ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬಂಪರ್ ಲಿಸ್ಟಿಂಗ್ಗಳು ಆರಂಭಿಕ ಸಾರ್ವಜನಿಕ ಕೊಡುಗೆಗಳನ್ನು ಸಾರ್ವಜನಿಕ ಗಮನಕ್ಕೆ ತರುತ್ತವೆ. ಪ್ರೈಮರಿ ಮಾರುಕಟ್ಟೆಯಲ್ಲಿ ಭಾಗವಹಿಸುವುದು ಹೆಚ್ಚುತ್ತಿದ್ದು, ವ್ಯಾಪಕ ಮಾರುಕಟ್ಟೆಯಲ್ಲಿ ಕಂಡುಬರುವ ಪ್ರವೃತ್ತಿಯನ್ನು ಅನುಕರಿಸುತ್ತದೆ. ಐಪಿಒ(IPO)ಗಳ ಹೆಚ್ಚುತ್ತಿರುವ ಜನಪ್ರಿಯತೆಯಲ್ಲಿ ಅಪ್ಲಿಕೇಶನ್ ಪ್ರಕ್ರಿಯೆಯ ಸರಳತೆಯು ದೊಡ್ಡ ಭಾಗವನ್ನು ಹೊಂದಿದೆ. ಮೊದಲು IPO ಅಪ್ಲಿಕೇಶನ್ ಅನ್ನು ಭೌತಿಕವಾಗಿ ಭರ್ತಿ ಮಾಡಬೇಕು ಮತ್ತು ಸಲ್ಲಿಸಬೇಕು, ಆದರೆ ಈಗ ಅದನ್ನು ಒಬ್ಬರ ಮನೆಯಿಂದಲೇ ಆರಾಮದಿಂದ ಮಾಡಬಹುದು. ಮಾಧ್ಯಮವು ಬದಲಾಗಿದೆ, ಆದರೆ IPO ಅಪ್ಲಿಕೇಶನ್ನಿನಲ್ಲಿ ಕೆಲವು ತಾಂತ್ರಿಕ ನಿಯಮಗಳು ಇನ್ನೂ ಜನರನ್ನು ಕನ್ಫ್ಯೂಸ್ ಮಾಡುತ್ತವೆ – ಅದರಲ್ಲಿ DP ಹೆಸರು ಒಂದಾಗಿದೆ. DP ಹೆಸರನ್ನು ಅರ್ಥಮಾಡಿಕೊಳ್ಳಲು, ನೀವು ಮೊದಲು ಡೆಪಾಸಿಟರಿಗಳು ಮತ್ತು ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಡೆಪಾಸಿಟರಿಗಳು
ಸ್ಟಾಕ್ ಮಾರುಕಟ್ಟೆಯ ಕಾರ್ಯನಿರ್ವಹಣೆಯ ಮೇಲೆ ನಾವು ಗಮನಹರಿಸೋಣ. ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು, ಒಬ್ಬರು ಡಿಮ್ಯಾಟ್ ಅಕೌಂಟ್, ಟ್ರೇಡಿಂಗ್ ಅಕೌಂಟ್ ಮತ್ತು ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಡೆಪಾಸಿಟರಿಯು ಡಿಮ್ಯಾಟ್ ಅಕೌಂಟನ್ನು ನಡೆಸುತ್ತಾರೆ , ಬ್ರೋಕರ್ ಅಥವಾ ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಟ್ರೇಡಿಂಗ್ ಅಕೌಂಟನ್ನು ಕಾರ್ಯನಿರ್ವಹಿಸುತ್ತಾರೆ ಮತ್ತು ಬ್ಯಾಂಕ್ ಅಕೌಂಟನ್ನು ನಡೆಸುತ್ತಾರೆ. ಹೂಡಿಕೆದಾರರು ಬ್ಯಾಂಕ್ ಖಾತೆಯಿಂದ ಟ್ರೇಡಿಂಗ್ ಖಾತೆಗೆ ಹಣವನ್ನು ವರ್ಗಾಯಿಸುತ್ತಾರೆ ಮತ್ತು ಕೆಲವು ಷೇರುಗಳನ್ನು ಖರೀದಿಸುತ್ತಾರೆ. ವಹಿವಾಟು ಎಕ್ಸ್‌ಚೇಂಜ್‌ಗಳ ಮೂಲಕ ನಡೆಯುತ್ತದೆ ಮತ್ತು ಹೂಡಿಕೆ ಮಾಡಿದ ಹಣಕ್ಕಾಗಿ, ನಿರ್ದಿಷ್ಟ ಸೆಕ್ಯೂರಿಟಿಗಳನ್ನು ಹೂಡಿಕೆದಾರರ ಡಿಮ್ಯಾಟ್ ಖಾತೆಗೆ ಜಮಾ ಮಾಡಲಾಗುತ್ತದೆ.
