ಪ್ಯಾನ್ (PAN) ಕಾರ್ಡಿನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಶುಲ್ಕಗಳೊಂದಿಗೆ ಆನ್ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹೇಗೆ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ. ವಿವಿಧ ಹಣಕಾಸಿನ ಚಟುವಟಿಕೆಗಳಿಗೆ ನಿಮ್ಮ ಪ್ಯಾನ್ (PAN) ಕಾರ್ಡ್ ವಿವರಗಳನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ.

ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ (PAN) ಕಾರ್ಡ್, ನಿಮ್ಮ ಪ್ಯಾನ್ (PAN) ನಂಬರ್, ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಫೋಟೋ ಮತ್ತು ಕಾರ್ಡ್‌ಹೋಲ್ಡರ್ ಸಹಿಯನ್ನು ಒಳಗೊಂಡಿರುವ ಪ್ರಮುಖ ವಿಶಿಷ್ಟ ಗುರುತಿನ ಡಾಕ್ಯುಮೆಂಟ್ ಆಗಿದೆ. ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು, ತೆರಿಗೆಗಳನ್ನು ಸಲ್ಲಿಸಲು ಮತ್ತು ಭಾರತದಲ್ಲಿ ಆದಾಯ ತೆರಿಗೆ ನಿಯಮಾವಳಿಗಳನ್ನು ಅನುಸರಿಸಲು ಇದು ನಿರ್ಣಾಯಕ ಡಾಕ್ಯುಮೆಂಟ್ ಆಗಿದೆ. ಮತ್ತು ಈ ಕಾರಣಕ್ಕಾಗಿ ಕಾರ್ಡಿನಲ್ಲಿ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ. ಈ ಲೇಖನದಲ್ಲಿ, ಪ್ಯಾನ್ (PAN) ಕಾರ್ಡಿನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹೇಗೆ ಬದಲಾಯಿಸುವುದು ಎಂಬುದನ್ನು ತಿಳಿಯಿರಿ.

ಪ್ಯಾನ್ (PAN) ಕಾರ್ಡಿನಲ್ಲಿ ಮೊಬೈಲ್ ನಂಬರ್ ನೋಂದಣಿ ಮಾಡುವುದು ಹೇಗೆ?

ಪ್ಯಾನ್ (PAN) ಕಾರ್ಡಿನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹೇಗೆ ನೋಂದಣಿ ಮಾಡುವುದು ಎಂಬುದರ ಹಂತಗಳು ಇಲ್ಲಿವೆ:

  • ಅಧಿಕೃತ ಆದಾಯ ತೆರಿಗೆ (ಐಟಿ (IT)) ವೆಬ್‌ಸೈಟ್ ತೆರೆಯಿರಿ.
  • ಹೋಮ್‌ಪೇಜಿನಲ್ಲಿರುವ ‘ನೋಂದಣಿ ಮಾಡಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ‘ಪ್ಯಾನ್ (PAN) ಕಾರ್ಡ್ ಮೊಬೈಲ್ ನಂಬರ್ ಬದಲಾಯಿಸಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ‘ವೈಯಕ್ತಿಕ’ ಬಳಕೆದಾರರ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.
  • ‘ಹೊಸ ನೋಂದಣಿ’ ಮೇಲೆ ಕ್ಲಿಕ್ ಮಾಡಿ ಮತ್ತು ‘ನಿಮ್ಮ ಪ್ಯಾನ್ (PAN) ಮೊಬೈಲ್ ನಂಬರನ್ನು ಬದಲಾಯಿಸಿ’’.
  • ನಿಮ್ಮ ಪ್ಯಾನ್ (PAN) ಕಾರ್ಡ್ ನಂಬರ್, ಕೊನೆಯ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ, ಮುಂದುವರೆಯಲು ನಿವಾಸಿಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪ್ರಾಥಮಿಕ ಮೊಬೈಲ್ ನಂಬರ್ ನಮೂದಿಸಿ.
  • ನೀವು ಎರಡನೇ ಅಥವಾ ಪರ್ಯಾಯ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಕೂಡ ಸೇರಿಸಬಹುದು.
  • ನಿಮ್ಮ ಪ್ರಾಥಮಿಕ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸಲು ನೀವು ಒಟಿಪಿ (OTP) ಯನ್ನು ಪಡೆಯುತ್ತೀರಿ.
  • ಒಟಿಪಿ (OTP) ನಮೂದಿಸಿ.
  • ನಿಮ್ಮ ಪ್ರಾಥಮಿಕ ಫೋನ್ ನಂಬರನ್ನು ನೋಂದಾಯಿಸಲಾಗುತ್ತದೆ ಮತ್ತು ಪ್ಯಾನ್ (PAN) ಕಾರ್ಡಿನಲ್ಲಿ ತಂತಾನೇ ಬದಲಾಯಿಸಲಾಗುತ್ತದೆ.

