ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಮಾರ್ಜಿನಲ್ ಮತ್ತು ಸಣ್ಣ ರೈತರಿಗೆ ವರ್ಷಕ್ಕೆ ₹6,000 ವರೆಗೆ ಆದಾಯ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಸರ್ಕಾರದ ಬೆಂಬಲಿತ ಯೋಜನೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಮುಂದೆ ಓದಿ.

ಮಧ್ಯಂತರ ಕೇಂದ್ರ ಬಜೆಟ್ ಪ್ರಸ್ತುತಿಯ ಸಮಯದಲ್ಲಿ 2019 ಫೆಬ್ರವರಿಯಲ್ಲಿ ಘೋಷಿಸಲಾದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಯು ಭಾರತದ ಅನೇಕ ಸರ್ಕಾರಿ ಬೆಂಬಲಿತ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಸಣ್ಣ ಪ್ರಮಾಣದ ರೈತರಿಗೆ ನೇರ ಪ್ರಯೋಜನ ವರ್ಗಾವಣೆ ಡಿಬಿಟಿ (DBT) ಮೂಲಕ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ನೀವು ಮಾರ್ಜಿನಲ್ ಅಥವಾ ಸಣ್ಣ ಪ್ರಮಾಣದ ರೈತರಾಗಿದ್ದರೆ, ಈ ಅನನ್ಯ ತೊಡಗುವಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಎಂದರೇನು?

ಪಿಎಂ ಕಿಸಾನ್ ಸಮ್ಮಾನ್  ನಿಧಿ ಯೋಜನೆಯು ಅರ್ಹ ಮಾರ್ಜಿನಲ್ ಮತ್ತು ಸಣ್ಣ ಪ್ರಮಾಣದ ರೈತರಿಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹6,000 ವರೆಗೆ ಕನಿಷ್ಠ ಆದಾಯ ಬೆಂಬಲವನ್ನು ಒದಗಿಸುವ ಯೋಜನೆಯಾಗಿದೆ. ಪ್ರತಿ 4 ತಿಂಗಳಿಗೊಮ್ಮೆ ₹2,000 ಮೊತ್ತದ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಅಕೌಂಟ್‌ಗಳಿಗೆ ವಾರ್ಷಿಕ ₹6,000 ಹಣಕಾಸಿನ ನೆರವನ್ನು ನೇರವಾಗಿ ವಿತರಿಸಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಉದ್ದೇಶ

ಭಾರತೀಯ ಕೃಷಿ ಕ್ಷೇತ್ರದಲ್ಲಿನ ಬಹುಪಾಲು ರೈತರು ಮಾರ್ಜಿನಲ್ ಆಗಿರುತ್ತಾರೆ ಮತ್ತು ಸಾಮಾನ್ಯವಾಗಿ ಆರ್ಥಿಕವಾಗಿ ಸಮೃದ್ಧರಾಗಿರುವುದಿಲ್ಲ. ಕೃಷಿ ಸಮುದಾಯಗಳ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ , ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಪರಿಣಾಮಕಾರಿಯಾಗಿ ತರುತ್ತದೆ.

ಈ ಉಪಕ್ರಮವು ಸಣ್ಣ ಪ್ರಮಾಣದ ರೈತರು ಮತ್ತು ಅವರ ಕುಟುಂಬಗಳು ಎದುರಿಸುವ ಹಣಕಾಸಿನ ಅಸಮರ್ಥತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ, ಅವರಿಗೆ ವಾರ್ಷಿಕ ಕನಿಷ್ಠ ಆದಾಯ ಬೆಂಬಲ ₹6,000 ವನ್ನು ಒದಗಿಸುತ್ತದೆ. ಯೋಜನೆಯ ಭಾಗವಾಗಿ ರೈತರು ಪಡೆಯುವ ಹಣವನ್ನು ತಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಬಳಸಬಹುದು.

ಯೋಜನೆಯು ಹೇಗೆ ಜಾರಿಗೆ ಬರುತ್ತದೆ?

