ನಿಮ್ಮ ಏಂಜಲ್ ಒನ್ ಅಕೌಂಟಿಗೆ ಆನ್ಲೈನಿನಲ್ಲಿ ಹಣವನ್ನು ಸೇರಿಸುವುದು

ಹಣವನ್ನು ಟ್ರಾನ್ಸ್‌ಫರ್ ಮಾಡುವುದುಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಯಾವಾಗಲೂ ಒತ್ತಡವನ್ನು ಉಂಟುಮಾಡುವ ಪ್ರಕ್ರಿಯೆಯಾಗಿದೆ.ಆದ್ದರಿಂದ, ಏಂಜಲ್ ಒನ್ಅಕೌಂಟಿನಲ್ಲಿ ತಮ್ಮ ಹಣದ ವರ್ಗಾವಣೆಯು ತೊಂದರೆ ರಹಿತವಾಗಿ ಆದಾಗ ನಮ್ಮ ಬಳಕೆದಾರರು ಅದನ್ನು ಇಷ್ಟಪಡುತ್ತಾರೆ.

ಆನ್ಲೈನ್ ಟ್ರೇಡಿಂಗ್ ಮಾಡುವಾಗ ಏಂಜಲ್ ಒನ್ನಿಮಗೆ ತಡೆರ ಹಿತ ಟ್ರಾನ್ಸಾಕ್ಷನ್‌ಗಳನ್ನು ಒದಗಿಸುತ್ತದೆ. ನಮ್ಮ ಆ್ಯಪ್‌ನೊಂದಿಗೆ, ನೀವು ಎಲ್ಲಿಂದಲಾದರೂ ಸ್ಟಾಕ್ ಮಾರುಕಟ್ಟೆಯನ್ನು ಬಳಸಬಹುದು, ನಿಮ್ಮ ವಾಚ್‌ಲಿಸ್ಟನ್ನು ಕಸ್ಟಮೈಜ್ ಮಾಡಬಹುದು, ನಿಮ್ಮ ಆರ್ಡರ್‌ಗಳನ್ನು ಮಾರ್ಪಾಡು ಮಾಡಬಹುದು, ನಿಮ್ಮ ಪೋರ್ಟ್‌ಫೋಲಿಯೋವನ್ನು ಮೇಲ್ವಿಚಾರಣೆ ಮಾಡಬಹುದು, ಕಂಪನಿಗಳ ಬಗ್ಗೆ ಮಾಹಿತಿ ಪಡೆಯಬಹುದು ಮತ್ತು ಅನೇಕ ವಿನಿಮಯಗಳಲ್ಲಿ ಟ್ರೇಡ್ ಮಾಡಬಹುದು.

ಹೊಸ ಏಂಜಲ್ ಒನ್ ಸೂಪರ್ ಆ್ಯಪ್‌ ಅಡಿಯಲ್ಲಿ, ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಡಿಜಿಟಲ್ ಪಾವತಿ ವಿಧಾನಗಳೊಂದಿಗೆ ಹಣವನ್ನು ಸೇರಿಸುವುದು ತುಂಬಾ ಸುಲಭ. ಡಿಜಿಟಲ್ ಫಂಡ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯು ಈ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಏಕೆಂದರೆ –

  • ವೇಗವಾದಪಾವತಿ
  • 24*7 ಟ್ರಾನ್ಸ್‌ಫರ್ ಸೌಲಭ್ಯ ಲಭ್ಯ
  • ಹೆಚ್ಚಿನ ಭದ್ರತೆ
  • ಟ್ರಾನ್ಸಾಕ್ಷನ್‌ಗಳನ್ನು ಮಾಡುವುದು ಸುಲಭ
  • ಪ್ರತಿ ಟ್ರಾನ್ಸಾಕ್ಷನ್ನಿನ ದಾಖಲೆಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ

ಫಂಡ್‌ಗಳನ್ನು ಸೇರಿಸುವ ಹಂತಗಳು

ನಿಮ್ಮ ಏಂಜಲ್ ಒನ್ ಅಕೌಂಟಿಗೆ ಹಣವನ್ನು ಸೇರಿಸುವ ತ್ವರಿತ ಹಂತವಾರು ಪ್ರಕ್ರಿಯೆ ಇಲ್ಲಿದೆ –

  1. ಲಾಗಿನ್ ಮಾಡಿದ ನಂತರ ‘ಅಕೌಂಟ್’ ವಿಭಾಗಕ್ಕೆ ಹೋಗಿ
  1. ‘ಫಂಡ್‌ಗಳನ್ನು ಸೇರಿಸಿ’ ಬಟನ್ ಕ್ಲಿಕ್ ಮಾಡಿ
  2. ನೀವು ಸೇರಿಸಲು ಬಯಸುವ ಮೊತ್ತವನ್ನು ನಮೂದಿಸಿ
  3. ನೀವು ಹಣವನ್ನು ಸೇರಿಸಲು ಬಯಸುವ ಬ್ಯಾಂಕ್ ಅಕೌಂಟನ್ನು ಆಯ್ಕೆ ಮಾಡಿ – ಏಂಜಲ್‌ ಒನ್ ನೊಂದಿಗೆ ನೋಂದಾಯಿಸಲಾದ ಬ್ಯಾಂಕ್ ಅಕೌಂಟ್‌ಗಳನ್ನು ಮಾತ್ರ (ನೀವು ಇಲ್ಲಿ ಆಯ್ಕೆ ಮಾಡುವ ಹಣ ಸೇರಿಸುವ ಪುಟದಲ್ಲಿ) ಟ್ರಾನ್ಸಾಕ್ಷನ್ ಪೂರ್ಣಗೊಳಿಸುವಲ್ಲಿ ಬಳಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ಒಂದು ವೇಳೆ ನೀವು ಅನೇಕ ಅಕೌಂಟ್‌ಗಳನ್ನು ಹೊಂದಿದ್ದರೆ ಮತ್ತು ಬೇರೆ ಬ್ಯಾಂಕ್ ಅಕೌಂಟ್‌ನೊಂದಿಗೆ ಟ್ರಾನ್ಸಾಕ್ಷನ್ ಮಾಡಲು ಬಯಸಿದರೆ ನೀವು ಬ್ಯಾಂಕ್ ಅಕೌಂಟ್‌ನ ಪಕ್ಕದಲ್ಲಿರುವ “ಬದಲಾಯಿಸಿ” ಬಟನ್ ಮೇಲೆ ಕ್ಲಿಕ್ ಮಾಡಬಹುದು. 
  4. ಟ್ರಾನ್ಸ್‌ಫರ್ ಮಾಡುವ ವಿಧಾನವನ್ನು ಆಯ್ಕೆ ಮಾಡಿ – ಅಂದರೆ ನೆಟ್ ಬ್ಯಾಂಕಿಂಗ್ ಅಥವಾ UPI (ನೀವು ನಿಮ್ಮ ಫೋನ್ ನಲ್ಲಿ ಗೂಗಲ್ ಪೇ ಅಥವಾ ಫೋನ್‌ಪೇ ಆ್ಯಪ್‌ ಹೊಂದಿದ್ದರೆ, ಮೇಲಿನ ಸ್ಕ್ರೀನ್‌ಶಾಟ್‌ನಲ್ಲಿ ನೀಡಲಾದಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನೇರವಾಗಿ ಆ ಆ್ಯಪ್‌ಗಳ ಮೂಲಕ ಹಣವನ್ನು ಸೇರಿಸಬಹುದು).

ಪೇಮೆಂಟ್ಸ್ ಗೇಟ್‌ವೇಗಳು

ನಮ್ಮ ಆ್ಯಪ್/ಪ್ಲಾಟ್‌ಫಾರ್ಮ್ ಮೂಲಕ ಹಣವನ್ನು ಟ್ರಾನ್ಸ್‌ಫರ್ ಮಾಡಲು ಏಂಜಲ್ ಒನ್ ನಿಮಗೆ ಎರಡು ಡಿಜಿಟಲ್ ಪಾವತಿ ವಿಧಾನಗಳನ್ನು ಒದಗಿಸುತ್ತದೆ:

  1. UPI ಟ್ರಾನ್ಸ್‌‌ಫರ್
  2. ನೆಟ್ ಬ್ಯಾಂಕಿಂಗ್

ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಈ ಎರಡು ಪಾವತಿ ವಿಧಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕೆಳಗಿನ ಪಟ್ಟಿಯು ನೀಡುತ್ತದೆ.

ನಮ್ಮ ಆ್ಯಪ್/ಪ್ಲಾಟ್‌ಫಾರ್ಮ್: UPI ಟ್ರಾನ್ಸ್‌ಫರ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಟ್ರಾನ್ಸ್‌ಫರ್ ಮಾಡಲು ಏಂಜಲ್ ಒನ್ ನಿಮಗೆ ಎರಡು ಡಿಜಿಟಲ್ ಪಾವತಿ ವಿಧಾನಗಳನ್ನು ಒದಗಿಸುತ್ತದೆ. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಈ ಎರಡು ಪಾವತಿ ವಿಧಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಈ ಕೆಳಗಿನ ಪಟ್ಟಿಯು ನೀಡುತ್ತದೆ.

ವಿವರಗಳು UPI ಟ್ರಾನ್ಸ್‌‌ಫರ್ ನೆಟ್ ಬ್ಯಾಂಕಿಂಗ್
ನೀಡಬೇಕಾದ ವಿವರಗಳು NPCI ನಿಂದ ಅನುಮೋದಿಸಲಾದ ಮಾನ್ಯ UPI ID ಲಾಗಿನ್ ಕ್ರೆಡೆನ್ಶಿಯಲ್‌ಗಳು
ಏಂಜಲ್ ಒನ್ ಅಕೌಂಟಿನಲ್ಲಿ ಮಿತಿಯನ್ನು ಅಪ್ಡೇಟ್ ಮಾಡುವುದು  ತ್ವರಿತ ತ್ವರಿತ
ವರ್ಗಾವಣೆ ಮಿತಿ ₹2 ಲಕ್ಷದವರೆಗೆ (1ನೇ ಟ್ರಾನ್ಸಾಕ್ಷನ್‌ಗೆ ₹5000) ನಿಮ್ಮ ಬ್ಯಾಂಕ್ ಖಾತೆಯಲ್ಲಿ TPT(ಥರ್ಡ್ ಪಾರ್ಟಿ ಟ್ರಾನ್ಸ್‌ಫರ್) ಮಿತಿಯನ್ನು ಅವಲಂಬಿಸಿರುತ್ತದೆ, ಕಡಿಮೆ ಮಿತಿ ₹50
ಶುಲ್ಕಗಳು ನಿಮ್ಮ ಅಕೌಂಟಿಗೆ ಹಣವನ್ನು ಸೇರಿಸಲು ಏಂಜಲ್ ಒನ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ

Google Pay, Paytm, BHIM ಮತ್ತು PhonePe ನಂತಹ ಯಾವುದೇ ಡಿಜಿಟಲ್ ಪಾವತಿ ಆ್ಯಪ್‌ಗಳ ಮೂಲಕ UPI ಟ್ರಾನ್ಸಾಕ್ಷನ್‌ಗಳನ್ನು ನಡೆಸಬಹುದು.