ಪ್ಯಾನ್ (PAN) ಕಾರ್ಡಿನಲ್ಲಿ ಮೊಬೈಲ್ ನಂಬರನ್ನು ಆನ್ಲೈನಿನಲ್ಲಿ ಬದಲಾಯಿಸಿ

ನೀವು ಈಗಾಗಲೇ ಅಧಿಕೃತ ಐಟಿ (IT) ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ್ದರೆ, ಪ್ಯಾನ್ (PAN) ಕಾರ್ಡ್ ಮೊಬೈಲ್ ನಂಬರ್ ಬದಲಾವಣೆಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

  • ಅಧಿಕೃತ ಐಟಿ (IT) ಪೋರ್ಟಲ್ ತೆರೆಯಿರಿ
  • ‘ಲಾಗಿನ್’ ಮೇಲೆ ಕ್ಲಿಕ್ ಮಾಡಿ’
  • ನಿಮ್ಮ ಲಾಗಿನ್ ಯೂಸರ್ ಐಡಿ (ID)ಮತ್ತು ಪಾಸ್ವರ್ಡ್ ನಮೂದಿಸಿ
  • ಮೆನುವಿನಲ್ಲಿನ ‘ನನ್ನ ಪ್ರೊಫೈಲ್’ ವಿಭಾಗಕ್ಕೆ ಹೋಗಿ
  • ‘ಪ್ರೊಫೈಲ್ ಸೆಟ್ಟಿಂಗ್‌ಗಳು’ ಆಯ್ಕೆಮಾಡಿ’
  • ನಿಮ್ಮ ಸಂಪರ್ಕ ಮಾಹಿತಿಯನ್ನು ಹೊಂದಿರುವ ವಿಭಾಗಕ್ಕೆ ಹೋಗಿ ಮತ್ತು ಎಡಿಟ್ ಬಟನ್ ಕ್ಲಿಕ್ ಮಾಡಿ.
  • ನಿಮ್ಮ ಹೊಸ ಮೊಬೈಲ್ ನಂಬರ್ ನಮೂದಿಸಿ
  • ನಿಮ್ಮ ಹೊಸ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ (ID) ಗೆ ಒಟಿಪಿ (OTP) ಯನ್ನು ಕಳುಹಿಸಲಾಗುತ್ತದೆ
  • ಒಟಿಪಿ (OTP) ನಮೂದಿಸಿ ಮತ್ತು ಖಚಿತಪಡಿಸಿ
  • ನಿಮ್ಮ ಹೊಸ ಮೊಬೈಲ್ ನಂಬರನ್ನು ಪ್ಯಾನ್ (PAN) ಕಾರ್ಡಿನಲ್ಲಿ ಅಪ್ಡೇಟ್ ಮಾಡಲಾಗುತ್ತದೆ.

