ಯುಎಎನ್ (UAN) ಸದಸ್ಯ ಪೋರ್ಟಲ್ ಬಗ್ಗೆ ಎಲ್ಲಾ ವಿವರಗಳು

1 min read
by Angel One
EN

ಯುಎಎನ್ (UAN) ಸದಸ್ಯ ಪೋರ್ಟಲ್ ಪಿಎಫ್ (PF) ಅಕೌಂಟ್ಗಳನ್ನು ನಿರ್ವಹಿಸುವುದು, ಕೆವೈಸಿ (KYC) ಅಪ್ಡೇಟ್ಗಳು, ವಿತ್ಡ್ರಾವಲ್ಗಳು ಮತ್ತು ಸ್ಟೇಟಸ್ ಪರಿಶೀಲನೆಗಳನ್ನು ಒಳಗೊಂಡಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಯುಎಎನ್ (UAN) ಪೋರ್ಟಲ್ ಬಗ್ಗೆ ಎಲ್ಲವನ್ನೂ ತಿಳಿಯಿರಿ.

ಉದ್ಯೋಗಿಗಳ ಯುಎಎನ್ (UAN) ನಂಬರ್ ಒಂದು ವಿಶಿಷ್ಟ 12-ಅಂಕಿಯ ನಂಬರ್ ಆಗಿದ್ದು, ಇದನ್ನು ಉದ್ಯೋಗಿಗಳು ತಮ್ಮ ಪಿಎಫ್ (PF) ಅಕೌಂಟಿಗೆ ಕೊಡುಗೆ ನೀಡಲು ಆರಂಭಿಸಿದಾಗ ಪಿಎಫ್ (PF) ಕಚೇರಿಯಿಂದ ನಿಯೋಜಿಸಲಾಗುತ್ತದೆ. ಈ ಮೊದಲು, ಪಿಎಫ್ (PF) ಅಕೌಂಟ್ ತೆರೆಯುವುದು, ನಿರ್ವಹಣೆ ಮತ್ತು ಟ್ರ್ಯಾಕಿಂಗ್ ಪ್ರಕ್ರಿಯೆಯು ಸಮಯ ತೆತೆಗೆದುಕೊಂಡ ಕಾರಣ ಅನೇಕ ಸಂದರ್ಭಗಳಲ್ಲಿ ಜನರು ಅನುಸರಣೆ ಮಾಡುತ್ತಿರಲಿಲ್ಲ.

ಯುಎಎನ್ (UAN) ನಂಬರ್ ಮತ್ತು ಯುಎಎನ್ (UAN) ಸದಸ್ಯತ್ವ ಪೋರ್ಟಲ್ ಅನ್ನು ಪರಿಚಯಿಸಿರುವುದರಿಂದ ವ್ಯವಸ್ಥೆಯನ್ನು ಕೇಂದ್ರೀಕರಿಸಲು ಮತ್ತು ಸರಳಗೊಳಿಸಲು ಸಹಾಯ ಮಾಡಿದೆ. ಈಗ, ಉದ್ಯೋಗಿಗಳಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವಿಶಿಷ್ಟ ಯುಎಎನ್ (UAN) ನಂಬರ್ ನೀಡುತ್ತದೆ. ಉದ್ಯೋಗಿಗಳು ತಮ್ಮ ವೃತ್ತಿಪರ ಅವಧಿಯಲ್ಲಿ ಕೇವಲ ಒಂದು ಯುಎಎನ್ (UAN) ನಂಬರನ್ನು ಹೊಂದಬಹುದು. ಇದನ್ನು ಎಲ್ಲಾ ಇಪಿಎಫ್ (EPF) ಅಕೌಂಟ್‌ಗಳನ್ನು ಏಕೀಕರಿಸಲು ಮತ್ತು ಸುಲಭ ಅಕ್ಸೆಸ್ ಒದಗಿಸಲು ಬಳಸಲಾಗುತ್ತದೆ.