ಗಮನಿಸಿ: SEBI ನಿಯಮಾವಳಿಗಳ ಪ್ರಕಾರ, ಹಣವನ್ನು ಸೇರಿಸಬಹುದಾದ ಅಕೌಂಟನ್ನು ಡೆಪಾಸಿಟರಿ ಪಾರ್ಟಿಸಿಪೆಂಟ್‌ನೊಂದಿಗೆ ನೋಂದಾಯಿಸಬೇಕು (ಈ ಸಂದರ್ಭದಲ್ಲಿ ಏಂಜಲ್ ಒನ್).

ನಿಮ್ಮ ಟ್ರಾನ್ಸಾಕ್ಷನ್‌ಗಳಿಗಾಗಿ ನೀವು ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ, ನೀವು ಸೀಮಿತ ಸಂಖ್ಯೆಯ ಬ್ಯಾಂಕ್‌ಗಳಿಂದ ಬ್ಯಾಂಕ್ ಅಕೌಂಟ್‌ಗಳನ್ನು ಬಳಸಬಹುದು. ನೆಟ್‌ಬ್ಯಾಂಕಿಂಗ್‌ಗಾಗಿ ಬಳಸಬಹುದಾದ ಬ್ಯಾಂಕ್‌ಗಳ ಪಟ್ಟಿಯನ್ನು ಕೆಳಗೆ ನೋಡಬಹುದು –

ಬಳಕೆದಾರರು ನೆಟ್ ಬ್ಯಾಂಕಿಂಗ್ ಟ್ರಾನ್ಸಾಕ್ಷನ್‌ಗಳನ್ನು ಮಾಡಬಹುದಾದ ಬ್ಯಾಂಕ್‌ಗಳ ಪಟ್ಟಿ –

ಕ್ರ.ಸಂ. ಬ್ಯಾಂಕ್ ಹೆಸರು
1 ಅಲಹಾಬಾದ್ ಬ್ಯಾಂಕ್
2 ಆಂಧ್ರ ಬ್ಯಾಂಕ್
3 AU ಸ್ಮಾಲ್ ಫೈನಾನ್ಸ್ ಬ್ಯಾಂಕ್
4 ಆಕ್ಸಿಸ್ ಬ್ಯಾಂಕ್
5 ಬಂಧನ್ ಬ್ಯಾಂಕ್
6 ಬ್ಯಾಂಕ್ ಆಫ್ ಬರೋಡಾ
7 ಬ್ಯಾಂಕ್ ಆಫ್ ಇಂಡಿಯಾ
8 ಬ್ಯಾಂಕ್ ಆಫ್ ಮಹಾರಾಷ್ಟ್ರ
9 ಕೆನರಾ ಬ್ಯಾಂಕ್
10 ಕ್ಯಾಪಿಟಲ್ ಬ್ಯಾಂಕ್
11 ಕ್ಯಾಥಲಿಕ್ ಸಿರಿಯನ್ ಬ್ಯಾಂಕ್
12 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
13 ಸಿಟಿ ಯೂನಿಯನ್ ಬ್ಯಾಂಕ್
14 ಕಾರ್ಪೊರೇಶನ್ ಬ್ಯಾಂಕ್
15 DCB
16 ಡಚ್ ಬ್ಯಾಂಕ್
17 ಧನಲಕ್ಷ್ಮಿ ಬ್ಯಾಂಕ್
18 ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
19 ಫೆಡರಲ್ ಬ್ಯಾಂಕ್
20 ಗುಜರಾತ್ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್
21 HDFC ಬ್ಯಾಂಕ್
22 HSBC
23 ಐಸಿಐಸಿಐ ಬ್ಯಾಂಕ್
24 IDBI ಬ್ಯಾಂಕ್
25 IDFC Bank
26 ಇಂಡಿಯನ್ ಬ್ಯಾಂಕ್
27 ಇಂಡಿಯನ್ ಓವರ್ಸೀಸ್ ಬ್ಯಾಂಕ್
28 INDUSIND ಬ್ಯಾಂಕ್
29 ಜಮ್ಮು & ಕಾಶ್ಮೀರ ಬ್ಯಾಂಕ್
30 ಕರ್ನಾಟಕ ಬ್ಯಾಂಕ್
31 ಕರೂರ್ ವೈಶ್ಯ ಬ್ಯಾಂಕ್
32 ಕೋಟಕ್ ಮಹೀಂದ್ರಾ ಬ್ಯಾಂಕ್
33 ಲಕ್ಷ್ಮಿ ವಿಲಾಸ್ ಬ್ಯಾಂಕ್
34 ಪಂಜಾಬ್ ನ್ಯಾಶನಲ್ ಬ್ಯಾಂಕ್
35 ಸಾರಸ್ವತ್ ಬ್ಯಾಂಕ್
36 ಸೌತ್ ಇಂಡಿಯನ್ ಬ್ಯಾಂಕ್
37 ಸ್ಟ್ಯಾಂಡರ್ಡ್ ಚಾರ್ಟರ್ಡ್
38 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
39 ಸೂರತ್ ಬ್ಯಾಂಕ್
40 ಸುಟೆಕ್ಸ್ ಬ್ಯಾಂಕ್
41 Svc ಕೋ-ಆಪರೇಟಿವ್ ಬ್ಯಾಂಕ್
42 ತಮಿಳುನಾಡ್ ಮರ್ಕಂಟೈಲ್ ಬ್ಯಾಂಕ್
43 ದಿ ರತ್ನಾಕರ್ ಬ್ಯಾಂಕ್ ಲಿಮಿಟೆಡ್ (RBL)
44 UCO ಬ್ಯಾಂಕ್
45 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
46 ಉತ್ಕರ್ಷ್ ಬ್ಯಾಂಕ್
47 ಯೆಸ್ ಬ್ಯಾಂಕ್

