ಪ್ಯಾನ್ (PAN) ಕಾರ್ಡ್ – ಅರ್ಥ, ಅರ್ಹತೆ ಮತ್ತು ಪ್ರಯೋಜನಗಳು

ಪ್ಯಾನ್ (PAN) ಕಾರ್ಡ್ ಎಂಬುದು ತೆರಿಗೆ ಅನುಸರಣೆಗೆ ಸಹಾಯ ಮಾಡುವ ವಿಶಿಷ್ಟ ಗುರುತಿನ ಡಾಕ್ಯುಮೆಂಟ್ ಆಗಿದೆ. ಪ್ಯಾನ್ ಕಾರ್ಡ್ ಅರ್ಥ, ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯೋಣ.

ಪ್ಯಾನ್ (PAN) ಕಾರ್ಡ್ ಅರ್ಥ

ಭಾರತದಲ್ಲಿ, ಎಲ್ಲಾ ತೆರಿಗೆದಾರರಿಗೆ 10-ಅಂಕಿಯ ಗುರುತಿನ ಸಂಖ್ಯೆ ಅಥವಾ ಪ್ಯಾನ್ (PAN) ಸಂಖ್ಯೆಯನ್ನು ನೀಡಲಾಗುತ್ತದೆ. ಪ್ಯಾನ್ (PAN) ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಅಗತ್ಯವಾದ ಅಧಿಕೃತ ಡಾಕ್ಯುಮೆಂಟ್ ಆಗಿದೆ. ಪ್ಯಾನ್ (PAN) ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್. ಇದು ಅಕ್ಷರಸಂಖ್ಯಾತ್ಮಕ ರಚನೆಯನ್ನು ಹೊಂದಿದೆ, ಅದರರ್ಥ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುತ್ತದೆ.

ಪ್ಯಾನ್ (PAN) ನಂಬರನ್ನು ಒಬ್ಬರ ತೆರಿಗೆ ಪಾವತಿಸುವ ಇತಿಹಾಸದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ ಮತ್ತು ಅದನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು. ಆದ್ದರಿಂದ, ಪ್ರತಿ ತೆರಿಗೆದಾರರಿಗೆ ವಿಶಿಷ್ಟ ಪ್ಯಾನ್ (PAN) ನಂಬರ್ ನೀಡಲಾಗುತ್ತದೆ, ಮತ್ತು ತೆರಿಗೆದಾರರ ಎಲ್ಲಾ ತೆರಿಗೆ ಸಂಬಂಧಿತ ಮಾಹಿತಿ ಮತ್ತು ವೈಯಕ್ತಿಕ ವಿವರಗಳನ್ನು ಅದರಲ್ಲಿ ಸಂಗ್ರಹಿಸಲಾಗುತ್ತದೆ.

ಪ್ಯಾನ್ (PAN) ಕಾರ್ಡ್ ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಸಹಿ ಮತ್ತು ಪ್ಯಾನ್ (PAN) ಕಾರ್ಡ್ ನಂಬರನ್ನು ಒಳಗೊಂಡಿದೆ. ಇದು ನಿಮ್ಮ ಫೋಟೋವನ್ನು ಕೂಡ ಒಳಗೊಂಡಿದೆ ಮತ್ತು ಫೋಟೋ ಗುರುತಿಗೆ ಬಳಸಬಹುದು.

ಈ ಲೇಖನದಲ್ಲಿ, ನೀವು ಪ್ಯಾನ್ (PAN) ಕಾರ್ಡ್ ಏಕೆ ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ಯಾನ್ (PAN) ಕಾರ್ಡ್ ಅರ್ಥ, ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಚರ್ಚಿಸುತ್ತೇವೆ.

