ಭಾರತೀಯ ಹಣಕಾಸು ಮಾರುಕಟ್ಟೆಯು ಆರಂಭಿಕರು ಮತ್ತು ಅನುಭವಿ ಹೂಡಿಕೆದಾರರಿಗೆ ವಿವಿಧ ಹೂಡಿಕೆ ಆಯ್ಕೆಗಳನ್ನು ಹೊಂದಿವೆ. ಇಂದು ಲಭ್ಯವಿರುವ ಅನೇಕ ಸಾಂಪ್ರದಾಯಿಕ ಹೂಡಿಕೆ ಮಾರ್ಗಗಳಲ್ಲಿ, ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ (FD) ಗಳು) ಈಗ ಹಲವಾರು ದಶಕಗಳಿಂದ ಇವೆ. ಹೂಡಿಕೆದಾರರ ಹಲವಾರು ಪೀಳಿಗೆಗಳು ತಮ್ಮ ಹಣವನ್ನು ಕಾಪಾಡಿಕೊಳ್ಳಲು ಮತ್ತು ಬೆಳೆಸಲು ಎಫ್‌ಡಿ (FD) ಗಳ ಮೇಲೆ ಅವಲಂಬಿತವಾಗಿವೆ.
ಈ ಲೇಖನದಲ್ಲಿ, FD ಎಂದರೇನು, ಲಭ್ಯವಿರುವ FD ಗಳ ವಿಧಗಳು, ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ತೆರಿಗೆ ಮತ್ತು ತೆರಿಗೆ ಪ್ರಯೋಜನಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ನಾವು ವಿವರವಾಗಿ ನೋಡೋಣ.
ಫಿಕ್ಸೆಡ್ ಡೆಪಾಸಿಟ್ ಎಫ್‌ಡಿ (FD) ಎಂದರೇನು?
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ಒಂದು ಹೂಡಿಕೆ ಮಾರ್ಗವಾಗಿದ್ದು, ಇಲ್ಲಿ ನಿರ್ದಿಷ್ಟ ಅವಧಿಗೆ ಒಟ್ಟು ಮೊತ್ತವನ್ನು ಡೆಪಾಸಿಟ್ ಮಾಡಲಾಗುತ್ತದೆ. ಎಫ್‌ಡಿ (FD) ಯ ಕಾಲಾವಧಿಯಲ್ಲಿ, ಅಕೌಂಟಿನಲ್ಲಿ ಡೆಪಾಸಿಟ್ ಮಾಡಲಾದ ಅಸಲಿನ ಮೇಲೆ ನೀವು ಬಡ್ಡಿಯನ್ನು ಗಳಿಸುತ್ತೀರಿ. ಈ ಬಡ್ಡಿಯನ್ನು ಅಕೌಂಟಿನಲ್ಲಿ ಮರುಹೂಡಿಕೆ ಮಾಡಬಹುದು ಅಥವಾ ನಿಯಮಿತ ಮಧ್ಯಂತರಗಳಲ್ಲಿ ನಿಮಗೆ ಪಾವತಿಸಬಹುದು.
ಫಿಕ್ಸೆಡ್ ಡೆಪಾಸಿಟ್ ಅವಧಿಯ ಕೊನೆಯಲ್ಲಿ, ನೀವು ಸಂಗ್ರಹಿಸಿದ ಬಡ್ಡಿಯೊಂದಿಗೆ ಅಸಲನ್ನು ವಿತ್‌ಡ್ರಾ ಮಾಡಬಹುದು. ಈ ಸೌಲಭ್ಯವನ್ನು ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿ (NBFC)ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಂತಹ ವಿವಿಧ ಹಣಕಾಸು ಸಂಸ್ಥೆಗಳು ನೀಡುತ್ತವೆ.
ಲಭ್ಯವಿರುವ ಎಫ್‌ಡಿ (FD)ಗಳ ವಿಧಗಳು
ಫೀಚರ್‌ಗಳು, ಪ್ರಯೋಜನಗಳು ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ, ಬ್ಯಾಂಕಿಂಗ್ ವಲಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನೀವು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಬಹುದಾದ ಸಾಮಾನ್ಯ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನೋಡೋಣ.
ಸ್ಟ್ಯಾಂಡರ್ಡ್ ಫಿಕ್ಸೆಡ್ ಡೆಪಾಸಿಟ್‌ಗಳು
ನಿಯಮಿತ ಅಥವಾ ಸ್ಟ್ಯಾಂಡರ್ಡ್ ಫಿಕ್ಸೆಡ್ ಡೆಪಾಸಿಟ್ ಎಂಬುದು ನೀವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೊಂದಿಗೆ ಒಟ್ಟು ಮೊತ್ತವನ್ನು ಡೆಪಾಸಿಟ್ ಮಾಡುವ ಮತ್ತು ಆದಾಯದಲ್ಲಿ ಬಡ್ಡಿಯನ್ನು ಗಳಿಸುವ ಒಂದು ವಿಧಾನವಾಗಿದೆ. ಈ ಎಫ್‌ಡಿ (FD) ಗಳ ಕಾಲಾವಧಿಯು 7 ದಿನಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ನೀವು ಬಡ್ಡಿಯನ್ನು ಮರುಹೂಡಿಕೆ ಮಾಡಲು (ಒಟ್ಟುಗೂಡಿಸಿದ ಎಫ್‌ಡಿ (FD)ಗಳೊಂದಿಗೆ) ಅಥವಾ ನಿಯಮಿತ ಬಡ್ಡಿ ಪಾವತಿಗಳನ್ನು ಪಡೆಯಲು (ಒಟ್ಟುಗೂಡಿಸದ ಎಫ್‌ಡಿ (FD)ಗಳೊಂದಿಗೆ) ಆಯ್ಕೆ ಮಾಡಬಹುದು.
ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್‌ಗಳು
ಇವುಗಳು ನಿಯಮಿತ ಫಿಕ್ಸೆಡ್ ಡೆಪಾಸಿಟ್‌ಗಳಂತೆಯೇ ಇರುತ್ತವೆ, ಆದರೆ ಅವುಗಳು ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಆಗಿರುತ್ತವೆ. ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲಿನ ಎಫ್‌ಡಿ (FD) ಬಡ್ಡಿ ದರಗಳು ಸಾಮಾನ್ಯವಾಗಿ ಸ್ಟ್ಯಾಂಡರ್ಡ್ ಎಫ್‌ಡಿ (FD)ಗಳ ಮೇಲಿನ ದರಗಳಿಗಿಂತ ಹೆಚ್ಚಾಗಿರುತ್ತವೆ. ಹಿರಿಯ ನಾಗರಿಕರ ಎಫ್‌ಡಿ (FD)ಯ ಇತರ ಎಲ್ಲಾ ಫೀಚರ್‌ಗಳು ನಿಯಮಿತ ಎಫ್‌ಡಿ (FD)ಗೆ ಸಮನಾಗಿರುತ್ತವೆ.
ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳು
ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತವೆ. ಈ ಎಫ್‌ಡಿ (FD) ಗಳಲ್ಲಿ ನೀವು ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ ₹1.5 ಲಕ್ಷ. ಹೆಚ್ಚುವರಿಯಾಗಿ, ಈ ಫಿಕ್ಸೆಡ್ ಡೆಪಾಸಿಟ್‌ಗಳು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ಈ ಫಿಕ್ಸೆಡ್ ಡೆಪಾಸಿಟ್‌ಗಳಿಂದ ತೆರಿಗೆ ಪ್ರಯೋಜನಗಳು ಹಳೆಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಮಾತ್ರ ಲಭ್ಯವಿವೆ.
ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್‌ಗಳು
ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಬ್ಯಾಂಕುಗಳಿಗೆ ಬದಲಾಗಿ ಕಾರ್ಪೊರೇಟ್ ಘಟಕಗಳು ನೀಡುತ್ತವೆ. ಈ ಘಟಕಗಳು ಹಣಕಾಸು ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಾಗಿರಬಹುದು. ಈ ಡೆಪಾಸಿಟ್‌ಗಳ ಮೇಲಿನ ಎಫ್‌ಡಿ (FD) ಬಡ್ಡಿ ದರಗಳು ಸಾಮಾನ್ಯವಾಗಿ ಬ್ಯಾಂಕ್ ಎಫ್‌ಡಿ (FD) ದರಗಳಿಗಿಂತ ಹೆಚ್ಚಾಗಿರುತ್ತವೆ. ಈ ಹೂಡಿಕೆಗಳ ಅಪಾಯವನ್ನು ಕಡಿಮೆ ಮಾಡಲು, ನೀವು ನಿಮ್ಮ ಡೆಪಾಸಿಟ್ ಮಾಡುವ ಮೊದಲು ಕಾರ್ಪೊರೇಟ್ ಎಫ್‌ಡಿ (FD)ಗಳ ಕ್ರೆಡಿಟ್ ರೇಟಿಂಗ್ ಅನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ.