ಆದಾಗ್ಯೂ, ನೀವು UPI (Google Pay ಅಥವಾ PhonePe ಮೂಲಕ ಸೇರಿದಂತೆ) ಬಳಸುತ್ತಿದ್ದರೆ, ನೀವು ಯಾವುದೇ ಬ್ಯಾಂಕಿನಿಂದ ಅಕೌಂಟ್‌ಗಳನ್ನು ಬಳಸಿ ಟ್ರಾನ್ಸಾಕ್ಷನ್ ಮಾಡಬಹುದು (ನಿಮ್ಮ ಏಂಜಲ್ ಒನ್ ಅಕೌಂಟಿನೊಂದಿಗೆ ನೋಂದಣಿಯಾಗಿದ್ದರೆ).

ನಿಮ್ಮ ಫೋನ್ನಲ್ಲಿ ಈಗಾಗಲೇ GPay ಅಥವಾ ಫೋನ್‌ಪೇ ಆ್ಯಪನ್ನು ಡೌನ್ಲೋಡ್ ಆಗಿದ್ದರೆ, ಏಂಜೆಲ್ ಒನ್ ಬಳಕೆದಾರರಿಗೆ ಅವುಗಳನ್ನು ಪಾವತಿ ಆಯ್ಕೆಗಳಾಗಿ ನೇರವಾಗಿ ತೋರಿಸುತ್ತದೆ.

ಪಾವತಿಯ ಮಿತಿಗಳು

UPI ಗಾಗಿ, ಕನಿಷ್ಠ ಟ್ರಾನ್ಸಾಕ್ಷನ್ ಮಿತಿ ಇಲ್ಲ, ಆದರೆ UPI ಮೂಲಕ ನೀವು ಪಾವತಿಸಬಹುದಾದ ಗರಿಷ್ಠ ಮೊತ್ತ ₹ 2 ಲಕ್ಷ (ಇದು ನೀವು ಅಕೌಂಟ್ ಹೊಂದಿರುವ ಬ್ಯಾಂಕನ್ನು ಕೂಡ ಅವಲಂಬಿಸಿರುತ್ತದೆ).

ನೆಟ್ ಬ್ಯಾಂಕಿಂಗ್‌ಗಾಗಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ನೀವು ಟ್ರಾನ್ಸ್‌ಫರ್ ಮಾಡಬಹುದಾದ ಕನಿಷ್ಠ ಮೊತ್ತ ₹50.

ವಹಿವಾಟಿನ ವಿಧಾನದ ಪ್ರಕಾರ ತೆಗೆದುಕೊಳ್ಳಬೇಕಾದ ಮುಂದಿನ ಹಂತಗಳನ್ನು ಈ ಕೆಳಗಿನ ವಿಭಾಗದಲ್ಲಿ ವಿವರಿಸಲಾಗಿದೆ –

ನೆಟ್ ಬ್ಯಾಂಕಿಂಗ್ ವರ್ಗಾವಣೆ ಪ್ರಕ್ರಿಯೆ –

  1. ಆ್ಯಡ್ ಫಂಡ್ಸ್ ಪೇಜಿನಲ್ಲಿ ನೆಟ್ ಬ್ಯಾಂಕಿಂಗ್ ಆಗಿ ಟ್ರಾನ್ಸ್‌ಫರ್ ವಿಧಾನವನ್ನು ಆಯ್ಕೆ ಮಾಡಿದ ನಂತರ, ಬಳಕೆದಾರರು ಆಡ್ ಫಂಡ್‌ಗಳ ಪುಟದಲ್ಲಿ ಯಾರ ಖಾತೆಯನ್ನು ಆಯ್ಕೆಮಾಡಿದರೋ ಆ ಬ್ಯಾಂಕ್‌ನ ಪುಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
  1. ಈ ಪುಟದಲ್ಲಿ, ಅಗತ್ಯವಿರುವ ವಿವರಗಳನ್ನು ನಮೂದಿಸಿ ಉದಾ. ಗ್ರಾಹಕ ಐಡಿ ಮತ್ತು ಪಾಸ್ವರ್ಡ್.
  2. ಒಮ್ಮೆ ಟ್ರಾನ್ಸಾಕ್ಷನ್ ಪೂರ್ಣಗೊಂಡ ನಂತರ, ಬಳಕೆದಾರರನ್ನು ಆಯಾ ಟ್ರಾನ್ಸಾಕ್ಷನ್ ಸ್ಟೇಟಸ್‌ನೊಂದಿಗೆ ಏಂಜಲ್ ಒನ್ ಆ್ಯಪ್‌ ಪೇಜಿಗೆ ತೆಗೆದುಕೊಂಡು ಹೋಗಲಾಗುತ್ತದೆ (ಅಂದರೆ. ಯಶಸ್ವಿಯಾಗಿದೆ, ವಿಫಲವಾಗಿದೆ ಅಥವಾ ಬಾಕಿ ಇದೆ).