ಭಾರತದಲ್ಲಿ ಪ್ಯಾನ್ (PAN) ಕಾರ್ಡಿನ ಇತಿಹಾಸ

ತೆರಿಗೆ ಕಾಯ್ದೆಯ (ತಿದ್ದುಪಡಿ) ಭಾಗವಾಗಿ 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A ಅಡಿಯಲ್ಲಿ ಸರ್ಕಾರವು ಪ್ಯಾನ್ (PAN) ಕಾರ್ಡನ್ನು 1972 ರಲ್ಲಿ ಪರಿಚಯಿಸಿತು. ಪ್ಯಾನ್ (PAN) ಗಿಂತ ಮೊದಲು, ತೆರಿಗೆದಾರರಿಗೆ ಜಿ ಐ ಆರ್ (GIR) ನಂಬರ್‌ಗಳನ್ನು ನೀಡಲಾಗಿತ್ತು. ಆದರೆ ಇದು ಕೇಂದ್ರೀಕೃತ ವ್ಯವಸ್ಥೆಯಾಗಿರಲಿಲ್ಲ ಮತ್ತು ತಪ್ಪು ಲೆಕ್ಕಾಚಾರಗಳು ಮತ್ತು ತಪ್ಪುಗಳಿಗೆ ಗುರಿಯಾಗಿತ್ತು. ಆರಂಭದಲ್ಲಿ, ಪ್ಯಾನ್ (PAN) ಐಚ್ಛಿಕವಾಗಿತ್ತು, ಮತ್ತು 1976 ವರೆಗೆ ಅದನ್ನು ಕಡ್ಡಾಯಗೊಳಿಸಲಾಗಿಲ್ಲ.

ಆರಂಭದಲ್ಲಿ, ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್ (NSDL)) ಮತ್ತು ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ (ಯು ಟಿ ಐ (UTI)) ಎರಡೂ ಪ್ರಕ್ರಿಯೆ ಪ್ಯಾನ್ (PAN) ಕಾರ್ಡ್‌ಗಳನ್ನು ಪ್ರಕ್ರಿಯೆಗೊಳಿಸಬಹುದಾಗಿತ್ತು . ಆದರೆ 2003 ರಲ್ಲಿ, ಜವಾಬ್ದಾರಿಯನ್ನು ಎನ್ ಎಸ್ ಡಿ ಎಲ್ (NSDL) ಗೆ ನೀಡಲಾಯಿತು.

ಆ ನಂತರ ವರ್ಷಗಳಲ್ಲಿ, ವ್ಯಕ್ತಿಗಳು ಮತ್ತು ಬಿಸಿನೆಸ್‌ಗಳಿಗೆ ವ್ಯಾಪಕ ಶ್ರೇಣಿಯ ಹಣಕಾಸು ಟ್ರಾನ್ಸಾಕ್ಷನ್‌ಗಳನ್ನು ನಡೆಸಲು ಪ್ಯಾನ್ (PAN) ಅಗತ್ಯವಾಗಿದೆ. ಪ್ಯಾನ್ (PAN) ಕಾರ್ಡ್‌ಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು, ಸರ್ಕಾರವು ಆನ್ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳನ್ನು ಪರಿಚಯಿಸಿದೆ.

ಪ್ಯಾನ್ (PAN) ನಂಬರ್ ಫಾರ್ಮ್ಯಾಟ್

ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯುವುದು, ಸ್ಥಿರ ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಮತ್ತು ಕ್ರೆಡಿಟ್ ಕಾರ್ಡ್ ಅಥವಾ ಲೋನಿಗೆ ಅಪ್ಲೈ ಮಾಡುವುದು ಮುಂತಾದ ವಿವಿಧ ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ನಡೆಸಲು ಪ್ಯಾನ್ (PAN) ಅಗತ್ಯವಿದೆ. ಇದಲ್ಲದೆ, ಇದು ವಿಶಿಷ್ಟ ಗುರುತಿನ ಪುರಾವೆಯಾಗಿದೆ ಮತ್ತು ತೆರಿಗೆ ಅನುಸರಣೆಗೆ ಸಹಾಯ ಮಾಡುತ್ತದೆ. ನಿಮ್ಮ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಐಟಿ (IT) ಇಲಾಖೆಯು ಪ್ಯಾನ್ (PAN) ನಂಬರ್ ಬಳಸುತ್ತದೆ, ಇದು ತೆರಿಗೆದಾರರ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆದ್ದರಿಂದ, ನೀವು ಪ್ಯಾನ್ (PAN) ಕಾರ್ಡಿನ ಫಾರ್ಮ್ಯಾಟ್ ಅನ್ನು ಅರ್ಥಮಾಡಿಕೊಳ್ಳಬೇಕು.

ನಿಮ್ಮ ಪ್ಯಾನ್ (PAN) ಕಾರ್ಡ್ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿದೆ.