ನಿಮ್ಮ ಇಪಿಎಫ್ (EPF) ಅಕೌಂಟ್ ಮತ್ತು ಸೇವೆಗಳನ್ನು ಅಕ್ಸೆಸ್ ಮಾಡಲು ಯುಎಎನ್ (UAN) ಸದಸ್ಯ ಇ-ಸೇವಾ ಪೋರ್ಟಲ್ ಒನ್-ಸ್ಟಾಪ್ ತಾಣವಾಗಿದೆ. ಈ ಲೇಖನದಲ್ಲಿ, ನಾವು ಇಪಿಎಫ್‌ಒ (EPFO) ಸದಸ್ಯ ಪೋರ್ಟಲ್‌ನ ವಿವಿಧ ಅಂಶಗಳನ್ನು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಅನ್ವೇಷಿಸುತ್ತೇವೆ.

ಯುಎಎನ್ (UAN) ಸದಸ್ಯ ಪೋರ್ಟಲ್ ಎಂದರೇನು?

ಇ-ಸೇವಾ ಆನ್ಲೈನ್ ಪೋರ್ಟಲ್‌ನಲ್ಲಿ, ಬಳಕೆದಾರರು ತಮ್ಮ ಪಿಎಫ್ (PF) ಕೊಡುಗೆಗಳಿಗೆ ಸಂಬಂಧಿಸಿದ ವಿವಿಧ ಸೇವೆಗಳು ಮತ್ತು ಮಾಹಿತಿಯನ್ನು ಅಕ್ಸೆಸ್ ಮಾಡಬಹುದು ಮತ್ತು ಬ್ಯಾಲೆನ್ಸ್ ಮಾಹಿತಿಯನ್ನು ಪರಿಶೀಲಿಸುವುದು, ಹಿಂದಿನ ಉದ್ಯೋಗದಾತರ ವಿವರಗಳು, ಕೆವೈಸಿ (KYC0 ವಿವರಗಳನ್ನು ಅಪ್ಡೇಟ್ ಮಾಡುವುದು, ವಿತ್‌ಡ್ರಾವಲ್ ಕೋರಿಕೆಗಳನ್ನು ಸಲ್ಲಿಸುವುದು ಮುಂತಾದ ಚಟುವಟಿಕೆಗಳನ್ನು ನಡೆಸಬಹುದು. ಈ ಪೋರ್ಟಲ್ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಲಭ್ಯವಿದೆ.

ಯಾವುದೇ ಸಂಸ್ಥೆಯು 20 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಅವರು ಆನ್ಲೈನ್ ಇಪಿಎಫ್‌ಒ (EPFO) ಯುಎಎನ್ (UAN) ನೋಂದಣಿ ಪ್ರಕ್ರಿಯೆಗೆ ಒಳಪಡಬೇಕು. ಇದು ಭವಿಷ್ಯದ ಬಳಕೆಗಾಗಿ ಪಾಸ್ವರ್ಡ್ ಮತ್ತು ವಿಶಿಷ್ಟ ಬಳಕೆದಾರ ಐಡಿ (ID)ಯನ್ನು ಜನರೇಟ್ ಮಾಡುವುದನ್ನು ಒಳಗೊಂಡಿರುತ್ತದೆ.

ಸೇವೆಗಳನ್ನು ಅಕ್ಸೆಸ್ ಮಾಡಲು ಉದ್ಯೋಗಿಗಳು ಇಪಿಎಫ್ (EPF) ಇ-ಸೇವಾ ಪೋರ್ಟಲ್‌ನಲ್ಲಿ ತಮ್ಮ ಅಕೌಂಟ್‌ಗಳನ್ನು ನೋಂದಾಯಿಸಬೇಕು ಮತ್ತು ಲಾಗಿನ್ ಮಾಡಬೇಕು.