UPI ಟ್ರಾನ್ಸ್‌ಫರ್ ಪ್ರಕ್ರಿಯೆ –

  1. ಆ್ಯಡ್ ಫಂಡ್ಸ್ ಪೇಜಿನಲ್ಲಿ UPI ಆಗಿ ಟ್ರಾನ್ಸ್‌ಫರ್ ವಿಧಾನವನ್ನು ಆಯ್ಕೆ ಮಾಡಿದ ನಂತರ, ಬಳಕೆದಾರರನ್ನು UPI ID/ VPA ನಮೂದಿಸಲು ಕೇಳಲಾಗುತ್ತದೆ.
  2. ಯಾವುದೇ UPI ಅಪ್ಲಿಕೇಶನ್ನಿನ UPI ಐಡಿ/ VPA ನಮೂದಿಸಿ.
  3. ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.
  4. ಆಯಾ UPI ಅಪ್ಲಿಕೇಶನ್‌ಗೆ ಹೋಗಿ, ನೀವು ನಮೂದಿಸಿದ UPI ಐಡಿ/VPA ಗೆ ಹೋಗಿ.
  5. ಯುಪಿಐ ಅಪ್ಲಿಕೇಶನ್‌ನಲ್ಲಿ ಏಂಜಲ್ ಒನ್‌ನಿಂದ ನೀವು ಪಾವತಿ ಕೋರಿಕೆಯನ್ನು ನೋಡುತ್ತೀರಿ.
  6. ಟ್ರಾನ್ಸಾಕ್ಷನ್ ಪೂರ್ಣಗೊಳಿಸಲು ಆಪ್ರೂವ್ ಮೇಲೆ ಕ್ಲಿಕ್ ಮಾಡಿ.
  7. ಟ್ರಾನ್ಸಾಕ್ಷನ್‌ಗೆ ಅಧಿಕಾರ ನೀಡಲು UPI PIN ನಮೂದಿಸಿ.
  8. ಒಮ್ಮೆ ಟ್ರಾನ್ಸಾಕ್ಷನ್ ಪೂರ್ಣಗೊಂಡ ನಂತರ, ಬಳಕೆದಾರರನ್ನು ಆಯಾ ಟ್ರಾನ್ಸಾಕ್ಷನ್ ಸ್ಟೇಟಸ್‌ನೊಂದಿಗೆ ಏಂಜಲ್ ಒನ್  ಆ್ಯಪ್‌ ಪೇಜಿಗೆ ತೆಗೆದುಕೊಂಡು ಹೋಗಲಾಗುತ್ತದೆ (ಅಂದರೆ. ಯಶಸ್ವಿಯಾಗಿದೆ, ವಿಫಲವಾಗಿದೆ ಅಥವಾ ಬಾಕಿ ಇದೆ).

GPay ಅಥವಾ ಫೋನ್‌ಪೇ ಟ್ರಾನ್ಸ್‌ಫರ್ ಪ್ರಕ್ರಿಯೆ –

  1. ಆ್ಯಡ್ ಫಂಡ್ಸ್ ಪೇಜಿನಲ್ಲಿ Gpay/Phonepe ಆಗಿ ಟ್ರಾನ್ಸ್‌ಫರ್ ವಿಧಾನವನ್ನು ಆಯ್ಕೆ ಮಾಡಿದ ನಂತರ, ಬಳಕೆದಾರರನ್ನು ನೇರವಾಗಿ ಆಯಾ UPI ಅಪ್ಲಿಕೇಶನ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ.
  1. Gpay/Phonepe ನಲ್ಲಿ ನೋಂದಾಯಿಸಲಾದ ಅನೇಕ ಅಕೌಂಟ್‌ಗಳಿದ್ದಲ್ಲಿ, ಟ್ರಾನ್ಸಾಕ್ಷನ್ ಅನ್ನು ಸರಿಯಾಗಿ ಪೂರ್ಣಗೊಳಿಸಲು ದಯವಿಟ್ಟು ಏಂಜಲ್ ಒನ್‌ನಲ್ಲಿ ನೀವು ನೋಂದಾಯಿಸಿದ ಅಕೌಂಟನ್ನು ಆಯ್ಕೆಮಾಡಿ.
  2. ಟ್ರಾನ್ಸಾಕ್ಷನ್‌ಗೆ ಅಧಿಕಾರ ನೀಡಲು UPI PIN ನಮೂದಿಸಿ.
  3. ಒಮ್ಮೆ ನೀವು ಟ್ರಾನ್ಸಾಕ್ಷನ್ ಪೂರ್ಣಗೊಳಿಸಿದ ನಂತರ, ನಿಮ್ಮನ್ನು ಏಂಜಲ್ ಒನ್‌ ಆ್ಯಪ್‌ ಪೇಜಿಗೆ ತೆಗೆದುಕೊಂಡು ಹೋಗಲಾಗುತ್ತದೆ, ಅಲ್ಲಿ ನೀವು ಟ್ರಾನ್ಸಾಕ್ಷನ್ನಿನ ಸ್ಟೇಟಸ್ ಪರಿಶೀಲಿಸಬಹುದು (ಅಂದರೆ. ಯಶಸ್ವಿಯಾಗಿದೆ, ವಿಫಲವಾಗಿದೆ ಅಥವಾ ಬಾಕಿ ಇದೆ). 