  • ಕಾರ್ಡ್‌ಹೋಲ್ಡರ್‌ನ ಪೂರ್ಣ ಹೆಸರು
  • ಕಾರ್ಡ್‌ಹೋಲ್ಡರ್‌ನ ತಂದೆಯ ಹೆಸರು
  • ಪ್ಯಾನ್ (PAN) ಕಾರ್ಡ್ ಸಂಖ್ಯೆ: ಇದು ಅಕ್ಷರಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ 10-ಅಂಕಿಯ ಸಂಖ್ಯೆಯಾಗಿದೆ
  • ಕಾರ್ಡ್‌ಹೋಲ್ಡರ್‌ನ ಸಹಿ: ಪ್ಯಾನ್ (PAN) ಕಾರ್ಡ್ ಕಾರ್ಡುದಾರರ ಸಹಿಯ ಪರಿಶೀಲನೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಹಣಕಾಸಿನ ವಹಿವಾಟುಗಳಿಗೆ ಅವಶ್ಯಕವಾಗಿದೆ
  • ಕಾರ್ಡ್‌ಹೋಲ್ಡರ್‌ನ ಫೋಟೋ: ವೈಯಕ್ತಿಕ ಪ್ಯಾನ್ (PAN) ಕಾರ್ಡ್‌ಗಳು ವಿಶುಯಲ್  ಪರಿಶೀಲನೆಯಾಗಿ ಕೂಡ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ನಿಗಮಗಳು ಮತ್ತು ಸಂಸ್ಥೆಗಳಿಗೆ ನೀಡಲಾದ ಪ್ಯಾನ್ (PAN) ಗಳು ಫೋಟೋಗಳನ್ನು ಹೊಂದಿರುವುದಿಲ್ಲ
  • ಹುಟ್ಟಿದ ದಿನಾಂಕ
  • ಭಾರತ ಸರ್ಕಾರದ ಹೋಲೋಗ್ರಾಮ್ ಮತ್ತು ಆದಾಯ ತೆರಿಗೆ ಇಲಾಖೆಯ ಟ್ಯಾಗ್

ಪ್ಯಾನ್ (PAN) ಕಾರ್ಡ್ ಸಂಖ್ಯೆಯನ್ನು ಡಿಕೋಡ್ ಮಾಡುವುದು

ಈ ಮೊದಲು ನಮೂದಿಸಿದಂತೆ, ಪ್ಯಾನ್ (PAN) ಕಾರ್ಡ್ ತೆರಿಗೆದಾರರಿಗೆ ವಿಶಿಷ್ಟವಾದ ಅಕ್ಷರಸಂಖ್ಯಾತ್ಮಕ ರಚನೆಯನ್ನು ಹೊಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನಿಮ್ಮ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ವಿವರಗಳನ್ನು ಪ್ಯಾನ್ (PAN) ಕಾರ್ಡ್ ನಂಬರ್ ಒಳಗೊಂಡಿದೆ.

  • ಪ್ಯಾನ್ ಕಾರ್ಡ್ 10 ಅಂಕಿಗಳನ್ನು ಹೊಂದಿದೆ, ಇದರಲ್ಲಿ ಮೊದಲ ಮೂರು ವರ್ಣಮಾಲೆಗಳಾಗಿವೆ.
  • ನಾಲ್ಕನೇ ಅಕ್ಷರವು ತೆರಿಗೆದಾರರ ವರ್ಗವನ್ನು ಖಚಿತಪಡಿಸುತ್ತದೆ
  • ಐದನೇ ಅಕ್ಷರವು ತೆರಿಗೆದಾರರ ಸರ್‌ನೇಮ್ ಅನ್ನು ಸೂಚಿಸುತ್ತದೆ
  • ಉಳಿದ ಸಂಖ್ಯೆಗಳು ಮತ್ತು ಅಕ್ಷರವನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ

ತೆರಿಗೆದಾರರ ವರ್ಗಗಳ ಪಟ್ಟಿ ಇಲ್ಲಿದೆ.