ಫ್ಲೆಕ್ಸಿ ಫಿಕ್ಸೆಡ್ ಡೆಪಾಸಿಟ್‌ಗಳು
ಫ್ಲೆಕ್ಸಿ ಫಿಕ್ಸೆಡ್ ಡೆಪಾಸಿಟ್‌ಗಳು ನಿಮ್ಮ ಬ್ಯಾಂಕ್ ಸೇವಿಂಗ್ ಅಕೌಂಟಿಗೆ ಲಿಂಕ್ ಆಗಿರುವ ಫ್ಲೆಕ್ಸಿಬಲ್ ಹೂಡಿಕೆ ಮಾರ್ಗಗಳಾಗಿವೆ. ನಿಮ್ಮ ಸೇವಿಂಗ್ ಅಕೌಂಟಿನಲ್ಲಿನ ಬ್ಯಾಲೆನ್ಸ್ ಮಿತಿಯನ್ನು ಮೀರಿದರೆ, ಹೆಚ್ಚುವರಿ ಫಂಡ್‌ಗಳನ್ನು ನಿಮ್ಮ ಎಫ್‌ಡಿ (FD) ಅಕೌಂಟಿಗೆ ವರ್ಗಾಯಿಸಲಾಗುತ್ತದೆ. ಅದೇ ರೀತಿ, ನಿಮ್ಮ ಸೇವಿಂಗ್ ಅಕೌಂಟಿನಲ್ಲಿನ ಹಣವು ಮಿತಿಗಿಂತ ಕಡಿಮೆ ಇದ್ದರೆ, ಎಫ್‌ಡಿ (FD) ಅಕೌಂಟಿನಿಂದ ತೆಗೆದುಕೊಳ್ಳಲಾಗುತ್ತದೆ.
ಎಫ್‌ಸಿಎನ್ಆರ್ (FCNR) ಫಿಕ್ಸೆಡ್ ಡೆಪಾಸಿಟ್‌ಗಳು
ವಿದೇಶಿ ಕರೆನ್ಸಿ ಅನಿವಾಸಿ ಎಫ್‌ಸಿಎನ್ಆರ್ (FCNR) ಡೆಪಾಸಿಟ್ ಭಾರತದಲ್ಲಿ ಎಫ್‌ಡಿ (FD)ಗಳನ್ನು ನಿರ್ವಹಿಸಲು ಬಯಸುವ ಅನಿವಾಸಿ ಭಾರತೀಯರಿಗೆ ಸೂಕ್ತ ಆಯ್ಕೆಯಾಗಿದೆ. ನೀವು ಎನ್ ಆರ್ ಐ (NRI) ಆಗಿದ್ದರೆ ಮತ್ತು ಭಾರತಕ್ಕೆ ವಿದೇಶಿ ಕರೆನ್ಸಿಗಳಲ್ಲಿ ನಿಮ್ಮ ಉಳಿತಾಯವನ್ನು ಮರುನಿರ್ದೇಶಿಸಲು ಮತ್ತು ಸುರಕ್ಷತಾ ನೆಟ್ ಬ್ಯಾಕ್ ಹೋಮ್ ನಿರ್ಮಿಸಲು ಬಯಸಿದರೆ ಇದು ಸಹಾಯಕವಾಗುತ್ತದೆ. ಎಫ್‌ಸಿಎನ್ಆರ್ (FCNR) ಡೆಪಾಸಿಟ್‌ಗಳ ಮೂಲಕ ಭಾರತಕ್ಕೆ ವಾಪಸಾತಿ ಮಾಡಬಹುದಾದ ಕರೆನ್ಸಿಗಳಿಗೆ ವಿವಿಧ ಬ್ಯಾಂಕ್‌ಗಳು ವಿವಿಧ ನಿಯಮಗಳನ್ನು ಹೊಂದಿವೆ.
ಟಾಪ್ 16 ಬ್ಯಾಂಕ್‌ಗಳು ಮತ್ತು ಅವುಗಳ ಬಡ್ಡಿ ದರಗಳು
ಭಾರತದ ಟಾಪ್ ಬ್ಯಾಂಕ್‌ಗಳು ಮತ್ತು ಅವುಗಳು ಪ್ರಮಾಣಿತ ಮತ್ತು ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್‌ಗಳಿಗಾಗಿ ನೀಡುವ ಎಫ್‌ಡಿ (FD) ಬಡ್ಡಿ ದರಗಳನ್ನು ವಿವರವಾಗಿ ನೋಡೋಣ.
ಬ್ಯಾಂಕ್ ಹೆಸರು | ನಿಯಮಿತ ಎಫ್‌ಡಿಗಳಿಗೆ ವಾರ್ಷಿಕ ಎಫ್‌ಡಿ (FD) ಬಡ್ಡಿ ದರಗಳು | ಹಿರಿಯ ನಾಗರಿಕರ ಎಫ್‌ಡಿ (FD) ಗಳಿಗೆ ವಾರ್ಷಿಕ ಎಫ್‌ಡಿ (FD) ಬಡ್ಡಿ ದರಗಳು |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | 3.00% ರಿಂದ 7.29% | 3.50% ರಿಂದ 7.82% |
ಹೆಚ್ ಡಿ ಎಫ್ ಸಿ(HDFC) ಬ್ಯಾಂಕ್ | 3.00% ರಿಂದ 7.20% | 3.50% ರಿಂದ 7.75% |
ಆಕ್ಸಿಸ್ ಬ್ಯಾಂಕ್ | 3.00% ರಿಂದ 7.30% | 3.50% ರಿಂದ 7.80% |
ಐ ಸಿ ಐ ಸಿ ಐ (ICICI) ಬ್ಯಾಂಕ್ | 3.00% ರಿಂದ 7.25% | 3.50% ರಿಂದ 7.65% |
ಕೋಟಕ್ ಮಹೀಂದ್ರಾ ಬ್ಯಾಂಕ್ | 2.75% ರಿಂದ 7.25% | 3.25% ರಿಂದ 7.75% |
ಇಂಡಸ್ಇಂಡ್ ಬ್ಯಾಂಕ್ | 3.50% ರಿಂದ 7.85% | 4.25% ರಿಂದ 8.25% |
ಐ ಡಿ ಬಿ ಐ (IDBI) ಬ್ಯಾಂಕ್ | 3.00% ರಿಂದ 7.30% | 3.50% ರಿಂದ 7.80% |
ಐ ಡಿ ಎಫ್ ಸಿ (IDFC) ಫಸ್ಟ್ ಬ್ಯಾಂಕ್ | 3.00% ರಿಂದ 7.75% | 3.50% ರಿಂದ 8.25% |
ಇಂಡಿಯನ್ ಬ್ಯಾಂಕ್ | 2.80% ರಿಂದ 7.25% | 2.80% ರಿಂದ 8.00% |
ಇಂಡಿಯನ್ ಓವರ್ಸಿಸ್ ಬ್ಯಾಂಕ್ | 4.00% ರಿಂದ 7.25% | 4.75% ರಿಂದ 8.00% |
ಬ್ಯಾಂಕ್ ಆಫ್ ಬರೋಡಾ | 3.00% ರಿಂದ 7.25% | 3.50% ರಿಂದ 7.75% |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 3.50% ರಿಂದ 7.30% | 4.00% ರಿಂದ 8.10% |
ಕೆನರಾ ಬ್ಯಾಂಕ್ | 4.00% ರಿಂದ 7.25% | 4.00% ರಿಂದ 8.00% |
ಬ್ಯಾಂಕ್ ಆಫ್ ಇಂಡಿಯಾ | 3.00% ರಿಂದ 7.25% | 3.00% ರಿಂದ 7.25% |
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 3.50% ರಿಂದ 7.25% | 4.00% ರಿಂದ 7.75% |
ಎಸ್ (YES) ಬ್ಯಾಂಕ್ | 3.25% ರಿಂದ 7.50% | 3.75% ರಿಂದ 8.00% |
ಎಫ್‌ಡಿ (FD) ಅಕೌಂಟ್‌ಗಳ ಫೀಚರ್‌ಗಳು
ಫಿಕ್ಸೆಡ್ ಡೆಪಾಸಿಟ್‌ಗಳು ಯಾವುವು ಮತ್ತು ಭಾರತದ ಟಾಪ್ ಬ್ಯಾಂಕ್‌ಗಳ ಎಫ್‌ಡಿ (FD) ಬಡ್ಡಿ ದರಗಳ ಬಗ್ಗೆ ನೀವು ಈಗ ಕೆಲವು ವಿಷಯಗಳನ್ನು ತಿಳಿದುಕೊಂಡಿದ್ದೀರಿ, ಈಗ ಎಫ್‌ಡಿ (FD) ಗಳ ಪ್ರಮುಖ ಫೀಚರ್‌ಗಳನ್ನು ನೋಡೋಣ.