ಈ ಕೆಳಗಿನವುಗಳಿಗಾಗಿ ನೀವು ಇ-ಸೇವಾ ಪೋರ್ಟಲ್ ಬಳಸಬಹುದು.

  • ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಕೆವೈಸಿ (KYC) ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡುವುದು ಮತ್ತು ಮಾರ್ಗಸೂಚಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು
  • ಇಪಿಎಫ್ (EPF) ಕೊಡುಗೆಗಳಿಗೆ ಪಾವತಿಗಳನ್ನು ಮಾಡಲು ನಿಮ್ಮ ಬಿಸಿನೆಸ್ ಮತ್ತು ಉದ್ಯೋಗಿಗಳ ಬಗ್ಗೆ ವಿವರಗಳನ್ನು ಅಪ್ಡೇಟ್ ಮಾಡಲಾಗುತ್ತದೆ
  • ಇಪಿಎಫ್‌ (EPF) ಅಕೌಂಟ್‌ನ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡುವುದು

ಸೇವಾ ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆ

ಎಲ್ಲಾ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ತನ್ನ ಸೇವೆಗಳನ್ನು ಅಕ್ಸೆಸ್ ಮಾಡಲು ಇಪಿಎಫ್‌ಒ (EPFO) ಸದಸ್ಯ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಉದ್ಯೋಗಿ ನೋಂದಣಿ

ಉದ್ಯೋಗಿಗಳ ಆನ್ಲೈನ್ ಇ-ಸೇವಾ ಪೋರ್ಟಲ್ ಅವರಿಗೆ ಕೆವೈಸಿ (KYC) ನೋಂದಣಿ, ಪರಿಶೀಲಿಸಲು, ಯುಎಎನ್ (UAN) ಕಾರ್ಡ್‌ಗಳನ್ನು ಅಕ್ಸೆಸ್ ಮಾಡಲು, ಫಂಡ್‌ಗಳನ್ನು ವಿತ್‌ಡ್ರಾ ಮಾಡಲು ಮತ್ತು ಆನ್ಲೈನಿನಲ್ಲಿ ಪಿಂಚಣಿಗೆ ಅಪ್ಲೈ ಮಾಡಲು ಅನುಮತಿ ನೀಡುತ್ತದೆ. ಮೊದಲ ಬಾರಿಯ ಬಳಕೆದಾರರು ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ತಮ್ಮ ಯುಎಎನ್ (UAN) ನೋಂದಣಿ ಮಾಡಬಹುದು.

  • ಇಪಿಎಫ್‌ಒ (EPFO) ಸದಸ್ಯ ಪೋರ್ಟಲ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಯುಎಎನ್ (UAN) ಆ್ಯಕ್ಟಿವೇಟ್ ಮಾಡಿ.
  • ವಿಂಡೋದಲ್ಲಿ, ನಿಮ್ಮ ಯುಎಎನ್ (UAN) ನಂಬರ್/ಸದಸ್ಯ ಐಡಿ (ID), ಮೊಬೈಲ್ ನಂಬರ್, ಆಧಾರ್, ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
  • “ದೃಢೀಕರಣ ಪಿನ್ ಪಡೆಯಿರಿ” ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಪಿನ್ (PIN) ಅಥವಾ ಒ ಟಿ ಪಿ (OTP) ಯನ್ನು ಪಡೆಯುತ್ತೀರಿ.
  • ಪರಿಶೀಲಿಸಲು ಪಿನ್ ನಮೂದಿಸಿ.
  • ನಿಮ್ಮ ಯುಎಎನ್ (UAN) ಅಕೌಂಟಿಗೆ ಲಾಗಿನ್ ಆಗಲು ನಿಮ್ಮ ಯೂಸರ್ ಐಡಿ (ID) ಮತ್ತು ಪಾಸ್ವರ್ಡನ್ನು ರಚಿಸಿ.