  • ಎ – ಅಸೋಸಿಯೇಷನ್ ಆಫ್ ಪರ್ಸನ್ಸ್
  • ಬಿ – ಬಾಡಿ ಆಫ್ ಇಂಡಿವಿಜುವಲ್ಸ್
  • ಸಿ – ಕಂಪನಿ
  • ಎಫ್ – ಸಂಸ್ಥೆಗಳು
  • ಜಿ – ಸರ್ಕಾರ
  • ಎಚ್ – ಹಿಂದೂ ಅವಿಭಕ್ತ ಕುಟುಂಬ
  • ಎಲ್ – ಸ್ಥಳೀಯ ಪ್ರಾಧಿಕಾರ
  • ಜೆ – ಕೃತಕ ನ್ಯಾಯಿಕ ವ್ಯಕ್ತಿ
  • ಪಿ – ವೈಯಕ್ತಿಕ
  • ಟಿ – ಅಸೋಸಿಯೇಷನ್ ಆಫ್ ಪರ್ಸನ್ಸ್ ಫಾರ್ ಎ ಟ್ರಸ್ಟ್

ಪ್ಯಾನ್ (PAN) ಕಾರ್ಡಿಗೆ ಯಾರು ಅಪ್ಲೈ ಮಾಡಬಹುದು?

ಎಲ್ಲಾ ರೀತಿಯ ತೆರಿಗೆದಾರರಿಗೆ ಪ್ಯಾನ್ (PAN) ಲಭ್ಯವಿದೆ. ಪ್ಯಾನ್ (PAN) ಕಾರ್ಡ್‌ಗಳನ್ನು ನೀಡಲಾದ ಘಟಕಗಳ ಪಟ್ಟಿ ಈ ಕೆಳಗಿನಂತಿದೆ.

  • ಕಡಿಮೆ ಆದಾಯ ತೆರಿಗೆ ಮಿತಿಯನ್ನು ಮೀರಿದ ಎಲ್ಲಾ ವೈಯಕ್ತಿಕ ತೆರಿಗೆದಾರರು ಪ್ಯಾನ್ (PAN) ಕಾರ್ಡಿಗೆ ಅರ್ಹರಾಗಿರುತ್ತಾರೆ. ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ನಡೆಸಲು ಇದು ಕಡ್ಡಾಯವಾಗಿದೆ.
  • ರೂ. 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವ ವೃತ್ತಿ ಅಥವಾ ವ್ಯವಹಾರವನ್ನು ಹೊಂದಿರುವ ವ್ಯಕ್ತಿಗಳು
  • ರಾಜ್ಯದ ಮಾರಾಟ ತೆರಿಗೆ ಕಾನೂನುಗಳು ಅಥವಾ ಕೇಂದ್ರ ಮಾರಾಟ ತೆರಿಗೆ ಕಾಯ್ದೆಯಡಿ ನೋಂದಣಿಯಾಗಿರುವ ವ್ಯಕ್ತಿಗಳು
  • ಅಬಕಾರಿ ತೆರಿಗೆಗಳನ್ನು ಪಾವತಿಸಲು ಜವಾಬ್ದಾರರಾಗಿರುವ ವ್ಯಕ್ತಿಗಳು
  • ನಿಯಮ 57AE ಪ್ರಕಾರ ಇನ್ವಾಯ್ಸ್‌ಗಳನ್ನು ನೀಡುವ ವ್ಯಕ್ತಿಗಳು
  • ಟಿಡಿಎಸ್ (TDS) ಅನ್ನು ತಮ್ಮ ಆದಾಯದಿಂದ ಕಡಿತಗೊಳಿಸಿದ ನಂತರ ತೆರಿಗೆ ರಿಟರ್ನ್ಸ್ ಕ್ಲೈಮ್ ಮಾಡಲು ಅರ್ಹರಾಗಿರುವ ವ್ಯಕ್ತಿಗಳು
  • ಹಿಂದೂ ಅವಿಭಕ್ತ ಕುಟುಂಬಗಳು (ಎಚ್‌ಯುಎಫ್‌ (HUF)ಗಳು)
  • ಆಮದು ಮತ್ತು ರಫ್ತುಗಳಲ್ಲಿ ತೊಡಗಿರುವ ಘಟಕಗಳು
  • ಕಂಪನಿ ಕಾಯ್ದೆಯಡಿ ನೋಂದಾಯಿತ ಕಂಪನಿಗಳು
  • ಸಂಸ್ಥೆಗಳು ಮತ್ತು ಪಾಲುದಾರಿಕೆಗಳು
  • ತೆರಿಗೆ ಪಾವತಿಸಲು ಅರ್ಹವಾದ ಟ್ರಸ್ಟ್‌ಗಳು
  • ಸೊಸೈಟಿಗಳು
  • ಭಾರತದಲ್ಲಿ ತೆರಿಗೆ ವಿಧಿಸಬಹುದಾದ ಆದಾಯ ಹೊಂದಿರುವ ಎನ್‌ಆರ್‌ಐ (NRI)ಗಳು
  • ಭಾರತದಲ್ಲಿ ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ನಡೆಸಲು ಯೋಜಿಸುವ ವಿದೇಶಿಗಳು ಪ್ಯಾನ್ (PAN) ಕಾರ್ಡ್‌ಗಳಿಗೆ ಕೂಡ ಅಪ್ಲೈ ಮಾಡಬಹುದು.