ಫ್ಲೆಕ್ಸಿಬಲ್ ಹೂಡಿಕೆ ಅವಧಿ
ಫಿಕ್ಸೆಡ್ ಡೆಪಾಸಿಟ್‌ಗಳು 7 ದಿನಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಫ್ಲೆಕ್ಸಿಬಲ್ ಹೂಡಿಕೆ ಅವಧಿಗಳೊಂದಿಗೆ ಬರುತ್ತವೆ. ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವ ಸಮಯದಲ್ಲಿ, ನೀವು ಹೂಡಿಕೆ ಮಾಡಲು ಬಯಸುವ ಕಾಲಾವಧಿಯನ್ನು ಆಯ್ಕೆ ಮಾಡಬಹುದು.
ಸಂಯುಕ್ತ ಆದಾಯ
ನೀವು ಸಂಯುಕ್ತಎಫ್‌ಡಿ (FD) ಆಯ್ಕೆಯನ್ನು ಆರಿಸಿದರೆ ಫಿಕ್ಸೆಡ್ ಡೆಪಾಸಿಟ್‌ಗಳು ಹೂಡಿಕೆ ಅವಧಿಯಲ್ಲಿ ಸಂಯುಕ್ತ ಆದಾಯವನ್ನು ಒದಗಿಸುತ್ತವೆ. ಇದರರ್ಥ ನೀವು ಅಸಲಿನ ಮೇಲೆ ಗಳಿಸುವ ಬಡ್ಡಿಯನ್ನು ಎಫ್‌ಡಿ (FD) ಅಕೌಂಟಿನಲ್ಲಿ ಮರುಹೂಡಿಕೆ ಮಾಡಲಾಗುತ್ತದೆ, ಆದ್ದರಿಂದ ನೀವು ಬಡ್ಡಿಯ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ.
ಹಿರಿಯ ನಾಗರಿಕರಿಗೆ ಆದ್ಯತೆಯ ನಿಯಮಗಳು
ಭಾರತದ ಸುಮಾರು ಎಲ್ಲಾ ಪ್ರಮುಖ ವಾಣಿಜ್ಯ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಆದ್ಯತೆಯ ಎಫ್‌ಡಿ (FD) ಬಡ್ಡಿ ದರಗಳನ್ನು ನೀಡುತ್ತವೆ. ದರಗಳು ಸಾಮಾನ್ಯವಾಗಿ ಸುಮಾರು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಾಗಿರುತ್ತವೆ, ಆದರೆ ಅವುಗಳು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಬದಲಾಗಬಹುದು.
ಅಡಮಾನವಾಗಿ ಅಡವಿಡಲು ಅರ್ಹವಾಗಿದೆ
ನೀವು ಸುರಕ್ಷಿತ ಲೋನ್ ಪಡೆಯುತ್ತಿದ್ದರೆ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಅಡಮಾನವಾಗಿ ನೀಡಬಹುದು. ಅಡಮಾನವಾಗಿ ಎಫ್‌ಡಿ (FD) ಯನ್ನು ಅಡವಿಡುವ ನಿಯಮ ಮತ್ತು ಷರತ್ತುಗಳು ಸಾಲದಾತರನ್ನು ಅವಲಂಬಿಸಿರುತ್ತವೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಅಡವಿಡಲಾದ ಡೆಪಾಸಿಟ್‌ನ ಸುಮಾರು 80% ರಿಂದ 90% ಲೋನ್ ಮೊತ್ತ ಸಿಗುತ್ತದೆ.
ಅಕಾಲಿಕ ವಿತ್‌ಡ್ರಾವಲ್‌ಗಳು
ಹೂಡಿಕೆ ಅವಧಿ ಮುಗಿಯುವ ಮೊದಲು ನೀವು ನಿಮ್ಮ ಕಾಲೇಬಲ್ ಫಿಕ್ಸೆಡ್ ಡೆಪಾಸಿಟ್ ಅಕೌಂಟಿನಲ್ಲಿ ಮೊತ್ತವನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾ ಮಾಡಬಹುದು. ಆದಾಗ್ಯೂ, ಸಾಲದಾತರು ಅಂತಹ ವಿತ್‌ಡ್ರಾವಲ್‌ಗಳ ಮೇಲೆ ದಂಡಗಳನ್ನು ವಿಧಿಸಬಹುದು. ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಿ.
ಡಿ ಐ ಸಿ ಜಿ ಸಿ (DICGC) ಕವರೇಜ್
ವಾಣಿಜ್ಯ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಹೊಂದಿರುವ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ (DICGC)) ಇನ್ಶೂರ್ ಮಾಡುತ್ತದೆ, ಇದು ಆರ್‌ಬಿಐ (RBI)ನ ವಿಶೇಷ ವಿಭಾಗವಾಗಿದೆ. ಪ್ರತಿ ವಿಶಿಷ್ಟ ಎಫ್‌ಡಿ (FD) ಅಕೌಂಟಿಗೆ ಗರಿಷ್ಠ ಕವರೇಜ್ ಮೊತ್ತ ₹5 ಲಕ್ಷ ಆಗಿದೆ.
ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗೆ ಅರ್ಹತಾ ಮಾನದಂಡ
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯಲು ನಿಖರವಾದ ಅರ್ಹತಾ ಮಾನದಂಡವು ಒಂದು ಸಾಲದಾತರಿಂದ ಇನ್ನೊಂದಕ್ಕೆ ಸ್ವಲ್ಪ ಬದಲಾಗಬಹುದು. ಆದಾಗ್ಯೂ, ಎಫ್‌ಡಿ (FD) ಅಕೌಂಟಿಗೆ ಅರ್ಹರಾಗಿರುವ ವ್ಯಕ್ತಿಗಳ ವರ್ಗಗಳು ಈ ಕೆಳಗಿನವುಗಳು:
- ನಿವಾಸಿ ಭಾರತೀಯರು
- ಅನಿವಾಸಿ ಭಾರತೀಯರು (ಎನ್ ಆರ್ ಇ (NRE)/ಎನ್ ಆರ್ ಒ (NRO) /ಎಫ್ ಸಿ ಎನ್ ಆರ್ (FCNR) ಫಿಕ್ಸೆಡ್ ಡೆಪಾಸಿಟ್)
- ಹಿಂದೂ ಅವಿಭಕ್ತ ಕುಟುಂಬಗಳು (ಎಚ್‌ಯುಎಫ್ (HUF)ಗಳು)
- ಏಕಮಾತ್ರ ಮಾಲೀಕತ್ವಗಳು
- ಪಾಲುದಾರಿಕೆ ಸಂಸ್ಥೆಗಳು
- ಸೀಮಿತ ಕಂಪನಿಗಳು
- ಸೊಸೈಟಿಗಳು, ಸಂಘಗಳು, ಟ್ರಸ್ಟ್‌ಗಳು ಇತ್ಯಾದಿ.
ಎಫ್‌ಡಿ (FD) ಗಳಿಗೆ ಲಾಕ್-ಇನ್ ಅವಧಿ ಎಂದರೇನು?