ಸೆಕ್ಯೂರಿಟಿಗಳನ್ನು ಡಿಮೆಟೀರಿಯಲೈಸ್ ಮಾಡಲಾಗಿದೆ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಇರುತ್ತದೆ ಮತ್ತು ಅದನ್ನು ಭೌತಿಕ ಲಾಕರ್ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದನ್ನು ಡೆಪಾಸಿಟರಿಗಳ ಮಾಲೀಕತ್ವದ ಡಿಮ್ಯಾಟ್ ಅಕೌಂಟಿನಲ್ಲಿ ಇರಿಸಲಾಗುತ್ತದೆ. ಡೆಪಾಸಿಟರಿಗಳು ಅಗತ್ಯವಾಗಿ ಸ್ಟಾಕ್ ಎಕ್ಸ್ಚೇಂಜ್ಗಳನ್ನು ಬದಲಾಯಿಸುವ ಸೆಕ್ಯೂರಿಟಿಗಳನ್ನು ಸಂಗ್ರಹಿಸುತ್ತವೆ. ಭಾರತದಲ್ಲಿ ಎರಡು ಡೆಪಾಸಿಟರಿಗಳಿವೆ – ರಾಷ್ಟ್ರೀಯ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (NSDL) ಮತ್ತು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (CDSL).
NSDL ಭಾರತದಲ್ಲಿ ಮೊದಲ ಡೆಪಾಸಿಟರಿಯಾಗಿತ್ತು ಮತ್ತು IDBI, UTI ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಿಂದ ಪ್ರಚಾರ ಮಾಡಲಾಯಿತು. ಮತ್ತೊಂದೆಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ಡಿಎಫ್ಸಿ(HDFC) ಬ್ಯಾಂಕ್ನಂತಹ ಪ್ರಮುಖ ಬ್ಯಾಂಕುಗಳೊಂದಿಗೆ ಬಿಎಸ್ಇ(BSE) ಲಿಮಿಟೆಡ್ನಿಂದ ಸಿಡಿಎಸ್ಎಲ್(CDSL) ಅನ್ನು ಪ್ರಚಾರ ಮಾಡಲಾಯಿತು. ಡೆಪಾಸಿಟರಿ ಸಿಸ್ಟಮ್ನ ಪ್ರಯೋಜನಗಳು:
– ಡಿಮೆಟೀರಿಯಲೈಸೇಶನ್: ಷೇರುಗಳನ್ನು ಭೌತಿಕ ರೂಪದಲ್ಲಿ ಸರಿಸಬೇಕಾಗಿದ್ದರಿಂದ ಕ್ಯಾಪಿಟಲ್ ಮಾರುಕಟ್ಟೆಗಳಲ್ಲಿ ಭಾಗವಹಿಸುವುದು ಇಂದಿನಷ್ಟು ಸರಳವಾಗಿರಲಿಲ್ಲ. ಡೆಪಾಸಿಟರಿ ಸಿಸ್ಟಮ್ ಸೆಕ್ಯೂರಿಟಿಗಳ ಡಿಮೆಟೀರಿಯಲೈಸೇಶನ್ ಅನ್ನು ಸಕ್ರಿಯಗೊಳಿಸಿತು ಮತ್ತು ಕಾಗದ ರಹಿತ ಷೇರು ಮಾರುಕಟ್ಟೆಗೆ ಕಾರಣವಾಯಿತು. ತಮ್ಮ ಎಲೆಕ್ಟ್ರಾನಿಕ್ ರೂಪದಲ್ಲಿ ಸೆಕ್ಯೂರಿಟಿಗಳಲ್ಲಿ ಟ್ರೇಡಿಂಗ್ ಮಾಡುವುದು ಸುಲಭ ಮತ್ತು ಸುರಕ್ಷಿತವಾಗಿದೆ.