ಪ್ಯಾನ್ (PAN) ಕಾರ್ಡ್ ಏಕೆ ಮುಖ್ಯವಾಗಿದೆ?

ನೀವು ಪ್ಯಾನ್ ಕಾರ್ಡ್ ಏಕೆ ಪಡೆಯಬೇಕು ಎಂಬುದಕ್ಕೆ ಕಾರಣಗಳ ಪಟ್ಟಿ ಇಲ್ಲಿದೆ.

ಬ್ಯಾಂಕಿಂಗ್: ಬ್ಯಾಂಕಿಂಗ್ ಒಂದು ವಲಯವಾಗಿದ್ದು, ಇಲ್ಲಿ ಪ್ಯಾನ್ (PAN) ಕಾರ್ಡನ್ನು ತುಂಬಾ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಅಕೌಂಟ್ ತೆರೆಯುವುದರಿಂದ ಹಿಡಿದು ಇತರೆ ಬ್ಯಾಂಕಿಂಗ್ ಚಟುವಟಿಕೆಗಳವರೆಗೆ ಬ್ಯಾಂಕಿಂಗ್ ಕೆಲಸಗಳಿಗೆ ಪ್ಯಾನ್ (PAN) ಕಾರ್ಡ್ ಅಗತ್ಯ ಡಾಕ್ಯುಮೆಂಟ್ ಆಗಿದೆ. ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ವಂಚನೆ ಮತ್ತು ಹಣ ಪರಿಚಯ ಚಟುವಟಿಕೆಗಳನ್ನು ತಡೆಗಟ್ಟಲು ಪ್ಯಾನ್ (PAN) ಅಗತ್ಯವಿದೆ. ಪ್ರತಿದಿನ ರೂ. 50,000 ಕ್ಕಿಂತ ಹೆಚ್ಚಿನ ಡೆಪಾಸಿಟ್‌ಗೆ ಪ್ಯಾನ್ (PAN) ಸಲ್ಲಿಕೆ ಅಗತ್ಯವಿದೆ. ರೂ. 50,000 ಅಥವಾ ಅದಕ್ಕಿಂತ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್ ಬುಕ್ ಮಾಡಲು ಪ್ಯಾನ್ (PAN) ಕಾರ್ಡ್ ಸಲ್ಲಿಕೆಯ ಅಗತ್ಯವಿದೆ.

ಡೆಬಿಟ್/ಕ್ರೆಡಿಟ್ ಕಾರ್ಡ್: ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವಾಗ ನಿಮ್ಮ ಪ್ಯಾನ್ (PAN) ಕಾರ್ಡಿನ ಪ್ರತಿಯನ್ನು ನೀವು ಸಲ್ಲಿಸಬೇಕು.

ಲೋನ್ ಅಪ್ಲಿಕೇಶನ್: ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು ಪ್ಯಾನ್ ಅಗತ್ಯವಿದೆ.

ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು: ಆಸ್ತಿ ಮೌಲ್ಯವು ರೂ. 5 ಲಕ್ಷಕ್ಕಿಂತ ಹೆಚ್ಚಿದ್ದರೆ, ಖರೀದಿದಾರ ಮತ್ತು ಮಾರಾಟಗಾರರ ಪ್ಯಾನ್ (PAN) ಕಾರ್ಡ್ ವಿವರಗಳು ಕಡ್ಡಾಯವಾಗಿವೆ. ಎಲ್ಲಾ ರೀತಿಯ ಆಸ್ತಿ ವಹಿವಾಟುಗಳು, ಖರೀದಿ ಮತ್ತು ಮಾರಾಟಕ್ಕೆ ಇದು ಅಗತ್ಯವಾಗಿದೆ.