ಫಿಕ್ಸೆಡ್ ಡೆಪಾಸಿಟ್ ಅಕೌಂಟಿನ ಒಟ್ಟಾರೆ ಪ್ರಯೋಜನಗಳು ಮತ್ತು ಮಿತಿಗಳನ್ನು ನಾವು ನೋಡುವ ಮೊದಲು, ಎಫ್‌ಡಿ (FD) ಗಳ ಲಾಕ್-ಇನ್ ಅವಧಿಯನ್ನು ನೋಡೋಣ. ಸ್ಟ್ಯಾಂಡರ್ಡ್ ಕಾಲೇಬಲ್ ಫಿಕ್ಸೆಡ್ ಡೆಪಾಸಿಟ್‌ಗಳಿಗೆ, ಯಾವುದೇ ನಿರ್ದಿಷ್ಟ ಲಾಕ್-ಇನ್ ಅವಧಿ ಇಲ್ಲ. ಎಫ್‌ಡಿ (FD) ಅಕೌಂಟ್ ತೆರೆಯುವ ಸಮಯದಲ್ಲಿ ನೀವು ಆಯ್ಕೆ ಮಾಡುವ ಹೂಡಿಕೆ ಅವಧಿಯು ನೀವು ಹೂಡಿಕೆ ಮಾಡಬಹುದಾದ ಗರಿಷ್ಠ ಅವಧಿಯಾಗಿದೆ. ಆದಾಗ್ಯೂ, ಅಗತ್ಯವಿದ್ದರೆ ನೀವು ನಿಮ್ಮ ಹಣವನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾ ಮಾಡಲು ಸಾಧ್ಯವಿದೆ ( ದಂಡಗಳಿಗೆ ಒಳಪಟ್ಟಿರುತ್ತದೆ).
ಪೂರ್ವನಿರ್ಧರಿತ ಲಾಕ್-ಇನ್ ಅವಧಿಯೊಂದಿಗೆ ಒಂದು ನಿರ್ದಿಷ್ಟ ರೀತಿಯ ಫಿಕ್ಸೆಡ್ ಡೆಪಾಸಿಟ್ ಬರುತ್ತದೆ. ಇದು ತೆರಿಗೆ ಉಳಿತಾಯ ಎಫ್‌ಡಿ (FD) ಆಗಿದೆ, ಇದು 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿತಾಯವನ್ನು ಒದಗಿಸುತ್ತದೆ. ಈ ತೆರಿಗೆ-ಉಳಿಸುವ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಲಾಕ್-ಇನ್ ಅವಧಿ 5 ವರ್ಷಗಳು. ಈ ಕಾಲಾವಧಿ ಪೂರ್ಣಗೊಳ್ಳುವ ಮೊದಲು ನೀವು ನಿಮ್ಮ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ.
ಎಫ್‌ಡಿ (FD) ಮೇಲಿನ ಲೋನ್ ಎಂದರೇನು?
ಇದು ನಿಮಗೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿರುವ ಫಿಕ್ಸೆಡ್ ಡೆಪಾಸಿಟ್‌ಗಳ ಇನ್ನೊಂದು ಫೀಚರ್ ಆಗಿದೆ. ಫಿಕ್ಸೆಡ್ ಡೆಪಾಸಿಟ್‌ಗಳ ಮೇಲಿನ ಲೋನ್ ಮೂಲತಃ ಒಂದು ಕ್ರೆಡಿಟ್ ಸೌಲಭ್ಯವಾಗಿದ್ದು, ಇದರಲ್ಲಿ ನಿಮ್ಮ ಎಫ್‌ಡಿ (FD)ಯನ್ನು ಅಡಮಾನವಾಗಿ ಇಡುವ ಮೂಲಕ ನೀವು ಹಣವನ್ನು ಸಾಲ ಪಡೆಯುತ್ತೀರಿ. ಅಡವಿಡಲಾದ ಫಿಕ್ಸೆಡ್ ಡೆಪಾಸಿಟ್‌ನ ಶೇಕಡಾವಾರು ರೂಪದಲ್ಲಿ ನೀವು ಪಡೆಯಬಹುದಾದ ಗರಿಷ್ಠ ಮೊತ್ತವನ್ನು ಸಾಲದಾತರು ನಿಗದಿಪಡಿಸುತ್ತಾರೆ. ಈ ಫೀಚರನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಚರ್ಚಿಸೋಣ.
ನೀವು ಬ್ಯಾಂಕಿನೊಂದಿಗೆ ₹5 ಲಕ್ಷಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದೀರಿ. ಈ ಎಫ್‌ಡಿ (FD) ಯ ಕಾಲಾವಧಿ 3 ವರ್ಷಗಳು. ಎರಡನೇ ವರ್ಷದ ಕೊನೆಯಲ್ಲಿ, ನೀವು ನಿಮ್ಮ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯನ್ನು ಅನುಭವಿಸುತ್ತೀರಿ ಮತ್ತು ತಕ್ಷಣವೇ ₹2 ಲಕ್ಷಗಳ ಅಗತ್ಯವಿದೆ. ನೀವು ಎಫ್‌ಡಿ (FD)ಯನ್ನು ಫೋರ್‌ಕ್ಲೋಸ್ ಮಾಡಲು ಬಯಸಬಹುದು, ಆದರೆ ಇದರರ್ಥ ನೀವು ಮೂರನೇ ವರ್ಷದಲ್ಲಿ ಗಳಿಸಿದ ಬಡ್ಡಿಯನ್ನು ಕಳೆದುಕೊಳ್ಳುತ್ತೀರಿ.
ಬದಲಾಗಿ, ನೀವು ಎಫ್‌ಡಿ (FD) ಮೇಲೆ ಲೋನನ್ನು ಪಡೆಯಬಹುದು. ನೀವು ಪಡೆಯಬಹುದಾದ ಗರಿಷ್ಠ ಮೊತ್ತ ಎಫ್‌ಡಿ (FD) ಮೊತ್ತದ 90% ಆಗಿದೆ ಎಂದು ಅಂದುಕೊಳ್ಳೋಣ. ಇದರರ್ಥ ನೀವು ₹4.5 ಲಕ್ಷಗಳವರೆಗೆ ಲೋನ್ ಪಡೆಯಬಹುದು. ಆದಾಗ್ಯೂ, ನಿಮಗೆ ಕೇವಲ ₹2 ಲಕ್ಷಗಳ ಅಗತ್ಯವಿರುವುದರಿಂದ, ನೀವು ಆ ಮೊತ್ತವನ್ನು ಎಫ್‌ಡಿ (FD) ಮೇಲಿನ ಲೋನ್ ಆಗಿ ಪಡೆಯಬಹುದು ಮತ್ತು ನಿಮ್ಮ ಹೂಡಿಕೆಯನ್ನು ಹಾಗೆಯೇ ಇರಿಸಬಹುದು.
ಎಫ್‌ಡಿ (FD) ಗಳಿಕೆಗಳ ತೆರಿಗೆ
ಫಿಕ್ಸೆಡ್ ಡೆಪಾಸಿಟ್‌ಗಳ ತೆರಿಗೆಯು ನೀವು ತೆರೆದ ಎಫ್‌ಡಿ (FD) ಅಕೌಂಟ್ ಪ್ರಕಾರವನ್ನು ಅವಲಂಬಿಸಿರುತ್ತದೆ. ಬನ್ನಿ, ವಿವರಗಳನ್ನು ನೋಡೋಣ.
ನಿಯಮಿತ ಎಫ್‌ಡಿ (FD) ಗಳ ತೆರಿಗೆ
ಫಿಕ್ಸೆಡ್ ಡೆಪಾಸಿಟ್‌ನಿಂದ ಗಳಿಕೆಯು ಡೆಪಾಸಿಟ್ ಮಾಡಲಾದ ಅಸಲಿನ ಮೇಲೆ ನೀಡಲಾಗುವ ಬಡ್ಡಿಯ ರೂಪದಲ್ಲಿದೆ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ ‘ಇತರ ಮೂಲಗಳಿಂದ ಆದಾಯ’ ಎಂದು ಈ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದ್ದರಿಂದ, ಇದನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ನಿಮಗೆ ಅನ್ವಯವಾಗುವ ಸ್ಲ್ಯಾಬ್ ದರದ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
ಇಂದು ಬ್ಯಾಂಕುಗಳು ಮೂಲದಲ್ಲಿ ಬಡ್ಡಿಯ ಮೇಲೆ ತೆರಿಗೆಯನ್ನು ಕಡಿತಗೊಳಿಸುತ್ತವೆ. ನಿಮ್ಮ ಒಟ್ಟು ತೆರಿಗೆ ವಿಧಿಸಬಹುದಾದ ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆ ಇದ್ದರೆ, ನೀವು ಫಾರಂ 15G (ಅಥವಾ ನೀವು ಹಿರಿಯ ನಾಗರಿಕರಾಗಿದ್ದರೆ ಫಾರಂ 15H) ಅನ್ನು ಬ್ಯಾಂಕಿಗೆ ಸಲ್ಲಿಸಬಹುದು. ನೀವು ಯಾವುದೇ ತೆರಿಗೆ ವಿಧಿಸಬಹುದಾದ ಆದಾಯವನ್ನು ಹೊಂದಿಲ್ಲವಾದ್ದರಿಂದ ಟಿ ಡಿ ಎಸ್ (TDS) ಅನ್ನು ಕಡಿತಗೊಳಿಸದೇ ಇರುವ ಕೋರಿಕೆಯಾಗಿದೆ.