ಉದ್ಯೋಗದಾತರ ನೋಂದಣಿ

  • ಇಪಿಎಫ್‌ಒ (EPFO) ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಹೋಮ್ ಪೇಜಿನಲ್ಲಿರುವ ಸಂಸ್ಥೆಯ ನೋಂದಣಿ ಬಟನ್ ಮೇಲೆ ಕ್ಲಿಕ್ ಮಾಡಿ.
  • ಯುಎಸ್ಎಸ್‌ಪಿ (USSP) (ಯುನಿಫೈಡ್ ಶ್ರಮ್ ಸುವಿಧಾ ಪೋರ್ಟಲ್) ಸೈನ್-ಅಪ್ ಪೇಜ್ ತೆರೆಯುತ್ತದೆ.
  • ನಿಮ್ಮ ಹೆಸರು, ಇಮೇಲ್, ಮೊಬೈಲ್ ನಂಬರ್ ಮತ್ತು ಪರಿಶೀಲನಾ ಕೋಡ್ ನಮೂದಿಸಿ.
  • ‘ಸೈನ್ ಅಪ್’ ಮೇಲೆ ಕ್ಲಿಕ್ ಮಾಡಿ’.
  • ಯುಎಸ್ಎಸ್‌ಪಿ (USSP) ನಲ್ಲಿ ನಿಮ್ಮ ಅಕೌಂಟ್ ಆ್ಯಕ್ಟಿವ್ ಆದ ನಂತರ, ಇಪಿಎಫ್‌ಒ (EPFO)- ಇ ಎಸ್ ಐ ಸಿ (ESIC) ಗಾಗಿ ನೋಂದಣಿಯನ್ನು ಆಯ್ಕೆಮಾಡಿ.
  • ‘ಹೊಸ ನೋಂದಣಿಗೆ ಅಪ್ಲೈ ಮಾಡಿ’ ಆಯ್ಕೆಮಾಡಿ’.
  • ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಮತ್ತು ವಿವಿಧ ನಿಬಂಧನೆ ಕಾಯ್ದೆ, 1952 ಅನ್ನು ಪಟ್ಟಿಯಿಂದ ಆಯ್ಕೆ ಮಾಡಿ ಮತ್ತು ‘ಸಲ್ಲಿಸಿ’ ಮೇಲೆ ಕ್ಲಿಕ್ ಮಾಡಿ’.
  • ಇಪಿಎಫ್ಒ (EPFO) ನೋಂದಣಿ ಫಾರ್ಮ್ ತೆರೆಯುತ್ತದೆ. ಉದ್ಯೋಗದಾತರು ಫಾರ್ಮ್‌ನಲ್ಲಿನ ಪ್ರತ್ಯೇಕ ವಿಭಾಗಗಳಲ್ಲಿನ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.
  • ಉದ್ಯೋಗದಾತರು ಟ್ಯಾಬ್‌ಗಳ ಅಡಿಯಲ್ಲಿ ಈ ವಿವರಗಳನ್ನು ಭರ್ತಿ ಮಾಡಬೇಕು: ಸ್ಥಾಪನೆಯ ವಿವರಗಳು, ಸಂಪರ್ಕಗಳು, ಸಂಪರ್ಕ ವ್ಯಕ್ತಿಗಳು, ಗುರುತಿಸುವಿಕೆಗಳು, ಉದ್ಯೋಗ ವಿವರಗಳು, ಕೆಲಸಗಾರರ ವಿವರಗಳು, ಶಾಖೆ/ವಿಭಾಗ, ಚಟುವಟಿಕೆಗಳು ಮತ್ತು ಅಟ್ಯಾಚ್ಮೆಂಟ್‌ಗಳು.
  • ಡಿಜಿಟಲ್ ಸಿಗ್ನೇಚರ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಡಿಎಸ್ (DS) ಸರ್ಟಿಫಿಕೇಟ್ ಅಟ್ಯಾಚ್ ಮಾಡಿ.
  • ಡಿಎಸ್ (DS) ಅಪ್ಲೋಡ್ ಆದ ನಂತರ, ಉದ್ಯೋಗದಾತರು ನೋಂದಣಿ ಯಶಸ್ವಿಯಾಗಿದೆ ಎನ್ನುವ ಸಂದೇಶವನ್ನು ಪಡೆಯುತ್ತಾರೆ.