– ವಿನಿಮಯದ ಸುಲಭ: ಡಿಮೆಟೀರಿಯಲೈಸ್ ಮಾಡಿದ ರೂಪದಲ್ಲಿ, ಫೋಲಿಯೋ ನಂಬರ್ ಮುಂತಾದ ಎಲ್ಲಾ ವಿಶಿಷ್ಟ ಫೀಚರ್‌ಗಳನ್ನು ಕಳೆದುಕೊಂಡಿದೆ. ಅದೇ ವರ್ಗದ ಸೆಕ್ಯೂರಿಟಿಗಳನ್ನು ಒಂದೇ ರೀತಿ ಮಾಡಿತು, ಅವುಗಳ ವಿನಿಮಯವನ್ನು ಸುಧಾರಿಸಿತು. ಇದು ವಿನಿಮಯದ ವೆಚ್ಚವನ್ನು ಕಡಿಮೆ ಮಾಡಿದೆ ಮತ್ತು ಟ್ರೇಡಿಂಗ್ ನ ಮೊದಲು ವಿವಿಧ ಗುರುತುಗಳನ್ನು ಹೊಂದುವ ಅಗತ್ಯವಿಲ್ಲದ ಕಾರಣ ಟ್ರೇಡಿಂಗ್ ವೇಗವನ್ನು ಹೆಚ್ಚಿಸಿದೆ.
– ಉಚಿತ ವರ್ಗಾವಣೆಯ ಸಾಮರ್ಥ್ಯ: ಡೆಪಾಸಿಟರಿಗಳ ನಡುವಿನ ಸೆಕ್ಯೂರಿಟಿಗಳ ವರ್ಗಾವಣೆಯು ಉಚಿತವಾಗಿದೆ ಮತ್ತು ಸುರಕ್ಷಿತ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಹೆಚ್ಚುವರಿಯಾಗಿ, ಎಲೆಕ್ಟ್ರಾನಿಕ್ ಮಾಧ್ಯಮದ ಬಳಕೆಯಿಂದಾಗಿ, ಅಂತಿಮ ಸೆಟಲ್ಮೆಂಟಿಗೆ T+2 ದಿನಗಳನ್ನು ತೆಗೆದುಕೊಂಡರೂ ಕೂಡ, ಷೇರು ವರ್ಗಾವಣೆ ತಕ್ಷಣವೇ ಆಗುತ್ತದೆ.
ಡೆಪಾಸಿಟರಿ ಪಾರ್ಟಿಸಿಪಂಟ್ಸ್
ಡೆಪಾಸಿಟರಿಗಳು ಸೆಕ್ಯೂರಿಟಿಗಳನ್ನು ಇರಿಸುವ ವಾಲ್ಟ್ ಆಗಿವೆ, ಆದರೆ ಅವರು ನೇರವಾಗಿ ಹೂಡಿಕೆದಾರರೊಂದಿಗೆ ಅಥವಾ ಸೆಕ್ಯೂರಿಟಿಗಳನ್ನು ನೀಡುವ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳುವುದಿಲ್ಲ. ಡೆಪಾಸಿಟರಿ ಪಾರ್ಟಿಸಿಪಂಟ್ಸ್ SEBI ನೋಂದಾಯಿತ ಘಟಕಗಳಾಗಿದ್ದು, ಡೆಪಾಸಿಟರಿಗಳು ಮತ್ತು ಹೂಡಿಕೆದಾರರ ನಡುವಿನ ಇಂಟರ್ಫೇಸ್ ಆಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಬ್ಯಾಂಕುಗಳಿಂದ ಬ್ರೋಕರ್‌ಗಳವರೆಗೆ ಯಾವುದೇ ಸಂಸ್ಥೆಯಾಗಿರಬಹುದು.