ತೆರಿಗೆ-ಉಳಿತಾಯ ಎಫ್‌ಡಿ (FD) ಗಳ ತೆರಿಗೆ
ತೆರಿಗೆ ಉಳಿತಾಯ ಎಫ್‌ಡಿ (FD)ಗಳಲ್ಲಿ ಡೆಪಾಸಿಟ್ ಮಾಡಲಾದ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ. ಲಭ್ಯವಿರುವ ಗರಿಷ್ಠ ಕಡಿತದ ಮೊತ್ತ ₹1.5 ಲಕ್ಷಗಳು. ಈ ಮೊದಲು ನಮೂದಿಸಿದಂತೆ, ಈ ಫಿಕ್ಸೆಡ್ ಡೆಪಾಸಿಟ್‌ಗಳು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಈ ಎಫ್‌ಡಿ (FD) ಗಳ ಮೇಲೆ ನೀವು ಗಳಿಸುವ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಶ್ರೇಣಿಯ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
ಎಫ್‌ಡಿ (FD) ಯ ಅನುಕೂಲಗಳು
ಫಿಕ್ಸೆಡ್ ಡೆಪಾಸಿಟ್ ಎಂದರೇನು ಮತ್ತು ಅದರ ಪ್ರಮುಖ ಫೀಚರ್‌ಗಳು ಯಾವುವು ಎಂದು ಈಗ ನಿಮಗೆ ತಿಳಿದಿರುವುದರಿಂದ, ಈ ಹಣಕಾಸು ಪ್ರಾಡಕ್ಟ್‌ನ ಪ್ರಯೋಜನಗಳನ್ನು ನೋಡಲು ಇದು ಸೂಕ್ತ ಸಮಯವಾಗಿದೆ. ಫಿಕ್ಸೆಡ್ ಡೆಪಾಸಿಟ್‌ಗಳು ಈ ಕೆಳಗೆ ನೀಡಿರುವ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ:
ಖಚಿತ ಆದಾಯ
ಮಾರುಕಟ್ಟೆ ಸೈಕಲ್‌ಗಳು ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಹೊರತುಪಡಿಸಿ, ಡೆಪಾಸಿಟ್ ಮಾಡಿದ ಮೊತ್ತದ ಮೇಲೆ ಫಿಕ್ಸೆಡ್ ಡೆಪಾಸಿಟ್‌ಗಳು ಖಚಿತ ಆದಾಯವನ್ನು ನೀಡುತ್ತವೆ. ಈ ಭದ್ರತೆಯು ಯಾವುದೇ ಅಪಾಯವಿಲ್ಲದ ಸಂರಕ್ಷಣಾತ್ಮಕ ಹೂಡಿಕೆದಾರರಿಗೆ ಭರವಸೆ ನೀಡುತ್ತದೆ.
ಫ್ಲೆಕ್ಸಿಬಲ್ ಹೂಡಿಕೆ ಆಯ್ಕೆ
ಫಿಕ್ಸೆಡ್ ಡೆಪಾಸಿಟ್‌ಗಳು ಹೂಡಿಕೆದಾರರಿಗೆ ಅತ್ಯುತ್ತಮ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತವೆ. ನೀವು ಹೂಡಿಕೆ ಮಾಡಲು ಬಯಸುವ ಮೊತ್ತ, ಹೂಡಿಕೆಯ ಕಾಲಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ಅಗತ್ಯವಿದ್ದರೆ ಮೆಚ್ಯೂರಿಟಿಗೆ ಮುಂಚಿತವಾಗಿ ಮೊತ್ತವನ್ನು ವಿತ್‌ಡ್ರಾ ಮಾಡಬಹುದು. ಇದು ನಿಮ್ಮ ಹೂಡಿಕೆಯ ಗುರಿಗಳಿಗೆ ಹೊಂದಿಕೊಂಡಿರುತ್ತವೆ.
ಹೆಚ್ಚಿನ ಲಿಕ್ವಿಡಿಟಿ
ನಿಗದಿತ ಹೂಡಿಕೆ ಅವಧಿ ಇದ್ದರೂ, ನಿಮಗೆ ತುರ್ತು ಫಂಡ್‌ಗಳ ಅಗತ್ಯವಿದ್ದರೆ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಫೋರ್‌ಕ್ಲೋಸ್ ಮಾಡಬಹುದು. ನೀವು ಅನ್ವಯವಾಗುವ ಯಾವುದೇ ದಂಡವನ್ನು ಪಾವತಿಸಬೇಕಾಗುತ್ತದೆ, ಆದರೆ ಈ ಫೀಚರ್ ಎಫ್‌ಡಿ (FD) ಗಳನ್ನು ಲಿಕ್ವಿಡಿಟಿಗೆ ಸೇರಿಸುತ್ತದೆ.
ಕಡಿಮೆ-ಅಪಾಯದ ಹೂಡಿಕೆ
ಆದಾಯವು ಖಚಿತವಾಗಿರುವುದರಿಂದ ಮತ್ತು ಮಾರುಕಟ್ಟೆಯ ಕಾರ್ಯಕ್ಷಮತೆಗೆ ಲಿಂಕ್ ಆಗಿಲ್ಲದಿರುವುದರಿಂದ, ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಒಳಗೊಂಡಿರುವ ಅಪಾಯವು ತುಂಬಾ ಕಡಿಮೆಯಾಗಿರುತ್ತದೆ. ಇದಲ್ಲದೆ, ಡಿಐಸಿಜಿಸಿ (DICGC) ಇನ್ಶೂರೆನ್ಸ್ ಕವರೇಜ್ ಸೇರ್ಪಡೆಯು ನಿಮ್ಮ ಹಣಕ್ಕೆ ಮತ್ತೊಂದು ಹಂತದ ಭದ್ರತೆಯನ್ನು ಸೇರಿಸುತ್ತದೆ.
ತೆರಿಗೆ ಪ್ರಯೋಜನಗಳು
ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳು ನಿಮ್ಮ ಒಟ್ಟಾರೆ ತೆರಿಗೆ ವಿಧಿಸಬಹುದಾದ ಆದಾಯವನ್ನು ₹1.5 ಲಕ್ಷಗಳವರೆಗೆ ಕಡಿಮೆ ಮಾಡುವ ಮೂಲಕ ಆದಾಯ ತೆರಿಗೆಯ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನೀವು ಹೆಚ್ಚಿನ ತೆರಿಗೆ ಶ್ರೇಣಿಯಲ್ಲಿ ಇದ್ದರೆ ಮತ್ತು ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಆದಾಯವನ್ನು ನೀವು ಹೊಂದಿದ್ದರೆ ಇದು ಪ್ರಯೋಜನಕಾರಿಯಾಗಿದೆ.
ಎಫ್‌ಡಿ (FD) ಮಿತಿಗಳು
ಅದರ ಅನೇಕ ಪ್ರಯೋಜನಗಳ ಹೊರತಾಗಿಯೂ, ಫಿಕ್ಸೆಡ್ ಡೆಪಾಸಿಟ್ ಕೂಡ ತನ್ನದೇ ಆದ ಮಿತಿಗಳನ್ನು ಹೊಂದಿದೆ, ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಒಟ್ಟು ಮೊತ್ತದ ಅವಶ್ಯಕತೆ
ಫಿಕ್ಸೆಡ್ ಡೆಪಾಸಿಟ್‌ಗಳ ಪ್ರಮುಖ ಮಿತಿಗಳಲ್ಲಿ ಒಂದು ಎಂದರೆ ಉತ್ತಮ ಆದಾಯವನ್ನು ಗಳಿಸಲು ನಿಮಗೆ ಒಟ್ಟು ಮೊತ್ತದ ಅಗತ್ಯವಿದೆ. ₹5,000 ರಷ್ಟು ಕಡಿಮೆ ಡೆಪಾಸಿಟ್‌ಗಳೊಂದಿಗೆ ಬ್ಯಾಂಕ್‌ಗಳು ಈಗ ನಿಮಗೆ ಎಫ್‌ಡಿ (FD) ಅಕೌಂಟ್‌ಗಳನ್ನು ತೆರೆಯಲು ಅನುಮತಿ ನೀಡಿದರೂ ಕೂಡ, ನೀವು ಗಮನಾರ್ಹ ಬಡ್ಡಿಯನ್ನು ಗಳಿಸಲು ಬಯಸಿದರೆ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ.