ಆಭರಣ ಖರೀದಿ: ರೂ. 5 ಲಕ್ಷಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮೌಲ್ಯದ ಆಭರಣಗಳನ್ನು ಖರೀದಿಸಲು ಪ್ಯಾನ್ (PAN) ಕಾರ್ಡ್ ಅಗತ್ಯವಿದೆ.

ಪೋಸ್ಟ್ ಆಫೀಸ್ ಡೆಪಾಸಿಟ್: ₹ 50,000 ಕ್ಕಿಂತ ಹೆಚ್ಚಿನ ಪೋಸ್ಟ್ ಆಫೀಸ್ ಡೆಪಾಸಿಟ್‌ಗಳಿಗೆ ಪ್ಯಾನ್ (PAN) ಕಾರ್ಡ್ ಸಲ್ಲಿಸಬೇಕಾಗುತ್ತದೆ.

ವಾಹನವನ್ನು ಖರೀದಿಸುವುದು: ಟೂ ವೀಲರ್‌ಗಳನ್ನು ಖರೀದಿಸುವುದನ್ನು ಹೊರತುಪಡಿಸಿ, ವಾಹನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಪ್ಯಾನ್ (PAN) ಕಾರ್ಡ್ ಮಾಹಿತಿ ಅಗತ್ಯವಿದೆ.

ಡಿಮ್ಯಾಟ್ ಅಕೌಂಟ್ ತೆರೆಯುವುದು: ಸ್ಟಾಕ್ ಮಾರುಕಟ್ಟೆ, ಬಾಂಡ್‌ಗಳು, ಡಿಬೆಂಚರ್‌ಗಳು ಅಥವಾ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು, ಹೂಡಿಕೆದಾರರು ಡಿಮ್ಯಾಟ್ ಅಕೌಂಟ್ ತೆರೆಯಬೇಕು. ಡಿಮ್ಯಾಟ್ ಅಕೌಂಟ್ ತೆರೆಯಲು ಪ್ಯಾನ್ (PAN) ಕಾರ್ಡ್ ಕಡ್ಡಾಯವಾಗಿದೆ.

ಇನ್ಶೂರೆನ್ಸ್ ಪ್ರೀಮಿಯಂ: ಒಂದು ಹಣಕಾಸು ವರ್ಷದಲ್ಲಿ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಯು ₹ 50,000 ಮೀರಿದರೆ, ಪ್ಯಾನ್ (PAN) ಕಾರ್ಡ್ ಸಲ್ಲಿಕೆ ಅಗತ್ಯವಿದೆ.

ವಿದೇಶಿ ಕರೆನ್ಸಿ ವಿನಿಮಯ: ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್‌ಗಳಿಗೆ ಪ್ಯಾನ್ (PAN) ಕಾರ್ಡ್ ಅಗತ್ಯವಿದೆ.

ಉದ್ಯೋಗ: ಹೆಚ್ಚಿನ ಉದ್ಯೋಗದಾತರಿಗೆ ಸಂಬಳ ಲೆಕ್ಕಪತ್ರ ಮತ್ತು ತೆರಿಗೆ ಪ್ರಕ್ರಿಯೆಗಾಗಿ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ.

ಪ್ಯಾನ್ (PAN) ಕಾರ್ಡಿನ ಪ್ರಯೋಜನಗಳು

ಪ್ಯಾನ್ (PAN) ಕಾರ್ಡ್ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ.

ಗುರುತಿನ ಪುರಾವೆ: ಪ್ಯಾನ್ (PAN) ಕಾರ್ಡ್ ಒಂದು ವಿಶಿಷ್ಟ ಗುರುತಿನ ಡಾಕ್ಯುಮೆಂಟ್ ಆಗಿದೆ. ಇದು ಕಾರ್ಡ್‌ಹೋಲ್ಡರ್‌ನ ಸಹಿಯನ್ನು ಒಳಗೊಂಡಿದೆ, ಇದು ಹಣಕಾಸಿನ ಟ್ರಾನ್ಸಾಕ್ಷನ್‌ಗಳ ಸಮಯದಲ್ಲಿ ಸಹಿ ಪರಿಶೀಲನೆಯನ್ನು ಸುಲಭಗೊಳಿಸುತ್ತದೆ.