DP ಹೆಸರು
ಡೆಪಾಸಿಟರಿ ಮತ್ತು ಡೆಪಾಸಿಟರಿ ಪಾರ್ಟಿಸಿಪಂಟ್ಸ್ ನಡುವಿನ ವ್ಯತ್ಯಾಸದ ಸ್ಪಷ್ಟ ತಿಳುವಳಿಕೆಯೊಂದಿಗೆ, IPO ಅಪ್ಲಿಕೇಶನ್ ಭರ್ತಿ ಮಾಡುವಾಗ DP ಹೆಸರಿನಲ್ಲಿ ಯಾವುದೇ ಸಂದೇಹವಿರಕೂಡದು. DP ಹೆಸರು ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಹೆಸರಾಗಿದೆ. DP ಹೆಸರಿಗಾಗಿ ಬ್ರೋಕರ್ ಹೆಸರನ್ನು ಬಾಕ್ಸಿನಲ್ಲಿ ನಮೂದಿಸಬೇಕು. ಸಾಮಾನ್ಯವಾಗಿ, DP ಹೆಸರು ಡೆಪಾಸಿಟರಿ, DP ID ಮತ್ತು DP ಅಕೌಂಟ್ನಿಂದ ಮುಂಚಿತವಾಗಿದೆ. ಡೆಪಾಸಿಟರಿ ವಿಭಾಗದಲ್ಲಿ, ನೀವು NSDL ಅಥವಾ CDSL ಅನ್ನು ಆಯ್ಕೆ ಮಾಡಬೇಕು.
ಡಿಪಿ(DP) ಐಡಿ(ID)ಯು ಡೆಪಾಸಿಟರಿಯಿಂದ ಡಿಪಾಸಿಟರಿ ಪಾರ್ಟಿಸಿಪಂಟ್ಸ್ ರವರಿಗೆ ನಿಯೋಜಿಸಲಾದ ಸಂಖ್ಯೆಯಾಗಿದೆ. DP ID 16- ಅಂಕಿಯ ಡಿಮ್ಯಾಟ್ ಅಕೌಂಟ್ ನಂಬರಿನಿಂದ ಭಿನ್ನವಾಗಿದೆ. ಸಾಮಾನ್ಯವಾಗಿ, ಡಿಮ್ಯಾಟ್ ಅಕೌಂಟ್ ನಂಬರಿನ ಮೊದಲ ಎಂಟು ಅಂಕಿಗಳು ಡಿಪಿ(DP) ಐಡಿ(ID). NSDL ಮತ್ತು CDSL ಒದಗಿಸಿದ ಡಿಮ್ಯಾಟ್ ಅಕೌಂಟ್ ನಂಬರ್ಗಳನ್ನು ಸುಲಭವಾಗಿ ಗುರುತಿಸಬಹುದು. NSDL ಡಿಮ್ಯಾಟ್ ಅಕೌಂಟ್ ನಂಬರ್ಗಳನ್ನು ‘ಇನ್(IN)’ ನಿಂದ ಆರಂಭಿಸುತ್ತದೆ, ಆದರೆ CDSL ಡಿಮ್ಯಾಟ್ ಅಕೌಂಟ್ ನಂಬರ್ಗಳು ಸಂಖ್ಯಾತ್ಮಕ ಅಂಕಿಯೊಂದಿಗೆ ಪ್ರಾರಂಭವಾಗುತ್ತವೆ.
ಮುಕ್ತಾಯ
IPO ಅಪ್ಲಿಕೇಶನ್ ಪ್ರಕ್ರಿಯೆಯನ್ನು ದೊಡ್ಡ ಪ್ರಮಾಣಕ್ಕೆ ಸರಳಗೊಳಿಸಲಾಗಿದೆ. ಆದರೆ IPO ಫಾರಂ ಅನ್ನು ಭರ್ತಿ ಮಾಡಲು ಅಗತ್ಯವಿರುವ ವ್ಯಾಪಕ ವಿವರಗಳು ಸಾಮಾನ್ಯವಾಗಿ ಗೊಂದಲಕ್ಕೆ ಕಾರಣವಾಗುತ್ತವೆ. ಡೆಪಾಸಿಟರಿಗಳು ಮತ್ತು ಡೆಪಾಸಿಟರಿ ಪಾರ್ಟಿಸಿಪಂಟ್ಸ್ ಪಾತ್ರಗಳು ಮತ್ತು ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದರಿಂದ, IPO ಅಪ್ಲಿಕೇಶನ್ ಭರ್ತಿ ಮಾಡುವುದು ಸರಳ ಮತ್ತು ತೊಂದರೆ ರಹಿತವಾಗಿರುತ್ತದೆ.