ಸ್ಥಿರ ಆದಾಯ
ಎಫ್‌ಡಿ (FD) ಬಡ್ಡಿ ದರಗಳನ್ನು ಹೂಡಿಕೆ ಅವಧಿಯುದ್ದಕ್ಕೂ ಫಿಕ್ಸೆಡ್ ಮಾಡಲಾಗುತ್ತದೆ. ಇತರ ಹೂಡಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸದೇ ಇರುವ ಹಂತಗಳಲ್ಲಿ ಇದು ಪ್ರಯೋಜನಕಾರಿಯಾಗಬಹುದು. ಆದರೆ, ಇತರ ಹೂಡಿಕೆಗಳು ಮಾರುಕಟ್ಟೆಯನ್ನು ಮೀರಿದ ಹಂತಗಳಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಸಂದರ್ಭದಲ್ಲಿ ಇದು ನಿಮಗೆ ಪ್ರಯೋಜನಕಾರಿಯಾಗದೆ ಇರಬಹುದು.
ದೀರ್ಘಾವಧಿಯ ಹೂಡಿಕೆ
ನಿಮ್ಮ ಎಫ್‌ಡಿ (FD) ಯನ್ನು ಮೆಚುರಿಟಿಗೆ ಮುಂಚಿತವಾಗಿ ವಿತ್‌ಡ್ರಾ ಮಾಡಲು ನೀವು ದಂಡವನ್ನು ಪಾವತಿಸಲು ಬಯಸದಿದ್ದರೆ, ನೀವು ಹೂಡಿಕೆ ಅವಧಿಯ ಉದ್ದಕ್ಕೂ ಹೂಡಿಕೆ ಮಾಡಿರಬೇಕಾಗುತ್ತದೆ. ಎಫ್‌ಡಿ (FD) ತೆರೆಯುವ ಸಮಯದಲ್ಲಿ ನೀವು ಆಯ್ಕೆ ಮಾಡಿದ ಕಾಲಾವಧಿಯನ್ನು ಅವಲಂಬಿಸಿ ಇದು ಹಲವಾರು ವರ್ಷಗಳಾಗಿರಬಹುದು.
ಎಫ್‌ಡಿ (FD) ಅಕೌಂಟ್ ತೆರೆಯುವುದು ಹೇಗೆ?
ಫಿಕ್ಸೆಡ್ ಡೆಪಾಸಿಟ್‌ಗಳ ಸಾಧಕಗಳು ಮತ್ತು ಬಾಧಕಗಳನ್ನು ನೀವು ನೋಡಿದ ನಂತರ, ನೀವು ಎಫ್‌ಡಿ (FD) ತೆರೆಯುವ ಬಗ್ಗೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನೀವು ಮುಂದುವರಿಯಲು ನಿರ್ಧರಿಸಿದರೆ, ಕೆಳಗೆ ವಿವರಿಸಿದಂತೆ ಎಫ್‌ಡಿ (FD) ತೆರೆಯಲು ನೀವು ಸಾಮಾನ್ಯ ಪ್ರಕ್ರಿಯೆಯನ್ನು ಅನುಸರಿಸಬೇಕಾಗಬಹುದು.
ಆನ್ಲೈನಿನಲ್ಲಿ ಎಫ್‌ಡಿ (FD) ತೆರೆಯುವುದು ಹೇಗೆ:
- ನಿಮ್ಮ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
- ಹೊಸ ಫಿಕ್ಸೆಡ್ ಡೆಪಾಸಿಟ್ ಆಯ್ಕೆಯನ್ನು ಹುಡುಕಿ ಮತ್ತು ಅದನ್ನು ಆಯ್ಕೆ ಮಾಡಿ.
- ಎಫ್‌ಡಿ (FD) ಯ ವಿವರಗಳು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯಂತಹ ಅಗತ್ಯ ವಿವರಗಳೊಂದಿಗೆ ಆನ್ಲೈನ್ ಎಫ್‌ಡಿ (FD) ತೆರೆಯುವ ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿರುವ ಯಾವುದೇ ಇತರ ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಗಳನ್ನು ಅಪ್ಲೋಡ್ ಮಾಡಿ.
- ನಾಮಿನೇಶನ್ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಎಫ್‌ಡಿ (FD) ತೆರೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ.
ಆಫ್‌ಲೈನ್‌ನಲ್ಲಿ ಎಫ್‌ಡಿ (FD) ತೆರೆಯುವುದು ಹೇಗೆ:
- ನೀವು ಎಫ್‌ಡಿ (FD) ತೆರೆಯಲು ಬಯಸುವ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ.
- ಎಫ್‌ಡಿ (FD) ಅಕೌಂಟ್ ತೆರೆಯುವ ಫಾರ್ಮ್ ಕೇಳಿ ಮತ್ತು ಅದರಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
- ಈ ಫಾರಂನೊಂದಿಗೆ, ಅಗತ್ಯವಿರುವ ಯಾವುದೇ ಇತರ ಡಾಕ್ಯುಮೆಂಟ್‌ಗಳು ಮತ್ತು ಪುರಾವೆಗಳನ್ನು ಲಗತ್ತಿಸಿ.
- ನೀವು ಡೆಪಾಸಿಟ್ ಮಾಡಲು ಬಯಸುವ ಮೊತ್ತಕ್ಕೆ ನಗದು ಅಥವಾ ಚೆಕ್‌ನೊಂದಿಗೆ ಮೇಲಿನ ಪೇಪರ್‌ವರ್ಕ್ ಸಲ್ಲಿಸಿ.
ಎಫ್‌ಡಿ (FD) ಕ್ಯಾಲ್ಕುಲೇಟರ್
ನೀವು ಫಿಕ್ಸೆಡ್ ಡೆಪಾಸಿಟ್ ತೆರೆಯುವ ಮೊದಲು, ಎಫ್‌ಡಿ (FD) ಬಡ್ಡಿ ದರಗಳನ್ನು ಪರಿಶೀಲಿಸಬೇಕು ಮತ್ತು ಡೆಪಾಸಿಟ್ ಮಾಡಿದ ಮೊತ್ತವು ಕಾಲಾನಂತರದಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಎಫ್‌ಡಿ (FD) ಕ್ಯಾಲ್ಕುಲೇಟರ್ ನಿಮಗೆ ಸಹಾಯ ಮಾಡುತ್ತದೆ. ಈ ಉಚಿತ ಆನ್ಲೈನ್ ಟೂಲ್ ಬಳಸಲು, ನೀವು ಈ ಕೆಳಗಿನ ವಿವರಗಳನ್ನು ನಮೂದಿಸಬೇಕು:
- ಹೂಡಿಕೆ ಮೊತ್ತ
- ವಾರ್ಷಿಕ ಎಫ್‌ಡಿ (FD) ಬಡ್ಡಿ ದರ
- ಹೂಡಿಕೆಯ ಅವಧಿ
- ಕಾಂಪೌಂಡಿಂಗ್ ಫ್ರೀಕ್ವೆನ್ಸಿ
ಒಮ್ಮೆ ನೀವು ಈ ವಿವರಗಳನ್ನು ಸಲ್ಲಿಸಿದ ನಂತರ, ಎಫ್‌ಡಿ (FD) ಕ್ಯಾಲ್ಕುಲೇಟರ್ ನಿಮಗೆ ಮೆಚ್ಯೂರಿಟಿ ಮೊತ್ತ ಮತ್ತು ಆಯ್ಕೆ ಮಾಡಿದ ಅವಧಿಯಲ್ಲಿ ಡೆಪಾಸಿಟ್‌ನಿಂದ ನೀವು ಗಳಿಸುವ ಒಟ್ಟು ಬಡ್ಡಿಯನ್ನು ತೋರಿಸುತ್ತದೆ. ಇದು ನಿಮ್ಮ ಎಫ್‌ಡಿ (FD) ಹೂಡಿಕೆಯನ್ನು ಸುಲಭವಾಗಿ ಯೋಜಿಸಲು ಮತ್ತು ಅದು ನಿಮ್ಮ ಹಣಕಾಸಿನ ಅವಶ್ಯಕತೆಗಳಿಗೆ ಸರಿಹೊಂದುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಯಾರು ಹೂಡಿಕೆ ಮಾಡಬೇಕು?
