ್ಗಗಳಲ್ಲಿ ಉಮಾಂಗ್ (Umang) ಆ್ಯಪ್ ಒಂದಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ಹಂತಗಳನ್ನು ಕೆಳಗೆ ನಮೂದಿಸಲಾಗಿದೆ:
- ಗೂಗಲ್ ಪ್ಲೇ (Google Play) ಅಥವಾ ಆಪ್ ಸ್ಟೋರ್ (App Store) ಗೆ ಹೋಗಿ ಮತ್ತು ಉಮಾಂಗ್ (Umang) ಆ್ಯಪನ್ನು ಡೌನ್ಲೋಡ್ ಮಾಡಿ
- “ಎಲ್ಲಾ ಸೇವೆಗಳು” ವಿಭಾಗದ ಅಡಿಯಲ್ಲಿ, “ಆಧಾರ್ ಕಾರ್ಡ್” ಮೇಲೆ ಕ್ಲಿಕ್ ಮಾಡಿ.
- ನಂತರ “ಡಿಜಿಲಾಕರ್‌ನಿಂದ ಆಧಾರ್ ಕಾರ್ಡ್ ನೋಡಿ” ಮೇಲೆ ಕ್ಲಿಕ್ ಮಾಡಿ.
- ನಿಮ್ಮನ್ನು ಡಿಜಿಲಾಕರ್‌ಗೆ ಮರುನಿರ್ದೇಶಿಸಿದ ನಂತರ, ನಿಮ್ಮ ಅಕೌಂಟಿಗೆ ಸೈನ್ ಇನ್ ಮಾಡಿ. ಇದಕ್ಕಿಂತ ಮೊದಲು ನಿಮ್ಮ ಮೊಬೈಲ್ ನಂಬರ್ ನಿಮ್ಮ ಆಧಾರ್‌ಗೆ ನೋಂದಣಿಯಾಗಿರಬೇಕು.
- ಡಿಜಿಲಾಕರ್ ಮೂಲಕ, ನೀವು ಆಧಾರ್ ಕಾರ್ಡನ್ನು ನೋಡಬಹುದು/ಡೌನ್ಲೋಡ್ ಮಾಡಬಹುದು.
ಎಂಆಧಾರ್ ಆ್ಯಪ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ
ನಿಮ್ಮ ಆಧಾರ್‌ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಎಂಆಧಾರ್ ಆ್ಯಪ್ ಆಗಿದೆ. ಈ ಆ್ಯಪ್ ಮೂಲಕ ಈ ರೀತಿಯಾಗಿ ನೀವು ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು:
- ಎಂಆಧಾರ್ ಬಳಸುವ ಮೊದಲು ನೀವು ಈಗಾಗಲೇ ನಿಮ್ಮ ಮೊಬೈಲ್ ನಂಬರಿನೊಂದಿಗೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಿರಬೇಕು. ಮೊದಲು ಆ್ಯಪ್‌ಗೆ ಲಾಗಿನ್ ಮಾಡಿ.
- “ಆಧಾರ್ ಪಡೆಯಿರಿ” ಅಡಿಯಲ್ಲಿ, “ಆಧಾರ್ ಡೌನ್ಲೋಡ್ ಮಾಡಿ” ಮೇಲೆ ಕ್ಲಿಕ್ ಮಾಡಿ.
- “ರೆಗ್ಯುಲರ್ ಆಧಾರ್” ಆಯ್ಕೆಮಾಡಿ.
- ನಿಮ್ಮ ವಿಐಡಿ (VID), ಇಐಡಿ (EID) ಅಥವಾ ನಿಮ್ಮ ಆಧಾರ್ ನಂಬರ್‌ನೊಂದಿಗೆ ನೀವು ಆಧಾರ್ ಡೌನ್ಲೋಡ್ ಮಾಡಲು ಆಯ್ಕೆ ಮಾಡಬಹುದು. ಇವುಗಳಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ಮತ್ತು ಒಟಿಪಿ (OTP) ಜನರೇಟ್ ಮಾಡಿ.
- ನಿಮ್ಮ ಮೊಬೈಲ್ ಫೋನಿನಲ್ಲಿ ಪಡೆದ ಒಟಿಪಿ (OTP) ಯನ್ನು ಭರ್ತಿ ಮಾಡಿ ಮತ್ತು “ವೆರಿಫೈ” ಕ್ಲಿಕ್ ಮಾಡಿ.
- ಎಂಆಧಾರ್ ಮೂಲಕ ಆಧಾರ್ ಡೌನ್ಲೋಡ್ ಮಾಡಲು “ಓಪನ್” ಕ್ಲಿಕ್ ಮಾಡಿ.
ಡೌನ್ಲೋಡ್ ಮಾಡಿದ ನಂತರ ಇ–ಆಧಾರ್ ಕಾರ್ಡನ್ನು ಪ್ರಿಂಟ್ ಮಾಡುವುದು ಹೇಗೆ
ನೀವು ಆಧಾರ್ ಕಾರ್ಡ್ ಡೌನ್ಲೋಡ್ ಪ್ರಕ್ರಿಯೆಯನ್ನು ಆನ್ಲೈನಿನಲ್ಲಿ ನೋಡಿದ ನಂತರ, ನೀವು ಪ್ರತಿಯನ್ನು ಪ್ರಿಂಟ್ ಕೂಡ ಮಾಡಬಹುದು. ನಿಮ್ಮ ಇ-ಆಧಾರ್ ಪಿಡಿಎಫ್ (PDF) ಆಗಿದೆ, ಆದ್ದರಿಂದ ನೀವು ಅಡೋಬ್ ಅಕ್ರೋಬ್ಯಾಟ್‌ನಂತಹ ಪಿಡಿಎಫ್ (PDF) ರೀಡರ್‌ನ ಸಹಾಯದಿಂದ ಅದನ್ನು ತೆರೆಯಬಹುದು. ನಂತರ, ನೀವು ನಿಮ್ಮ ಡಿವೈಸಿನಲ್ಲಿ ಪ್ರಿಂಟ್ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ಆಧಾರ್ ಪ್ರಿಂಟ್ ಮಾಡಬಹುದು.