ಆ್ಯಪ್‌ನ ಅಕೌಂಟ್ ವಿಭಾಗದಲ್ಲಿ “ಫಂಡ್ಸ್ ಟ್ರಾನ್ಸಾಕ್ಷನ್ ವಿವರಗಳನ್ನು ನೋಡಿ” ಅಡಿಯಲ್ಲಿ ನಿಮ್ಮ ಟ್ರಾನ್ಸಾಕ್ಷನ್ನಿನ ಸ್ಟೇಟಸ್ ಅನ್ನು ನೀವು ಪರಿಶೀಲಿಸಬಹುದು.ಇದರ ಅಡಿಯಲ್ಲಿ ಎರಡು ವಿಭಾಗಗಳಿವೆ – ಫಂಡ್‌ಗಳನ್ನು ಸೇರಿಸಲಾಗಿದೆ ಮತ್ತು ವಿತ್‌ಡ್ರಾ ಮಾಡಲಾದ ಫಂಡ್‌ಗಳು, ಇವೆರಡನ್ನೂ ಈ ಉಪವಿಭಾಗದ ಮೂಲಕ ಪ್ರತ್ಯೇಕವಾಗಿ ಟ್ರ್ಯಾಕ್ ಮಾಡಬಹುದು.ಫಂಡ್‌ಗಳ ಟ್ರಾನ್ಸಾಕ್ಷನ್ ವಿವರಗಳನ್ನು ನೋಡುವ ನಂತರದ ವಿಭಾಗದಿಂದ ನಾವು ಇದರಲ್ಲಿ ಇನ್ನಷ್ಟು ತಿಳಿದುಕೊಳ್ಳುತ್ತೇವೆ.

ನಿಮ್ಮ ಅಕೌಂಟ್ ನಲ್ಲಿರುವ ಹಣದಲ್ಲಿ ಟ್ರಾನ್ಸಾಕ್ಷನ್ ಮಾಡಿದ ಹಣ ಕಾಣಿಸುತ್ತಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಒಮ್ಮೆ ಟ್ರಾನ್ಸಾಕ್ಷನ್ ಕಾರ್ಯಗತಗೊಳಿಸಿದ ನಂತರ, ಮಾಡಿದ ಟ್ರಾನ್ಸಾಕ್ಷನ್ ನಿಮ್ಮ ಬ್ಯಾಲೆನ್ಸಿನಲ್ಲಿ ಕಾಣಿಸಿಕೊಂಡಿದೆಯೇಎಂದು ನೀವು ಪರಿಶೀಲಿಸಬಹುದು.ಅದಕ್ಕಾಗಿ, ನೀವು ನಿಮ್ಮ ಅಕೌಂಟಿಗೆ ಹೋಗಿ ಮತ್ತು ನಿಮ್ಮ ಟ್ರೇಡಿಂಗ್ ಬ್ಯಾಲೆನ್ಸ್ ಪರಿಶೀಲಿಸಬೇಕು ಅಥವಾ “ಫಂಡ್‌ಗಳ ಟ್ರಾನ್ಸಾಕ್ಷನ್ ವಿವರಗಳನ್ನು ನೋಡಿ” ಕ್ಲಿಕ್ ಮಾಡಬೇಕು. ಬ್ಯಾಲೆನ್ಸ್ ಅಪ್ಡೇಟ್ ಆಗಿಲ್ಲ ಎಂದು ನಿಮಗೆ ಕಂಡುಬಂದರೆ, ಇನ್ನೊಂದು ವಿಭಾಗಕ್ಕೆ ಬದಲಾಯಿಸಲು ಪ್ರಯತ್ನಿಸಿ (ಹೋಮ್ ಅಥವಾ ವಾಚ್‌ಲಿಸ್ಟ್‌ನಂತಹ) ಮತ್ತೊಮ್ಮೆ ಅಕೌಂಟ್‌ಗೆ ಮರಳಿ ಬನ್ನಿ. ಅಷ್ಟರೊಳಗೆ ಬ್ಯಾಲೆನ್ಸ್ ಅಪ್ಡೇಟ್ ಆಗಿರಬೇಕು.

ಫಂಡ್‌ಗಳ ಟ್ರಾನ್ಸಾಕ್ಷನ್ ವಿವರಗಳನ್ನು ನೋಡುವುದು

ಈ ವಿಭಾಗದ ಅಡಿಯಲ್ಲಿ ನೀವು ಎರಡು ವಿಭಾಗಗಳನ್ನು ನೋಡಬಹುದು – ಫಂಡ್‌ಗಳನ್ನು ಸೇರಿಸಲಾಗಿದೆ ಮತ್ತು ವಿತ್‌ಡ್ರಾ ಮಾಡಲಾದ ಫಂಡ್‌ಗಳು.