ಈ ಕ್ಷಣದಲ್ಲಿ ಫಿಕ್ಸೆಡ್ ಡೆಪಾಸಿಟ್ ನಿಮಗೆ ಅತ್ಯಂತ ಸೂಕ್ತವಾದ ಹೂಡಿಕೆ ಆಯ್ಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನಿಮಗೆ ಖಚಿತತೆ ಇಲ್ಲದಿರಬಹುದು. ಈ ಸಂಕಷ್ಟವನ್ನು ಪರಿಹರಿಸಲು, ಎಫ್‌ಡಿ (FD) ಯಲ್ಲಿ ಯಾರು ಹೂಡಿಕೆ ಮಾಡಬೇಕು ಎಂದು ನಿಮಗೆ ತಿಳಿದಿದ್ದರೆ ಅದು ಸಹಾಯ ಮಾಡುತ್ತದೆ. ಫಿಕ್ಸೆಡ್ ಡೆಪಾಸಿಟ್ ಗಳನ್ನು ಈ ಕೆಳಗಿನ ರೀತಿಯ ಜನರು ಆಯ್ಕೆ ಮಾಡಬಹುದು:
ನೀವು ಸುರಕ್ಷಿತ ಮತ್ತು ಕಡಿಮೆ-ಅಪಾಯದ ಹೂಡಿಕೆ ಆಯ್ಕೆಯನ್ನು ಬಯಸುತ್ತೀರಿ
ನಿಮ್ಮ ಉಳಿತಾಯದ ಮೇಲೆ ನಿಗದಿತ ಮತ್ತು ಅಂದಾಜು ಆದಾಯವನ್ನು ನೀವು ಬಯಸುತ್ತೀರಿ
ನೀವು ಅಪಾಯವನ್ನು ವಿರೋಧಿಸುತ್ತೀರಿ
ನಿಮ್ಮ ಗುರಿ ಬಂಡವಾಳ ಸಂರಕ್ಷಣೆಯಾಗಿದೆ
ನೀವು ನಿರ್ದಿಷ್ಟ ಗುರಿಗಾಗಿ ಉಳಿತಾಯ ಮಾಡಲು ಬಯಸುತ್ತೀರಿ
ತೆರಿಗೆ ಪ್ರಯೋಜನಗಳೊಂದಿಗೆ ನೀವು ಸುರಕ್ಷಿತ ಹೂಡಿಕೆ ಮಾರ್ಗವನ್ನು ಬಯಸುತ್ತೀರಿ
ವಿವರಗಳು | ಟ್ಯಾಕ್ಸ್-ಸೇವರ್ ಎಫ್‌ಡಿ (FD) | ಇಎಲ್ಎಸ್ಎಸ್ (ELSS) |
ಅರ್ಥ | ನಿರ್ದಿಷ್ಟ ಅವಧಿಗೆ ಡೆಪಾಸಿಟ್ ಮಾಡಲಾದ ಒಟ್ಟು ಮೊತ್ತದ ಹೂಡಿಕೆ, ಆದ್ದರಿಂದ ನೀವು ಅಸಲಿನ ಮೇಲೆ ಬಡ್ಡಿಯನ್ನು ಗಳಿಸಬಹುದು | ಆದಾಯವು ಮಾರುಕಟ್ಟೆಯ ಕಾರ್ಯಕ್ಷಮತೆಗೆ ಒಳಪಟ್ಟಿರುವ ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ವಿಧ |
ಒಳಗೊಂಡಿರುವ ಅಪಾಯ | ಕಡಿಮೆ ಅಪಾಯ | ಹೆಚ್ಚಿನ ಅಪಾಯ |
ರಿಟರ್ನ್ಸ್ | ಬಡ್ಡಿಯ ರೂಪದಲ್ಲಿ ಖಾತರಿಪಡಿಸಿದ ಆದಾಯ | ಆದಾಯವು ಮ್ಯೂಚುಯಲ್ ಫಂಡ್ ಘಟಕಗಳ ಎನ್ಎವಿ (NAV)ಯಲ್ಲಿನ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ |
ಲಾಕ್-ಇನ್ ಅವಧಿ | 5 ವರ್ಷಗಳು | 3 ವರ್ಷಗಳು |
ತೆರಿಗೆ ಪ್ರಯೋಜನಗಳು | ಡೆಪಾಸಿಟ್ ಮಾಡಲಾದ ಮೊತ್ತವು ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷಗಳವರೆಗೆ ಕಡಿತಕ್ಕೆ ಅರ್ಹವಾಗಿದೆ | ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷಗಳವರೆಗೆ ಕಡಿತಕ್ಕೆ ಅರ್ಹವಾಗಿದೆ |
ಆದಾಯದ ತೆರಿಗೆ ವಿಧಿಸುವಿಕೆ | ಅನ್ವಯವಾಗುವ ಆದಾಯ ತೆರಿಗೆ ಶ್ರೇಣಿ ದರದಲ್ಲಿ ಎಫ್‌ಡಿ (FD) ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ | ರಿಡೆಂಪ್ಶನ್ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಗಳಿಗೆ (₹1 ಲಕ್ಷಕ್ಕಿಂತ ಹೆಚ್ಚು) 10% ತೆರಿಗೆ ವಿಧಿಸಲಾಗುತ್ತದೆ |
ಲೋನ್ ಆಯ್ಕೆ | ಎಫ್‌ಡಿ (FD) ಮೊತ್ತದ ಮೇಲೆ ಲಭ್ಯವಿದೆ | ಲಭ್ಯವಿಲ್ಲ |
ನಿಮ್ಮ ಹೂಡಿಕೆಗಳಿಗೆ ಲಾಕ್-ಇನ್ ಅವಧಿಯೊಂದಿಗೆ ನೀವು ಆರಾಮವಾಗಿದ್ದೀರಿ
ನಿಮಗೆ ಖಚಿತ ನಿಯಮಿತ ಆದಾಯದ ಅಗತ್ಯವಿದೆ
ಎಫ್‌ಡಿ (FD) ಅಥವಾ ಇಎಲ್‌ಎಸ್‌ಎಸ್ (ELSS) – ಯಾವುದು ಅತ್ಯುತ್ತಮ?
ನಿಮ್ಮ ಪ್ರಾಥಮಿಕ ಗುರಿ ತೆರಿಗೆಯನ್ನು ಉಳಿಸುವುದಾದರೆ, ನೀವು ಭಾರತದಲ್ಲಿ ಲಭ್ಯವಿರುವ ವಿವಿಧ ತೆರಿಗೆ-ಉಳಿತಾಯ ಆಯ್ಕೆಗಳ ನಡುವೆ ಆಯ್ಕೆ ಮಾಡಬೇಕಾಗಬಹುದು. ಇವುಗಳಲ್ಲಿ ಎರಡು – ತೆರಿಗೆ-ಉಳಿತಾಯ ಎಫ್‌ಡಿ (FD) ಗಳು ಮತ್ತು ಇಕ್ವಿಟಿ-ಲಿಂಕ್ಡ್ ಉಳಿತಾಯ ಯೋಜನೆಗಳು (ಇಎಲ್‌ಎಸ್‌ಎಸ್ (ELSS) – ಇವುಗಳ ನಡುವೆ ಆಯ್ಕೆ ಮಾಡಲು ಕಷ್ಟವಾಗಬಹುದು. ಈ ಕೆಳಗಿನ ಟೇಬಲ್‌ನಲ್ಲಿ ತೋರಿಸಿದಂತೆ ಅವುಗಳು ತುಂಬಾ ವಿಶಿಷ್ಟ ಫೀಚರ್‌ಗಳನ್ನು ಹೊಂದಿವೆ.