ಈಗಲೇ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ
ಯುಐಡಿಎಐ (UIDAI) ಒಂದು ಬಳಕೆದಾರ-ಸ್ನೇಹಿ ವೇದಿಕೆಯಾಗಿದ್ದು, ಇದು ಜನರಿಗೆ ಆಧಾರ್ (ಇ-ಆಧಾರ್) ಕಾರ್ಡನ್ನು ಆನ್ಲೈನಿನಲ್ಲಿ ಡೌನ್ಲೋಡ್ ಮಾಡುವ ಸೌಲಭ್ಯವನ್ನು ನೀಡುತ್ತದೆ. ಈ ಸೌಲಭ್ಯದೊಂದಿಗೆ, ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಪ್ರಕ್ರಿಯೆ ಸರಳವಾಗಿದೆ ಮತ್ತು ಅನುಕೂಲಕರವಾಗಿದೆ. ಜೊತೆಗೆ, ನಿಮ್ಮ ಆಧಾರ್ ಡೌನ್ಲೋಡ್ ಮಾಡುವ ಮುಖ್ಯ ಅನುಕೂಲವೆಂದರೆ ಅದನ್ನು ನಿಮ್ಮ ಸಾಧನದಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಮತ್ತು ಅಗತ್ಯವಿದ್ದಾಗ ಅದನ್ನು ಬಳಸಬಹುದು.
FAQs
ಇ-ಆಧಾರ್ ಕಾರ್ಡ್‌ನ ಬಳಕೆ ಏನು?
ನೀವು ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದರೆ, ನೀವು ಇ–ಆಧಾರ್ ಕಾರ್ಡ್ ಹೊಂದಿದ್ದರೆ, ನಿಮ್ಮ ಆಧಾರ್ ಕಾರ್ಡ್‌ನ ಡಿಜಿಟಲ್ ರೂಪವನ್ನು ಕಾರ್ಡ್‌ನ ಹಾರ್ಡ್ ಕಾಪಿಯ ಸ್ಥಳದಲ್ಲಿ ಬಳಸಬಹುದು. ಡಿಜಿಟಲ್ ಕಾರ್ಡ್ ಆಗಿ, ಇದು ನಿಮ್ಮ ಮೊಬೈಲ್ ಡಿವೈಸಿನಲ್ಲಿ ಸುರಕ್ಷಿತವಾಗಿರುತ್ತದೆ.
ಆಧಾರ್ ಕಾರ್ಡ್ ಡೌನ್ಲೋಡ್ ಪ್ರಕ್ರಿಯೆಯ ಮೂಲಕ ನೀವು ಎಷ್ಟು ಬಾರಿ ಡೌನ್ಲೋಡ್ ಮಾಡುವುದಕ್ಕೆ ಮಿತಿ ಇದೆಯೇ?
ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿ, ನೀವು ಬಯಸುವಷ್ಟು ಬಾರಿ ಇ–ಆಧಾರ್ ಡೌನ್ಲೋಡ್ ಮಾಡಲು ನಿಮಗೆ ಅನುಮತಿ ಇದೆ.
ನನ್ನ VID(ವಿಐಡಿ) ಅಥವಾ ನನ್ನ (ಇಐಡಿ)EID ಯೊಂದಿಗೆ ನಾನು ಇ-ಆಧಾರ್ ಡೌನ್ಲೋಡ್ ಮಾಡಬಹುದೇ?
ನಿಮ್ಮ ಆಧಾರ್ ನಂಬರ್ ಇಲ್ಲದಿದ್ದರೆ, ವರ್ಚುವಲ್ ಐಡಿ ಅಥವಾ ನೋಂದಣಿ ಐಡಿಯೊಂದಿಗೆ ನೀವು ಆಧಾರ್ ಕಾರ್ಡನ್ನು ಆನ್ಲೈನಿನಲ್ಲಿ ಡೌನ್ಲೋಡ್ ಮಾಡಬಹುದು.
ನಾನು ಆಂಡ್ರಾಯ್ಡ್ ಮತ್ತು IOS(ಐಓಎಸ್) ಡಿವೈಸ್ ಎರಡರಲ್ಲೂ Umang(ಉಮಂಗ್) ಆ್ಯಪನ್ನು ಡೌನ್ಲೋಡ್ ಮಾಡಬಹುದೇ?
ಇ–ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು Umang(ಉಮಂಗ್) ಆ್ಯಪ್ ಆಂಡ್ರಾಯ್ಡ್ ಮತ್ತು IOS(ಐಓಎಸ್)ಡಿವೈಸ್ಗಳೊಂದಿಗೆ ಹೊಂದಾಣಿಕೆಯನ್ನು ಹೊಂದಿದೆ.