ಐಟಿ (IT) ರಿಟರ್ನ್ ಫೈಲ್ ಮಾಡುವುದು: ಆದಾಯ ತೆರಿಗೆ ಫೈಲ್ ಮಾಡಲು ವ್ಯಕ್ತಿಗಳು ಮತ್ತು ಘಟಕಗಳಿಗೆ ಪ್ಯಾನ್ ಕಾರ್ಡ್‌ಗಳ ಅಗತ್ಯವಿದೆ.

ತೆರಿಗೆ ಕಡಿತ: ಪ್ಯಾನ್ ಕಾರ್ಡ್ ತೆರಿಗೆ ಅನುಸರಣೆಯನ್ನು ಪೂರೈಸಲು ಸಹಾಯ ಮಾಡುತ್ತದೆ.

ಆದಾಯ ತೆರಿಗೆ ರಿಟರ್ನ್‌ಗಳನ್ನು ಕ್ಲೈಮ್ ಮಾಡುವುದು: ಕೆಲವೊಮ್ಮೆ ತೆರಿಗೆದಾರರ ಆದಾಯದ ಮೂಲದಿಂದ ಅರ್ಹ ಮಿತಿಗಿಂತ ಹೆಚ್ಚಿನ ಟಿಡಿಎಸ್ (TDS) ಅನ್ನು ಕಡಿತಗೊಳಿಸಲಾಗುತ್ತದೆ. ಐಟಿಆರ್ (ITR) ಫೈಲ್ ಮಾಡಲು ಮತ್ತು ತೆರಿಗೆ ರಿಫಂಡ್ ಕ್ಲೈಮ್ ಮಾಡಲು ಪ್ಯಾನ್ (PAN) ಕಾರ್ಡ್ ಕಡ್ಡಾಯವಾಗಿದೆ.

ಬಿಸಿನೆಸ್ ಆರಂಭಿಸುವುದು: ಬಿಸಿನೆಸ್ ಆರಂಭಿಸಲು, ಕಂಪನಿ ಅಥವಾ ಬಿಸಿನೆಸ್‌ಗೆ ಕಡ್ಡಾಯವಾಗಿ ಪ್ಯಾನ್ (PAN) ಕಾರ್ಡ್ ಅಗತ್ಯವಿದೆ.

ಅಂತಿಮ ಪದಗಳು

ಪ್ಯಾನ್ (PAN) ಕಾರ್ಡ್ ಮೌಲ್ಯಯುತ ಡಾಕ್ಯುಮೆಂಟ್ ಆಗಿದೆ. ಆದ್ದರಿಂದ, ದೇಶದ ಆದಾಯ ತೆರಿಗೆ ನಿಯಮಾವಳಿಗಳನ್ನು ಅನುಸರಿಸಲು ಪ್ರತಿಯೊಬ್ಬ ಅರ್ಹ ವ್ಯಕ್ತಿಯು ಪ್ಯಾನ್ (PAN) ಕಾರ್ಡ್ ಪಡೆಯಬೇಕು. ನೀವು ಪ್ಯಾನ್ (PAN) ಕಾರ್ಡ್ ಒದಗಿಸಲು ವಿಫಲವಾದರೆ ನಿಮ್ಮ ಹಣಕಾಸಿನ ಚಟುವಟಿಕೆಗಳನ್ನು ನಿರ್ಬಂಧಿಸಬಹುದು ಮತ್ತು ಐಟಿ (IT) ಇಲಾಖೆಯಿಂದ ವಿಚಾರಣೆಗಳಿಗೆ ಕಾರಣವಾಗಬಹುದು. ಅದರ ಅರ್ಥ ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳುವುದರಿಂದ, ನೀವು ನಿಮ್ಮ ಪ್ಯಾನ್ (PAN) ಕಾರ್ಡನ್ನು ಜಾಣತನದಿಂದ ಬಳಸಬಹುದು.

FAQs

PAN(ಪಿಎಎನ್‌) ಕಾರ್ಡ್ ಎಂದರೇನು?