2018 ರಲ್ಲಿ ತೆಲಂಗಾಣ ಸರ್ಕಾರವು ತನ್ನ ರಾಜ್ಯದ ಸಣ್ಣ ಪ್ರಮಾಣದ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವು ಯೋಜನೆಯೊಂದಿಗೆ ತಂದಿತು . ರುತು ಬಂಧು ಯೋಜನೆ ಎಂದು ಕರೆಯಲ್ಪಡುವ ಅರ್ಹ ರೈತರಿಗೆ ತಮ್ಮ ಕೃಷಿ ಪ್ರಯತ್ನಗಳನ್ನು ಬೆಂಬಲಿಸಲು ವರ್ಷಕ್ಕೆ ಎರಡು ಬಾರಿ ನಿರ್ದಿಷ್ಟ ಮೊತ್ತವನ್ನು ವಿತರಿಸಲಾಯಿತು. ರಾಜ್ಯ ಸರ್ಕಾರದ ಪ್ರಯತ್ನಗಳು ರೈತರು ಮತ್ತು ಇತರ ಪಾಲುದಾರರಿಂದ ದೊಡ್ಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿವೆ.

ತೆಲಂಗಾಣ ಸರ್ಕಾರದ ರೈತರ ಆದಾಯ ಬೆಂಬಲ ಯೋಜನೆಯ ಯಶಸ್ಸನ್ನು ರಾಷ್ಟ್ರವ್ಯಾಪಿ ಆಧಾರದ ಮೇಲೆ ಪುನರಾವರ್ತಿಸುವ ಪ್ರಯತ್ನದಲ್ಲಿ , ಕೇಂದ್ರ ಸರ್ಕಾರವು ಪಿಎಂ(PM) ಕಿಸಾನ್ ಸಮ್ಮಾನ್  ನಿಧಿ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿತು. ಅನುಷ್ಠಾನದ ಮೊದಲ ವರ್ಷದಲ್ಲಿ, ಯೋಜನೆಗೆ ಸುಮಾರು ₹75,000 ಕೋಟಿಯನ್ನು ನಿಗದಿಪಡಿಸಲಾಗಿದೆ.

ಪಿಎಂ(PM) ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫೀಚರ್‌ಗಳು ಯಾವುವು?

ಸಣ್ಣ ಪ್ರಮಾಣದ  ರೈತರಾಗಿ, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಯ ಗಮನಾರ್ಹ ಫೀಚರ್‌ಗಳು ಯಾವುವು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಯೋಜನೆಯ ಕೆಲವು ಪ್ರಮುಖ ಫೀಚರ್‌ಗಳ ತ್ವರಿತ ಮೇಲ್ನೋಟ ಇಲ್ಲಿದೆ:

  • ನಿಯಮಿತ ಮಧ್ಯಂತರಗಳಲ್ಲಿ ಆದಾಯ ಬೆಂಬಲ:

ಈ ಯೋಜನೆಯಡಿ ವಾರ್ಷಿಕವಾಗಿ ₹6,000 ಹಣಕಾಸಿನ ನೆರವನ್ನು ಒಂದೇ ಪಾವತಿಯಾಗಿ ವಿತರಿಸಲಾಗುವುದಿಲ್ಲ. ಬದಲಾಗಿ, ಮೊತ್ತವನ್ನು ಮೂರು ಕಂತುಗಳಾಗಿ ವಿಭಜಿಸಲಾಗುತ್ತದೆ ಮತ್ತು ವರ್ಷದ ಪ್ರತಿ 4 ತಿಂಗಳಿಗೆ ವಿತರಿಸಲಾಗುತ್ತದೆ. ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನೀವು ನಿಯಮಿತ ಆದಾಯದ ಮೂಲಕ್ಕೆ ಅಕ್ಸೆಸ್ ಹೊಂದಿದ್ದೀರಿ ಎಂಬುದನ್ನು ಇದು ಖಚಿತಪಡಿಸುತ್ತದೆ.

  • ಭೂ ಮಾಲೀಕತ್ವದ ಮೇಲೆ ಕ್ಯಾಪ್:

ಸಣ್ಣ ಪ್ರಮಾಣದ  ರೈತರಿಗೆ ಸಹಾಯ ಮಾಡುವುದು ಸಂಪೂರ್ಣ ಉದ್ದೇಶವಾಗಿರುವುದರಿಂದ, ನೀವು 2 ಹೆಕ್ಟೇರ್‌ ಭೂಮಿಯನ್ನು ಹೊಂದಿದ್ದರೆ ಮಾತ್ರ ಯೋಜನೆಯ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.

  • ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಡಿಬಿಟಿ (DBT):

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಯು ನೇರ ಪ್ರಯೋಜನ ವರ್ಗಾವಣೆ ಡಿಬಿಟಿ (DBT) ಮೂಲಕ ಹಣವನ್ನು ವಿತರಿಸುತ್ತದೆ. ಇದು ದುಷ್ಕೃತ್ಯದ  ಪ್ರಕರಣಗಳನ್ನು  ಕಡಿಮೆ ಮಾಡುತ್ತದೆ ಮತ್ತು ಹಣಕಾಸಿನ ಬೆಂಬಲವು ಉದ್ದೇಶಿತ ರೈತರನ್ನು ತಲುಪುವುದನ್ನು ಖಚಿತಪಡಿಸುತ್ತದೆ.

ಪಿಎಂ(PM) ಕಿಸಾನ್ ಯೋಜನೆಗೆ ಯಾರು ಅರ್ಹರಾಗಿರುತ್ತಾರೆ?

ಪಿಎಂ(PM) ಕಿಸಾನ್ ಸಮ್ಮಾನ್  ನಿಧಿ ಯೋಜನೆಯಡಿ ಪ್ರಯೋಜನಗಳನ್ನು ಕ್ಲೈಮ್ ಮಾಡಲು, ನೀವು ಈ ಕೆಳಗಿನ ಮಾನದಂಡಗಳ ಪಟ್ಟಿಯನ್ನು ಪೂರೈಸಬೇಕು:

  • ನೀವು ಭಾರತೀಯ ನಾಗರಿಕರಾಗಿರಬೇಕು
  • ನೀವು ಮಾರ್ಜಿನಲ್ ಅಥವಾ ಸಣ್ಣ ಪ್ರಮಾಣದ ರೈತರಾಗಿರಬೇಕು
  • ನೀವು 2 ಹೆಕ್ಟೇರ್‌ಗಳನ್ನು ಮೀರದ ಕೃಷಿ ಯೋಗ್ಯ ಭೂಮಿಯನ್ನು ಹೊಂದಿರಬೇಕು

ಪಿಎಂಕೆಎಸ್‌ವೈ(PMKSY) ಯಿಂದ ಯಾರನ್ನು ಹೊರಗಿಡಲಾಗಿದೆ?

ಪಿಎಂ(PM) ಕಿಸಾನ್ ಯೋಜನೆಯು ಕೆಲವು ಹೊರಗಿಡುವಿಕೆ ಮಾನದಂಡಗಳನ್ನು ಕೂಡ ಸೂಚಿಸಿದೆ. ಕೆಳಗೆ ಪಟ್ಟಿ ಮಾಡಲಾದ ಹೊರಗಿಡುವಿಕೆ ಮಾನದಂಡಗಳನ್ನು ನೀವು ಪೂರೈಸಿದರೆ ನೀವು ಯೋಜನೆಯ ಪ್ರಯೋಜನಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ:

  • ನೀವು ಹಿಂದಿನ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆಯನ್ನು ಪಾವತಿಸಿದ್ದರೆ
  • ನೀವು ಸರ್ಕಾರಿ ಅಥವಾ ಸಾಂವಿಧಾನಿಕ ಪೋಸ್ಟ್ ಹೊಂದಿರುವ ಅಥವಾ ಹೊಂದಿದ್ದ   ಪ್ರಸ್ತುತ ಅಥವಾ ಮಾಜಿ ನಾಗರಿಕ ಸೇವಕರಾಗಿದ್ದರೆ
  • ನೀವು ಸಾಂಸ್ಥಿಕ ಭೂಮಾಲೀಕರಾಗಿದ್ದರೆ
  • ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ನಿವೃತ್ತಿ ಅಥವಾ ನಿವೃತ್ತಿಯ ಪರಿಣಾಮವಾಗಿ ಪ್ರತಿ ತಿಂಗಳು ₹10,000 ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿಯನ್ನು ಪಡೆದರೆ
  • ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ (ಸಿಎ(CA)), ವಕೀಲ, ಎಂಜಿನಿಯರ್ ಅಥವಾ ವಾಸ್ತುಶಿಲ್ಪಿಯಂತಹ ವೃತ್ತಿಪರರಾಗಿದ್ದರೆ

ಪಿಎಂ(PM) ಕಿಸಾನ್ ಸಮ್ಮನ್ ನಿಧಿ ಯೋಜನೆಗೆ ನೋಂದಣಿ ಮಾಡುವುದು ಹೇಗೆ?