ಫಂಡ್‌ಗಳನ್ನು ಸೇರಿಸಲಾಗಿದೆ

ಈ ವಿಭಾಗದ ಅಡಿಯಲ್ಲಿ ನೀವು ಮಾಡಿದ ಎಲ್ಲಾ ಫಂಡ್ ಸೇರ್ಪಡೆಗಳನ್ನು ಈ ಕೆಳಗಿನ ಮಾಹಿತಿಯೊಂದಿಗೆ ಪರಿಶೀಲಿಸಬಹುದು –

  1. ಟ್ರಾನ್ಸಾಕ್ಷನ್ ದಿನಾಂಕ ಮತ್ತು ಸಮಯ
  2. ಟ್ರಾನ್ಸಾಕ್ಷನ್ ಮಾಡಲಾದ ಬ್ಯಾಂಕ್ ಅಕೌಂಟ್
  3. ಒಳಗೊಂಡಿರುವ ಮೊತ್ತ
  4. ಟ್ರಾನ್ಸಾಕ್ಷನ್ನಿನ ಸ್ಟೇಟಸ್ – ಉದಾ. ಬಾಕಿ ಇದೆ

ನಿರ್ದಿಷ್ಟ ಬ್ಯಾಂಕ್ ಅಥವಾ ನಿರ್ದಿಷ್ಟ ಮೊತ್ತಕ್ಕೆ ಸಂಬಂಧಿಸಿದ ಟ್ರಾನ್ಸಾಕ್ಷನ್‌ಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ನೀವು ನೇರವಾಗಿ ಬ್ಯಾಂಕ್ ಹೆಸರು ಅಥವಾ ಸರ್ಚ್ ಬಾರ್‌ನಲ್ಲಿ ಮೊತ್ತವನ್ನು ನಮೂದಿಸುವ ಮೂಲಕ ಟ್ರಾನ್ಸಾಕ್ಷನ್ ಹುಡುಕಬಹುದು.

ಅಂತಿಮ ಪದಗಳು

ನಾವೆಲ್ಲರೂ ಆನ್‌ಲೈನ್ ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ ನಾವು ಅನುಭವಿಸುವ ಅನಗತ್ಯ ಒತ್ತಡ ಮತ್ತು ಆತಂಕಗಳನ್ನು ತೊಡೆದುಹಾಕೋಣ.ನಿಮ್ಮ ಟ್ರೇಡಿಂಗ್ ಮತ್ತು ಹೂಡಿಕೆ ಅಗತ್ಯಗಳಿಗಾಗಿ ಏಂಜಲ್‌ ಒನ್ ನಂತಹ ವಿಶ್ವಾಸಾರ್ಹ ಪಾಲುದಾರರನ್ನು ಆಯ್ಕೆ ಮಾಡಿ. ಇಂದೇ, ಏಂಜಲ್ ಒನ್ ನೊಂದಿಗೆ ಡಿಮ್ಯಾಟ್ ಅಕೌಂಟ್ ತೆರೆಯಿರಿ!

FAQ ಗಳು

1. ನನ್ನ ಏಂಜಲ್ ಒನ್ ಅಕೌಂಟಿಗೆ ಲಿಂಕ್ ಆಗದ ಬ್ಯಾಂಕ್ ಅಕೌಂಟಿನಿಂದ ನಾನು ಹಣವನ್ನು ಸೇರಿಸಬಹುದೇ?

SEBI ಮಾರ್ಗಸೂಚಿಗಳ ಪ್ರಕಾರ ನೋಂದಾಯಿತವಲ್ಲದ ಬ್ಯಾಂಕ್ ಅಕೌಂಟ್‌ಗಳ ಮೂಲಕ ನಾವು ಪಾವತಿಯನ್ನು ಸ್ವೀಕರಿಸುವುದಿಲ್ಲ.

2. ನಾನು ಅನೇಕ ಬ್ಯಾಂಕ್ ಅಕೌಂಟ್‌ಗಳನ್ನು ಸೇರಿಸಬಹುದೇ?

ಹೌದು, ನಿಮ್ಮ ಟ್ರೇಡಿಂಗ್ ಅಕೌಂಟಿನಲ್ಲಿ ನೀವು ಅನೇಕ ಬ್ಯಾಂಕ್ ಅಕೌಂಟ್‌ಗಳನ್ನು ಸೇರಿಸಬಹುದು.

3. ಒಂದು ದಿನದಲ್ಲಿ ನಾನು ಟ್ರಾನ್ಸ್‌ಫರ್ ಮಾಡಬಹುದಾದ ಗರಿಷ್ಠ ಮೊತ್ತ ಎಷ್ಟು?

UPI ಗಾಗಿ, ಕನಿಷ್ಠ ಟ್ರಾನ್ಸಾಕ್ಷನ್ ಮಿತಿ ಇಲ್ಲ, ಆದರೆ UPI ಮೂಲಕ ನೀವು ಪಾವತಿಸಬಹುದಾದ ಗರಿಷ್ಠ ಮೊತ್ತ ₹ 2 ಲಕ್ಷ (ಇದು ನೀವು ಅಕೌಂಟ್ ಹೊಂದಿರುವ ಬ್ಯಾಂಕನ್ನು ಕೂಡ ಅವಲಂಬಿಸಿರುತ್ತದೆ).

ನೆಟ್ ಬ್ಯಾಂಕಿಂಗ್‌ಗಾಗಿ, ಒಂದೇ ಟ್ರಾನ್ಸಾಕ್ಷನ್‌ನಲ್ಲಿ ನೀವು ಟ್ರಾನ್ಸ್‌ಫರ್ ಮಾಡಬಹುದಾದ ಕನಿಷ್ಠ ಮೊತ್ತ ₹50.