ನಿಮ್ಮ ಯುಎಎನ್ (UAN) ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಯುಎಎನ್ (UAN) ನಂಬರ್ ಸ್ಟೇಟಸ್ ಪರಿಶೀಲಿಸುವ ಪ್ರಕ್ರಿಯೆ ಸರಳವಾಗಿದೆ. ಒಮ್ಮೆ ನೀವು ಯುಎಎನ್ (UAN) ಪೋರ್ಟಲ್‌ಗೆ ಲಾಗಿನ್ ಆದ ನಂತರ, ಇಂಪಾರ್ಟೆಂಟ್ ಲಿಂಕ್‌ಗಳಿಗೆ ಹೋಗಿ ಮತ್ತು ನಿಮ್ಮ ಯುಎಎನ್ (UAN) ತಿಳಿಯಿರಿ ಮೇಲೆ ಕ್ಲಿಕ್ ಮಾಡಿ.

  • ಯುಎಎನ್ (UAN) ಸ್ಟೇಟಸ್ ಪರಿಶೀಲಿಸಲು ನೀವು ಯಾವುದೇ ಪಿಎಫ್ (PF) ನಂಬರ್‌ಗಳು, ಸದಸ್ಯ ಐಡಿ (ID) ಗಳು, ಪ್ಯಾನ್ (PAN) ಅಥವಾ ಆಧಾರ್ ನಂಬರ್‌ಗಳನ್ನು ನಮೂದಿಸಬಹುದು.
  • ಸದಸ್ಯತ್ವ ಐಡಿ (ID) ಬಳಸಿ ಯುಎಎನ್ (UAN) ಸ್ಥಿತಿಯನ್ನು ಪರಿಶೀಲಿಸಲು, ನೀವು ವಾಸಿಸುವ ರಾಜ್ಯದ ಹೆಸರನ್ನು, ಕಚೇರಿ ವಿವರಗಳು, ವೈಯಕ್ತಿಕ ವಿವರಗಳು ಇತ್ಯಾದಿಗಳನ್ನು ನಮೂದಿಸಬೇಕು. ನಿಮ್ಮ ಸದಸ್ಯತ್ವ ಐಡಿ (ID) ಯನ್ನು ನಿಮ್ಮ ಸಂಬಳದ ಸ್ಲಿಪ್‌ನಲ್ಲಿ ನಮೂದಿಸಲಾಗಿದೆ.
  • ವಿವರಗಳನ್ನು ನಮೂದಿಸಿದ ನಂತರ, ‘ಅಧಿಕೃತ ಪಿನ್ ಪಡೆಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಒನ್-ಟೈಮ್ ಪಾಸ್ವರ್ಡನ್ನು ಪಡೆಯುತ್ತೀರಿ. ಮಾನ್ಯಗೊಳಿಸಲು ಒಟಿಪಿ (OTP) ನಮೂದಿಸಿ ಮತ್ತು ‘ಯುಎಎನ್ (UAN) ಪಡೆಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಿ.
  •  ಯುಎಎನ್ (UAN) ಸ್ಟೇಟಸ್ ಅನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾಗುತ್ತದೆ.

ಪೋರ್ಟಲ್‌ಗೆ ಲಾಗಿನ್ ಮಾಡುವ ಹಂತಗಳು

ಯು ಎನ್ ಎ (UNA) ಸೇವೆಗಳನ್ನು ಅಕ್ಸೆಸ್ ಮಾಡಲು ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರೂ ಯುಎಎನ್ (UAN) ಸದಸ್ಯ ಪೋರ್ಟಲ್‌ಗೆ ಲಾಗಿನ್ ಆಗಬೇಕು.