ಪ್ಯಾನ್ (PAN) ಕಾರ್ಡಿನಲ್ಲಿ ಮೊಬೈಲ್ ನಂಬರನ್ನು ಆಫ್ಲೈನಿನಲ್ಲಿ ಬದಲಾಯಿಸಿ

  • ಎನ್ಎಸ್‌ಡಿಎಲ್ (NSDL) ಇ-ಸರ್ಕಾರಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (ಪ್ರೋಟಿಯನ್)
  • ಮೆನುವಿನಿಂದ ‘ಡೌನ್ಲೋಡ್‌ಗಳು’ ವಿಭಾಗಕ್ಕೆ ಹೋಗಿ
  • ‘ಹೊಸ ಪ್ಯಾನ್ (PAN) ಕಾರ್ಡ್‌ಗಾಗಿ ಕೋರಿಕೆ ಸಲ್ಲಿಸಿ ಅಥವಾ/ಮತ್ತು ಪ್ಯಾನ್ (PAN) ಡೇಟಾ ಫಾರ್ಮ್‌ನಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ ಮಾಡಿ’ ಫಾರ್ಮ್ ಮೇಲೆ ಕ್ಲಿಕ್ ಮಾಡಿ’
  • ಫಾರ್ಮ್ ಡೌನ್ಲೋಡ್ ಮಾಡಿ ಮತ್ತು ಕಪ್ಪು ಪೆನ್ ಬಳಸಿಕೊಂಡು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
  • ಅಪ್ಲಿಕೇಶನ್ ಫಾರಂಗೆ ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ – ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ
  • ಹತ್ತಿರದ ಪ್ಯಾನ್ (PAN) ಕಾರ್ಡ್ ಕೇಂದ್ರವನ್ನು ಹುಡುಕಿ ಮತ್ತು ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಲು ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಿ

ಅಧಿಕಾರಿಗಳು ಅಪ್ಲಿಕೇಶನನ್ನು ರಿವ್ಯೂ ಮಾಡುತ್ತಾರೆ ಮತ್ತು ಅದನ್ನು ಪ್ಯಾನ್ (PAN) ಕಾರ್ಡಿನಲ್ಲಿ ಅಪ್ಡೇಟ್ ಮಾಡುತ್ತಾರೆ.

ಪ್ಯಾನ್ (PAN) ಕಾರ್ಡ್‌ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಿದಾಗ ವಿಧಿಸಲಾಗುವ ಶುಲ್ಕ 

ಪ್ಯಾನ್ (PAN) ಕಾರ್ಡ್ ಮೊಬೈಲ್ ನಂಬರ್ ಅಪ್ಡೇಟ್ ಮೇಲೆ ಮೂಲ ಶುಲ್ಕವನ್ನು ವಿಧಿಸಲಾಗುತ್ತದೆ.

  • ನಿಮಗೆ ಫಿಸಿಕಲ್ ಪ್ಯಾನ್ (PAN) ಕಾರ್ಡ್ ಅಗತ್ಯವಿದ್ದರೆ, ₹107 (GST ಸೇರಿದಂತೆ) ಶುಲ್ಕ ವಿಧಿಸಲಾಗುತ್ತದೆ. ಭಾರತದ ಹೊರಗೆ ಕಾರ್ಡನ್ನು ರವಾನಿಸಬೇಕಾದರೆ, ₹910 ಹೆಚ್ಚುವರಿ ರವಾನೆ ಶುಲ್ಕವನ್ನು ವಿಧಿಸಲಾಗುತ್ತದೆ.
  • ಫಿಸಿಕಲ್ ಪ್ಯಾನ್ (PAN) ಕಾರ್ಡ್ ಅಗತ್ಯವಿಲ್ಲದಿದ್ದರೆ ₹72 (GST ಸೇರಿದಂತೆ) ಶುಲ್ಕ ವಿಧಿಸಲಾಗುತ್ತದೆ ಮತ್ತು ‘ಫಿಸಿಕಲ್ ಪ್ಯಾನ್ (PAN) ಕಾರ್ಡ್ ಅಗತ್ಯವಿಲ್ಲ ಎಂಬ ಅಪ್ಲಿಕೇಶನ್ನಿನ ಮೇಲ್ಭಾಗದಲ್ಲಿ ನೀವು ನಮೂದಿಸಬೇಕಾಗುತ್ತದೆ’. ಅಂತಹ ಸಂದರ್ಭಗಳಲ್ಲಿ, ನಿಮ್ಮ ಇ-ಪ್ಯಾನ್ (PAN) ಕಾರ್ಡ್ ಪಡೆಯಲು, ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ.