ನೀವು ಕಡಿಮೆ ಹೂಡಿಕೆ ಹಾರಿಜಾನ್ ಹುಡುಕುತ್ತಿದ್ದರೆ ಮತ್ತು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುತ್ತಿದ್ದರೆ ಇಎಲ್‌ಎಸ್‌ಎಸ್ (ELSS) ಸೂಕ್ತ ಆಯ್ಕೆಯಾಗಿದೆ. ಆದರೆ, ನಿಮಗೆ ಅಪಾಯ ಬೇಡವಾಗಿದ್ದರೆ ಮತ್ತು ದೀರ್ಘ ಲಾಕ್-ಇನ್ ಅವಧಿಯನ್ನು ಅನುಸರಿಸದಿದ್ದರೆ, ತೆರಿಗೆ-ಉಳಿತಾಯ ಎಫ್‌ಡಿ (FD) ಗಳು ಸೂಕ್ತವಾಗಿರಬಹುದು.
ಮುಕ್ತಾಯ
ಇದು ಫಿಕ್ಸೆಡ್ ಡೆಪಾಸಿಟ್ ಎಂದರೇನು, ಲಭ್ಯವಿರುವ ವಿವಿಧ ರೀತಿಯ ಎಫ್‌ಡಿ (FD) ಗಳು ಮತ್ತು ಈ ಹಣಕಾಸು ಪ್ರಾಡಕ್ಟಿನ ಎಲ್ಲಾ ಫೀಚರ್‌ಗಳು ಮತ್ತು ಪ್ರಯೋಜನಗಳ ವಿವರಗಳನ್ನು ನಿಮಗೆ ನೀಡಿದ್ದೇವೆ. ನಿಮ್ಮ ಹೂಡಿಕೆ ಪ್ರಯಾಣವನ್ನು ನೀವು ಈಗಷ್ಟೇ ಪ್ರಾರಂಭಿಸುತ್ತಿದ್ದರೆ, ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋಗೆ ಸೇರಿಸಲು ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ಪರ್ಯಾಯವಾಗಿ, ನೀವು ಭಾರಿ ಇಕ್ವಿಟಿ ಹೂಡಿಕೆಗಳನ್ನು ಹೊಂದಿರುವ ಅನುಭವಿ ಹೂಡಿಕೆದಾರರಾಗಿದ್ದರೂ, ಫಿಕ್ಸೆಡ್ ಡೆಪಾಸಿಟ್‌ಗಳು ನಿಮ್ಮ ಪೋರ್ಟ್‌ಫೋಲಿಯೋಗೆ ಸ್ಥಿರತೆಯನ್ನು ನೀಡಬಹುದು.
ಫಿಕ್ಸೆಡ್ ಡೆಪಾಸಿಟ್‌ಗಳ ಜೊತೆಗೆ, ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಕೂಡ ಆಸಕ್ತಿ ಹೊಂದಿದ್ದರೆ, ಹೂಡಿಕೆಯ ಪ್ರಪಂಚವನ್ನು ಅನ್ವೇಷಿಸಲು ಏಂಜಲ್ ಒನ್ ನೊಂದಿಗೆ ಉಚಿತ ಡಿಮ್ಯಾಟ್ ಅಕೌಂಟ್ ತೆರೆಯಿರಿ.
Related Mutual Fund Calculators:
FD Calculator | Equitas Small Finance Bank FD Calculator |
POST-OFFICE-FD Calculator | BOI FD Calculator |
Indian Bank FD Calculator | DHFL FD Calculator |
FAQs
ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಬಡ್ಡಿ ದರಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?
ಎಫ್‌ಡಿ (FD) ಬಡ್ಡಿ ದರಗಳನ್ನು ಸೌಲಭ್ಯವನ್ನು ಒದಗಿಸುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ನಿರ್ಧರಿಸಲಾಗುತ್ತದೆ. ಅವುಗಳು ರೆಪೋ ದರ, ಬ್ಯಾಂಕಿನ ಆಂತರಿಕ ನೀತಿಗಳು ಮತ್ತು ಸಾಮಾನ್ಯ ಆರ್ಥಿಕ ಪರಿಸ್ಥಿತಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಇರುತ್ತವೆ.
ಲಭ್ಯವಿರುವ ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳು ಯಾವುವು?
ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳು – ನಿಯಮಿತ ಎಫ್‌ಡಿ (FD) ಗಳು, ಹಿರಿಯ ನಾಗರಿಕರ ಎಫ್‌ಡಿ (FD) ಗಳು, ಕಾರ್ಪೊರೇಟ್ ಎಫ್‌ಡಿ (FD) ಗಳು ಮತ್ತು ತೆರಿಗೆ ಉಳಿತಾಯ ಡೆಪಾಸಿಟ್‌ಗಳನ್ನು ಒಳಗೊಂಡಿವೆ. ಎನ್ ಆರ್ ಇ (NRE) ಮತ್ತು ಎನ್ ಆರ್ ಒ (NRO) ಎಫ್‌ಡಿ (FD) ಗಳು ಮತ್ತು ಎಫ್ ಸಿ ಎನ್ ಆರ್ (FCNR) ಡೆಪಾಸಿಟ್‌ಗಳು ಅನಿವಾಸಿ ಭಾರತೀಯರಿಗೆ ವಿವಿಧ ಎಫ್‌ಡಿ (FD) ಆಯ್ಕೆಗಳಾಗಿವೆ.
ಫಿಕ್ಸೆಡ್ ಡೆಪಾಸಿಟ್ ಹೋಲ್ಡರ್ ಮರಣದ ಸಂದರ್ಭದಲ್ಲಿ ಏನಾಗುತ್ತದೆ?
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ಹೋಲ್ಡರ್ ಮರಣ ಹೊಂದಿದರೆ, ಎಫ್‌ಡಿ (FD) ಅವಧಿಯ ಕೊನೆಯಲ್ಲಿ ಅಸಲು ಮತ್ತು ಸಂಗ್ರಹಿಸಲಾದ ಬಡ್ಡಿಯನ್ನು ಅವರ ನಾಮಿನಿಗೆ ಪಾಸ್ ಮಾಡಲಾಗುತ್ತದೆ. ಇದಕ್ಕಾಗಿಯೇ ನಿಮ್ಮ ಫಿಕ್ಸೆಡ್ ಡೆಪಾಸಿಟ್‌ಗಾಗಿ ನಾಮಿನೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.
ಕಾಲಾವಧಿ ಮುಗಿಯುವ ಮೊದಲು ನಾನು ನನ್ನ ಫಿಕ್ಸೆಡ್ ಡೆಪಾಸಿಟ್ ಅಕೌಂಟನ್ನು ಮುಚ್ಚಬಹುದೇ?
ಹೌದು, ಕಾಲಾವಧಿ ಮುಗಿಯುವ ಮೊದಲು ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅಕೌಂಟನ್ನು ಮುಚ್ಚಬಹುದು. ಆದರೆ, ಮೆಚುರಿಟಿ ಮುಂಚಿತ ಅಕೌಂಟ್ ಮುಚ್ಚುವಿಕೆಗಳಿಗೆ ದಂಡಗಳನ್ನು ವಿಧಿಸಬಹುದು. ಆದರೆ ಲಾಕ್-ಇನ್ ಅವಧಿಯ ಕೊನೆಗೆ ಮುಂಚಿತವಾಗಿ ನಿಮ್ಮ ತೆರಿಗೆ-ಉಳಿತಾಯ ಎಫ್‌ಡಿ (FD) ಯಲ್ಲಿ ಹಣವನ್ನು ನೀವು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ.
ಫಿಕ್ಸೆಡ್ ಡೆಪಾಸಿಟ್‌ಗಳು ಸರಳ ಅಥವಾ ಸಂಯುಕ್ತ ಬಡ್ಡಿಯನ್ನು ನೀಡುತ್ತವೆಯೇ?
ನಿಮ್ಮ ಫಿಕ್ಸೆಡ್ ಡೆಪಾಸಿಟ್‌ನಿಂದ ನೀವು ಮಾಸಿಕ ಪಾವತಿಗಳನ್ನು ಆಯ್ಕೆ ಮಾಡಿದರೆ, ಆದಾಯವು ಅಸಲಿನ ಮೇಲೆ ಲೆಕ್ಕ ಹಾಕಲಾದ ಸರಳ ಬಡ್ಡಿಯ ರೂಪದಲ್ಲಿರುತ್ತದೆ. ಆದರೆ, ನೀವು ಬಡ್ಡಿಯ ಮರುಹೂಡಿಕೆಯನ್ನು ಆಯ್ಕೆ ಮಾಡಿದರೆ, ನೀವು ಸಂಯೋಜನೆಯ ಹೆಚ್ಚುವರಿ ಪ್ರಯೋಜನವನ್ನು ಪಡೆಯುತ್ತೀರಿ.