ಉದ್ಯೋಗಿ ಲಾಗಿನ್

ಯುಎಎನ್ (UAN) ಪೋರ್ಟಲ್‌ಗೆ ಲಾಗಿನ್ ಆಗಲು ಉದ್ಯೋಗಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

  • ಯುಎಎನ್ (UAN) ಪೋರ್ಟಲ್‌ನಲ್ಲಿ ಸೇವೆಗಳ ವಿಭಾಗದ ಅಡಿಯಲ್ಲಿ ‘ಉದ್ಯೋಗಿಗಳಿಗಾಗಿ’ ಆಯ್ಕೆಮಾಡಿ.
  • ‘ಸದಸ್ಯ ಯುಎಎನ್ (UAN)/ಆನ್ಲೈನ್ ಸೇವೆಗಳಿಗೆ’ ಹೋಗಿ’.
  • ನಿಮ್ಮ ಯುಎಎನ್ (UAN) ನಂಬರ್ ಮತ್ತು ಪಾಸ್ವರ್ಡ್‌ನಂತಹ ವಿವರಗಳನ್ನು ನಮೂದಿಸಿ.
  • ಅದರ ಸೇವೆಗಳನ್ನು ಅಕ್ಸೆಸ್ ಮಾಡಲು ಸೈನ್ ಇನ್ ಮಾಡಿ.

ಉದ್ಯೋಗದಾತರ ಲಾಗಿನ್

ಉದ್ಯೋಗದಾತರಿಗೆ ಲಾಗಿನ್ ಪ್ರಕ್ರಿಯೆಯು ಈ ರೀತಿಯಾಗಿದೆ.

  • ಇಪಿಎಫ್‌ಒ (EPFO) ಪೋರ್ಟಲ್‌ನಲ್ಲಿ ‘ಉದ್ಯೋಗದಾತರ ಲಾಗಿನ್’ ಟ್ಯಾಬ್‌ಗೆ ಹೋಗಿ.
  • ಎಂಟರ್‌ಪ್ರೈಸ್ ಐಡಿ (ID) ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
  • ‘ಸೈನ್ ಇನ್’ ಮೇಲೆ ಕ್ಲಿಕ್ ಮಾಡಿ’.
  • ಉದ್ಯೋಗದಾತ ಪೋರ್ಟಲ್‌ನ ಪುಟವನ್ನು ಸ್ಕ್ರೀನಿನಲ್ಲಿ ತೋರಿಸಲಾಗುತ್ತದೆ.

ಯುಎಎನ್ (UAN) ಲಾಗಿನ್ ಮತ್ತು ಆ್ಯಕ್ಟಿವೇಶನ್‌ಗೆ ಹಂತಗಳನ್ನು ಓದಿ

ಇಪಿಎಫ್‌ಒ (EPFO) ಸದಸ್ಯ ಪೋರ್ಟಲ್‌ನ ಪ್ರಯೋಜನಗಳು 

ಇ-ಸೇವಾ ಪೋರ್ಟಲ್ ಹಲವಾರು ಸೇವೆಗಳನ್ನು ಒದಗಿಸುತ್ತದೆ. ಒಂದೊಂದಾಗಿ ಅವುಗಳನ್ನು ಅನ್ವೇಷಿಸೋಣ.