ಪ್ಯಾನ್ (PAN) ಕಾರ್ಡಿನಲ್ಲಿ ಮೊಬೈಲ್ ನಂಬರ್ ಬದಲಾವಣೆಗಾಗಿ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು

ಪ್ಯಾನ್ (PAN) ಕಾರ್ಡ್ ಫೋನ್ ನಂಬರ್ ಬದಲಾವಣೆಗಾಗಿ, ನೀವು ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಹುಟ್ಟಿದ ದಿನಾಂಕದ ಪುರಾವೆಯನ್ನು ಸಲ್ಲಿಸಬೇಕಾಗಬಹುದು. ಸಲ್ಲಿಸಬಹುದಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ.

  • ಆಧಾರ್ ಕಾರ್ಡ್
  • ವೋಟರ್ ಐಡಿ (ID)
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ಫೋಟೋ ಐಡಿ (ID) ಕಾರ್ಡ್
  • ರೇಷನ್ ಕಾರ್ಡ್
  • ಜನ್ಮ ಪ್ರಮಾಣಪತ್ರ
  • ಆರ್ಮ್ಸ್ ಲೈಸೆನ್ಸ್, ಪಿಂಚಣಿದಾರರ ಕಾರ್ಡ್, ಕೇಂದ್ರ ಸರ್ಕಾರದ ಹೆಲ್ತ್ ಸ್ಕೀಮ್ ಕಾರ್ಡ್
  • ರಾಜಪತ್ರ ಅಧಿಕಾರಿ, ಪುರಸಭೆ ಮಂಡಳಿ, ಸಂಸತ್ತಿನ ಸದಸ್ಯರು ಅಥವಾ ವಿಧಾನ ಮಂಡಳಿಯ ಸದಸ್ಯರು ಸಹಿ ಮಾಡಿದ ಗುರುತಿನ ಪ್ರಮಾಣಪತ್ರ.

ಪ್ಯಾನ್ (PAN) ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ

ಮುಕ್ತಾಯ

ಪ್ಯಾನ್ (PAN) ಕಾರ್ಡ್ ನಿಮ್ಮ ಹಣಕಾಸಿನ ಟ್ರಾನ್ಸಾಕ್ಷನ್‌ಗಳಿಗೆ ಪ್ರಮುಖ ಗುರುತಿನ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ನಿಮ್ಮ ಇತ್ತೀಚಿನ ಮಾಹಿತಿಯೊಂದಿಗೆ ಅದನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ. ಹೊಸ ಪ್ಯಾನ್ (PAN) ಕಾರ್ಡಿನಲ್ಲಿ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಲು 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಫಾರ್ಮ್‌ಗಳನ್ನು ಭರ್ತಿ ಮಾಡುವ ಮೊದಲು ಅವುಗಳ ಮೇಲೆ ಒದಗಿಸಲಾದ ಸೂಚನೆಗಳನ್ನು ಓದಿ. ನೆನಪಿಡಿ, ನೀವು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುವ ಡಿಮ್ಯಾಟ್ ಅಕೌಂಟಿಗೆ ಅಪ್ಲೈ ಮಾಡುವಾಗ ಪ್ಯಾನ್ (PAN) ಕಾರ್ಡ್ ಪ್ರಮುಖ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಅದನ್ನು ಅಪ್ಡೇಟ್ ಮಾಡುವುದು ಸೂಕ್ತವಾಗಿದೆ.

FAQs

ಹೊಸ PAN (ಪಿಎಎನ್) ಕಾರ್ಡ್ ಮತ್ತು PAN (ಪಿಎಎನ್) ಕಾರ್ಡ್ ಸರಿಪಡಿಸುವಿಕೆಯ ಫಾರ್ಮ್‌ಗಳು ಒಂದೇ ಆಗಿವೆಯೇ?