PAN(ಪಿಎಎನ್‌) ಕಾರ್ಡ್ ಭಾರತೀಯ ತೆರಿಗೆದಾರರಿಗೆ ಮತ್ತು ದೃಢೀಕರಣ ಡಾಕ್ಯುಮೆಂಟ್ ಆಗಿ PAN(ಪಿಎಎನ್‌) ಕಾರ್ಡ್ ಅಗತ್ಯವಿರಬಹುದಾದ ಹಣಕಾಸಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯಾರಿಗಾದರೂ ನೀಡಬಹುದಾದ ಫಿಸಿಕಲ್ ಕಾರ್ಡ್ ಆಗಿದೆ. PAN(ಪಿಎಎನ್‌) ಕಾರ್ಡ್ ಗುರುತಿನ ಡಾಕ್ಯುಮೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತೆರಿಗೆದಾರರಿಗೆ ತೆರಿಗೆ ಅನುಸರಣೆಯನ್ನು ಪೂರೈಸಲು ಸಹಾಯ ಮಾಡುತ್ತದೆ.

PAN(ಪಿಎಎನ್‌)ಕಾರ್ಡ್ ಬಳಸುವುದು ಹೇಗೆ?

ಕೆಳಗಿನವುಗಳಿಗೆ PAN(ಪಿಎಎನ್‌) ಕಾರ್ಡ್ಗಳನ್ನು ಬಳಸಬಹುದು.

  • ಗುರುತಿನ ಪುರಾವೆಯಾಗಿ
  • ವಿಳಾಸದ ಪುರಾವೆಯಾಗಿ
  • ಬಿಸಿನೆಸ್ಗಾಗಿ ನೋಂದಣಿ ಮಾಡಲು
  • ಐಟಿ(IT) ಫೈಲಿಂಗ್ ಮತ್ತು ಐಟಿ(IT) ರಿಟರ್ನ್ ಕ್ಲೈಮ್ ಮಾಡುವುದು
  • ಸ್ಥಿರ ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು
  • ಬ್ಯಾಂಕ್ ಅಕೌಂಟ್ಗಳನ್ನು ತೆರೆಯುವುದು, ಲೋನ್ ಪ್ರಕ್ರಿಯೆ ಮತ್ತು ಹೂಡಿಕೆ

ಹಣಕಾಸಿನ ಟ್ರಾನ್ಸಾಕ್ಷನ್ಗಳು

PAN(ಪಿಎಎನ್‌) ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ?

ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು PAN(ಪಿಎಎನ್‌) ಕಾರ್ಡಿಗೆ ಅಪ್ಲೈ ಮಾಡಬಹುದು.

  • ಅಧಿಕೃತ PAN(ಪಿಎಎನ್‌) ಕಾರ್ಡ್ ಪೋರ್ಟಲ್ಗಳಿಗೆ ಭೇಟಿ ನೀಡುವುದು – NSDL(ಎನ್ಎಸ್ಡಿಎಲ್‌) ಅಥವಾ UTIITSL(ಯುಟಿಐಐಟಿಎಸ್ಎಲ್‌) ವೆಬ್ಸೈಟ್ಗಳು
  • 49A ಫಾರ್ಮ್ ಭರ್ತಿ ಮಾಡಿ (ಭಾರತೀಯ ನಿವಾಸಿಗಳಿಗೆ) ಅಥವಾ 49AA (NRI) (ಎನ್ಆರ್) ಮತ್ತು ವಿದೇಶಿ ಅರ್ಜಿದಾರರು)
  • ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ 
  • ನೀವು ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ

ನೀವು 15 ದಿನಗಳಲ್ಲಿ PAN(ಪಿಎಎನ್‌) ಕಾರ್ಡ್ ಪಡೆಯುತ್ತೀರಿ.

PAN(ಪಿಎಎನ್‌) ಕಾರ್ಡಿನಲ್ಲಿ ಎಷ್ಟು ಅಂಕಿಗಳಿವೆ?

PAN(ಪಿಎಎನ್‌) ಕಾರ್ಡ್ ನಂಬರ್ 10 ಅಂಕಿಗಳನ್ನು ಹೊಂದಿದೆ. PAN(ಪಿಎಎನ್‌) ನಂಬರ್ ಅಕ್ಷರ ಸಂಖ್ಯಾತ್ಮಕವಾಗಿದೆ, ಅದರರ್ಥ ಅಲ್ಪಾಬೆಟ್‌ಗಳು ಮತ್ತು ಸಂಖ್ಯೆಗಳ ಸಂಯೋಜನೆಯಾಗಿದೆ.