  • ವ್ಯೂ: ಸದಸ್ಯರು ತಮ್ಮ ಪ್ರೊಫೈಲ್, ಸೇವಾ ಇತಿಹಾಸ, ಯುಎಎನ್ (UAN) ಕಾರ್ಡ್ ಮತ್ತು ಇಪಿಎಫ್ (EPF) ಪಾಸ್‌ಬುಕ್ ವಿವರಗಳನ್ನು ನೋಡಲು ಇ-ಸೇವಾ ಪೋರ್ಟಲ್‌ಗೆ ಲಾಗಿನ್ ಆಗಬಹುದು.
  • ನಿರ್ವಹಣೆ: ನಿಮ್ಮ ಅಕೌಂಟಿನ ಮೂಲಭೂತ ವಿವರಗಳನ್ನು ಬದಲಾಯಿಸಲು, ಹೊಸ ಮಾಹಿತಿಯನ್ನು ಅಪ್ಡೇಟ್ ಮಾಡಲು ಇಪಿಎಫ್‌ಒ (EPFO) ಸದಸ್ಯ ಪೋರ್ಟಲ್ ಬಳಸಬಹುದು. ನಿಮ್ಮ ಪ್ಯಾನ್ (PAN) ನಂಬರ್, ಬ್ಯಾಂಕ್ ವಿವರಗಳು, ಆಧಾರ್ ಕಾರ್ಡ್ ವಿವರಗಳು ಮುಂತಾದ ನಿಮ್ಮ ಕೆವೈಸಿ (KYC) ವಿವರಗಳನ್ನು ನೀವು ಇಲ್ಲಿ ಅಪ್ಡೇಟ್ ಮಾಡಬಹುದು.
  • ವಿತ್ಡ್ರಾವಲ್: ಪೋರ್ಟಲ್ ಬಳಸಿಕೊಂಡು ನೀವು ಪಿಎಫ್ (PF) ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಬಹುದು. ಇಪಿಎಫ್ (EPF) ವಿತ್‌ಡ್ರಾವಲ್ ಫಾರ್ಮ್‌ಗಳು (ನಂಬರ್‌ಗಳು 31, 19, ಮತ್ತು 10C) ಪೋರ್ಟಲ್‌ನಲ್ಲಿ ಲಭ್ಯವಿವೆ. ವಿತ್‌ಡ್ರಾವಲ್‌ಗಾಗಿ ಕೋರಿಕೆ ಸಲ್ಲಿಸಲು ನೀವು ಸರಿಯಾದ ಫಾರ್ಮ್ ಡೌನ್ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
  • ಟ್ರಾನ್ಸ್ಫರ್: ಇ-ಸೇವಾ ಪೋರ್ಟಲ್ ಬಳಸಿಕೊಂಡು ನಿಮ್ಮ ಹಳೆಯ ಪಿಎಫ್ (PF) ಅನ್ನು ಹೊಸ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡುವ ಕೋರಿಕೆಯನ್ನು ಕೂಡ ನೀವು ಸಲ್ಲಿಸಬಹುದು.
  • ಸ್ಥಿತಿಯನ್ನು ಟ್ರ್ಯಾಕ್ ಮಾಡಿ: ಯುಎಎನ್ (UAN) ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ ನಿಮ್ಮ ಕೋರಿಕೆಯ ಪ್ರಗತಿಯನ್ನು ನೀವು ಟ್ರ್ಯಾಕ್ ಮಾಡಬಹುದು.

ಅಂತಿಮ ಪದಗಳು

ಯುಎಎನ್ (UAN) ಪೋರ್ಟಲ್ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮ ಪಿಎಫ್ (PF) ಅಕೌಂಟನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಉದ್ಯೋಗಿ ಅಥವಾ ಉದ್ಯೋಗದಾತರಾಗಿರಲಿ, ಎಲ್ಲಾ ಪಿಎಫ್ (PF)-ಸಂಬಂಧಿತ ಸೇವೆಗಳನ್ನು ಆನ್ಲೈನಿನಲ್ಲಿ ಪಡೆಯಲು ಇ-ಸೇವಾ ಪೋರ್ಟಲ್‌ನಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.

FAQs

UAN(ಯುಎಎನ್‌) ಏಕೆ ಮುಖ್ಯವಾಗಿದೆ?