ಇಲ್ಲ. ಹೊಸ PAN(ಪಿಎಎನ್ಕಾರ್ಡಿಗೆ, ನೀವು ಭಾರತೀಯ ನಿವಾಸಿಯಾಗಿದ್ದರೆ ನೀವು ಫಾರ್ಮ್ 49AA ಭರ್ತಿ ಮಾಡಬೇಕು ಮತ್ತು ನೀವು ಭಾರತದ ನಿವಾಸಿಯಲ್ಲದಿದ್ದರೆ ಫಾರ್ಮ್ 49AA ಭರ್ತಿ ಮಾಡಬೇಕು. ಆದಾಗ್ಯೂ, ಅಸ್ತಿತ್ವದಲ್ಲಿರುವ PAN(ಪಿಎಎನ್ಕಾರ್ಡ್ನಲ್ಲಿನ ವಿವರಗಳನ್ನು ಅಪ್ಡೇಟ್ ಮಾಡಲುಹೊಸ PAN(ಪಿಎಎನ್) ಕಾರ್ಡ್ಗಾಗಿ ಕೋರಿಕೆ ಸಲ್ಲಿಸಿ ಅಥವಾ/ ಮತ್ತು PAN(ಪಿಎಎನ್ಡೇಟಾ ಫಾರ್ಮ್ನಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿಎಂಬ ಇನ್ನೊಂದು ಫಾರ್ಮ್ ಇದೆ, ಇದನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಭಾರತದಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಲು ನಮಗೆ PAN (ಪಿಎಎನ್) ಕಾರ್ಡ್ ಅಗತ್ಯವಿದೆಯೇ?

ಹೌದು. ಭಾರತದಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಲು ನಿಮ್ಮ  PAN(ಪಿಎಎನ್)  ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ನಂಬರನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಭಾರತದಲ್ಲಿ ನಾವು ಒಂದಕ್ಕಿಂತ ಹೆಚ್ಚು PAN (ಪಿಎಎನ್) ಕಾರ್ಡ್ ಹೊಂದಬಹುದೇ?

ಇಲ್ಲ. ಒಬ್ಬ ವ್ಯಕ್ತಿಯು ಭಾರತದಲ್ಲಿ ಒಂದು PAN(ಪಿಎಎನ್)  ಕಾರ್ಡ್ ಮಾತ್ರ ಹೊಂದಬಹುದು ಮತ್ತು  PAN(ಪಿಎಎನ್)  ಕಾರ್ಡ್ ನಿಮ್ಮ ಪ್ರಾಥಮಿಕ ಮೊಬೈಲ್ ನಂಬರಿನೊಂದಿಗೆ ನೋಂದಣಿಯಾಗಿರಬೇಕು.

PAN (ಪಿಎಎನ್) ಕಾರ್ಡಿಗೆ ಲಿಂಕ್ ಆಗಿರುವ ಒಂದಕ್ಕಿಂತ ಹೆಚ್ಚು ಮೊಬೈಲ್ ನಂಬರನ್ನು ನಾವು ಹೊಂದಬಹುದೇ?

ಇಲ್ಲ. ಈಗ, ನೀವು ನಿಮ್ಮ PAN(ಪಿಎಎನ್ಕಾರ್ಡಿಗೆ ಒಂದು ಮೊಬೈಲ್ ನಂಬರನ್ನು ಮಾತ್ರ ಲಿಂಕ್ ಮಾಡಬಹುದು. ಆದ್ದರಿಂದ ನೀವು ಸರಿಯಾದ ಮೊಬೈಲ್ ನಂಬರನ್ನು ನಮೂದಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

PAN (ಪಿಎಎನ್) ಕಾರ್ಡಿನಲ್ಲಿ ಮೊಬೈಲ್ ನಂಬರನ್ನು ಅಪ್ಡೇಟ್ ಮಾಡುವುದು ಕಡ್ಡಾಯವೇ?

ಹೌದು. ಬ್ಯಾಂಕ್ ಅಕೌಂಟ್ ಮತ್ತು ಆದಾಯ ತೆರಿಗೆ ಮಾಹಿತಿಯಂತಹ ನಿಮ್ಮ ಹಣಕಾಸಿನ ಟ್ರಾನ್ಸಾಕ್ಷನ್ಗಳನ್ನು ನಿಮ್ಮ  PAN(ಪಿಎಎನ್)   ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿರುವುದರಿಂದ,  PAN(ಪಿಎಎನ್)  ಕಾರ್ಡಿನಲ್ಲಿ ಸಂಪರ್ಕ ವಿವರಗಳನ್ನು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.