4. ನಮ್ಮ ಪೇಮೆಂಟ್ ಗೇಟ್‌ವೇಯಲ್ಲಿ ನಾವು ಎಷ್ಟು ಬ್ಯಾಂಕ್‌ಗಳನ್ನು ಬೆಂಬಲಿಸುತ್ತೇವೆ?

ಎಲ್ಲಾ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಮ್ಮ ಪಾವತಿ ಗೇಟ್‌ವೇಗಳು ಬೆಂಬಲಿಸುತ್ತವೆ.

ನಿಮ್ಮ ಟ್ರಾನ್ಸಾಕ್ಷನ್‌ಗಳಿಗಾಗಿ ನೀವು ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ, ನೀವು ಕೆಲವು ಸೀಮಿತ ಸಂಖ್ಯೆಯ ಬ್ಯಾಂಕ್‌ಗಳಿಂದ ಬ್ಯಾಂಕ್ ಅಕೌಂಟ್‌ಗಳನ್ನು ಬಳಸಬಹುದು.ನೆಟ್‌ಬ್ಯಾಂಕಿಂಗ್‌ಗಾಗಿ ಬಳಸಬಹುದಾದ ಬ್ಯಾಂಕ್‌ಗಳ ಪಟ್ಟಿಯನ್ನು ನೀಡಲಾದ ಪ್ರೋಸೆಸ್ ಫ್ಲೋ ನಲ್ಲಿನೋಡಬಹುದು.

ಆದಾಗ್ಯೂ, ನೀವು UPI (Google Pay ಅಥವಾ PhonePe ಮೂಲಕ ಸೇರಿದಂತೆ) ಬಳಸುತ್ತಿದ್ದರೆ, ನೀವು ಯಾವುದೇ ಬ್ಯಾಂಕಿನ ಅಕೌಂಟ್‌ಗಳನ್ನು ಬಳಸಿ ಟ್ರಾನ್ಸಾಕ್ಷನ್ ಮಾಡಬಹುದು (ನಿಮ್ಮ ಏಂಜಲ್ ಒನ್ ಅಕೌಂಟಿನೊಂದಿಗೆ ನೋಂದಣಿಯಾಗಿದ್ದರೆ).

5. ಆನ್ಲೈನ್ ವಿಧಾನಗಳ ಮೂಲಕ ಹಣವನ್ನು ಸೇರಿಸುವಾಗ ಟ್ರಾನ್ಸಾಕ್ಷನ್ ವಿಫಲತೆಗೆ ಕಾರಣ ಏನು?

ಟ್ರಾನ್ಸಾಕ್ಷನ್ ವಿಫಲಗೊಳ್ಳಲು ಅತ್ಯಂತ ಸಾಮಾನ್ಯ ಕಾರಣಗಳು:

  1. ನಮ್ಮ ಟ್ರಾನ್ಸಾಕ್ಷನ್ ಪ್ರಕ್ರಿಯೆಗಳಿಗೆ ನಿಮ್ಮ ಬ್ಯಾಂಕ್ ಅಕೌಂಟ್ ಪ್ರತಿಕ್ರಿಯೆ ನೀಡುತ್ತಿಲ್ಲ /ನಿಧಾನ ಪ್ರತಿಕ್ರಿಯೆಯನ್ನು ನೀಡುತ್ತಿದೆ 
  2. ದೃಢೀಕರಣದಲ್ಲಿ ವಿಳಂಬದಿಂದಾಗಿ ಟ್ರಾನ್ಸಾಕ್ಷನ್ ಅವಧಿ ಮೀರಿದೆ
  3. ತಪ್ಪು ಪಾಸ್ವರ್ಡ್
  4. ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಸಾಕಷ್ಟು ಹಣ ಲಭ್ಯವಿಲ್ಲ
  5. 3ನೇ ಪಾರ್ಟಿ ಬ್ಯಾಂಕ್ ಅಕೌಂಟ್‌ಗಳ ಮೂಲಕ ಹಣವನ್ನು ಟ್ರಾನ್ಸ್‌ಫರ್ ಮಾಡುವುದು
  6. UPI ಟ್ರಾನ್ಸ್‌ಫರ್‌ಗಳನ್ನು ನೋಂದಾಯಿಸದ ಬ್ಯಾಂಕ್ ಅಕೌಂಟ್‌ಗಳು ಇತ್ಯಾದಿಗಳ ಮೂಲಕ ಮಾಡುವುದು.

ಒಂದು ವೇಳೆ ನೀವು ಇನ್ನೂ ಯಾವುದೇ ಪ್ರಶ್ನೆಗಳನ್ನು ಕೇಳ ಬಯಸಿದರೆ, ನಮ್ಮ ಆ್ಯಪ್/ಪ್ಲಾಟ್‌ಫಾರ್ಮ್‌ನಲ್ಲಿ ಏಂಜಲ್ ಅಸಿಸ್ಟ್‌ಗೆ ಭೇಟಿ ನೀಡಲು ದಯವಿಟ್ಟು ಹಿಂಜರಿಯಬೇಡಿ.

ಈಗಲೇ ನಿಮ್ಮ ಟ್ರೇಡಿಂಗ್ ಅಕೌಂಟಿಗೆ ಹಣವನ್ನು ಸೇರಿಸಿ!