ನಿಮ್ಮ ಎಲ್ಲಾ PF(ಪಿಎಫ್‌) ಅಕೌಂಟ್ಗಳನ್ನು ಒಂದೇ ಅಕೌಂಟಿಗೆ ಲಿಂಕ್ ಮಾಡಲು UAN(ಯುಎಎನ್‌) ನಿಮಗೆ ಅನುಮತಿ ನೀಡುತ್ತದೆ. ಉದ್ಯೋಗಿಗಳು ಉದ್ಯೋಗಗಳನ್ನು ಬದಲಾಯಿಸಿದರೆ, ಅವರು ತಮ್ಮ UAN(ಯುಎಎನ್‌) ಬಗ್ಗೆ ಹೊಸ ಉದ್ಯೋಗದಾತರನ್ನು ಅಪ್ಡೇಟ್ ಮಾಡಬೇಕು. UAN(ಯುಎಎನ್‌) ನಿಮ್ಮ PF(ಪಿಎಫ್‌) ಅಕೌಂಟ್ಗಳನ್ನು ಆನ್ಲೈನ್ನಲ್ಲಿ ಏಕೀಕೃತಗೊಳಿಸಿದೆ ಮತ್ತು ಸರಳಗೊಳಿಸಿದೆ

UAN(ಯುಎಎನ್‌) ನೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

ನಿಮ್ಮ UAN(ಯುಎಎನ್‌)ನೊಂದಿಗೆ ನಿಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಲು, UAN(ಯುಎಎನ್‌) ಮತ್ತು ಪಾಸ್ವರ್ಡ್ ಬಳಸಿ ಪೋರ್ಟಲ್ಗೆ ಲಾಗಿನ್ ಮಾಡಿ<ಮ್ಯಾನೇಜ್ ಟ್ಯಾಬ್ ಅಡಿಯಲ್ಲಿ, KYC(ಕೆವೈಸಿ) ವಿವರಗಳ ಮೇಲೆ ಕ್ಲಿಕ್ ಮಾಡಿ<ಆಧಾರ್ ಕಾರ್ಡಿನೊಂದಿಗೆ UAN(ಯುಎಎನ್‌) ಲಿಂಕ್ ಮಾಡಿ.

UAN(ಯುಎಎನ್‌) ಪೋರ್ಟಲ್‌ನಲ್ಲಿ ನೀವು ಯಾವ ವಿವರಗಳನ್ನು ಅಪ್ಡೇಟ್ ಮಾಡಬಹುದು?

ಸದಸ್ಯರು ತಮ್ಮ ವಿವರಗಳನ್ನು UAN(ಯುಎಎನ್‌) ಸದಸ್ಯ ಪೋರ್ಟಲ್ನಲ್ಲಿ ಮಾತ್ರ ಅಪ್ಡೇಟ್ ಮಾಡಬಹುದು.

ಉದ್ಯೋಗ ಬದಲಾವಣೆಯ ನಂತರ ನಾನು ನನ್ನ UAN(ಯುಎಎನ್‌) ಅನ್ನು ಮರುಸಕ್ರಿಯಗೊಳಿಸಬೇಕೇ?

ಇಲ್ಲ, ಉದ್ಯೋಗ ಬದಲಾವಣೆಯ ನಂತರ ನೀವು UAN(ಯುಎಎನ್‌) ಅನ್ನು ರಿಆ್ಯಕ್ಟಿವ್ ಮಾಡಬೇಕಾಗಿಲ್ಲ. ಒಮ್ಮೆ ನೀವು UAN(ಯುಎಎನ್‌) ಪೋರ್ಟಲ್ಗೆ ನೋಂದಣಿ ಮಾಡಿದ ನಂತರ, ಅದು ನಿಮ್ಮ ವೃತ್ತಿಪರ ಕಾಲಾವಧಿಯುದ್ದಕ್ಕೂ ಸಕ್ರಿಯವಾಗಿರುತ್ತದೆ.