ನೀವು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನೀವು ಈ ಕೆಳಗಿನ ಯಾವುದೇ ವಿಧಾನಗಳ ಮೂಲಕ ಯೋಜನೆಗೆ ನೋಂದಣಿ ಮಾಡಬಹುದು:

  • ವಿಧಾನ 1: ಪಿಎಂ(PM) ಕಿಸಾನ್ ಯೋಜನೆ ನೋಡಲ್ ಅಧಿಕಾರಿಗಳ ಮೂಲಕ

ಯೋಜನೆಯ ಪ್ರಕಾರ, ಪ್ರತಿ ರಾಜ್ಯ ಸರ್ಕಾರವು ಪಿಎಂ(PM) ಕಿಸಾನ್ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕಾಗುತ್ತದೆ. ಯೋಜನೆಗೆ ನೋಂದಣಿ ಮಾಡಲು ನೀವು ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು.

  • ವಿಧಾನ 2: ಆದಾಯ ಅಧಿಕಾರಿಗಳ ಮೂಲಕ

ಪರ್ಯಾಯವಾಗಿ, ನಿಮ್ಮ ಕೃಷಿ ಯೋಗ್ಯ ಭೂಮಿಯು ಯೋಜನೆಗೆ ನೋಂದಣಿ ಮಾಡಲು ನಿಮ್ಮ ಕೃಷಿ ಭೂಮಿ ಇರುವ ಪ್ರದೇಶಕ್ಕೆ ನೀವು ನಿಮ್ಮ ಸ್ಥಳೀಯ ಪಟ್ವಾರಿ ಅಥವಾ ಆಯಾ ಆದಾಯ ಅಧಿಕಾರಿಗೆ ಭೇಟಿ ನೀಡಬಹುದು.

  • ವಿಧಾನ 3: ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ (ಸಿಎಸ್ ಸಿ (CSC) ಗಳು)

ಪಿಎಂ(PM) ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಆನ್ಲೈನಿನಲ್ಲಿ ನೋಂದಣಿ ಮಾಡಲು ನೀವು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್ ಸಿ (CSC)) ಕೂಡ ಭೇಟಿ ನೀಡಬಹುದು. ಆದಾಗ್ಯೂ, ಸೇವೆಯನ್ನು ಪಡೆಯಲು ನೀವು ನಾಮಮಾತ್ರದ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

  • ವಿಧಾನ 4: ಅಧಿಕೃತ ವೆಬ್‌ಸೈಟ್ ಮೂಲಕ

ನೀವು ತಾಂತ್ರಿಕವಾಗಿ ಪರಿಣತಿ ಹೊಂದಿದ್ದರೆ, , ಪಿಎಂ(PM) ಕಿಸಾನ್ ಸಮ್ಮಾನ್  ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವ ಮೂಲಕ ನೀವು ಯೋಜನೆಗಾಗಿ ನಿಮ್ಮನ್ನು ನೋಂದಾಯಿಸಬಹುದು.

ನೋಂದಣಿ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಗೆ ನೋಂದಣಿ ಮಾಡಲು, ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ನಿಮ್ಮ ಆಧಾರ್ ಕಾರ್ಡಿನ ಪ್ರತಿ
  • ನಿಮ್ಮ ಗುರುತಿನ ಮತ್ತು ವಿಳಾಸದ ಪುರಾವೆಯ ಪ್ರತಿ
  • ಮಾಲೀಕತ್ವದ ಪುರಾವೆಯಾಗಿ ನಿಮ್ಮ ಭೂ ಡಾಕ್ಯುಮೆಂಟ್‌ಗಳ ಪ್ರತಿ
  • ನಿಮ್ಮ ಪಾಸ್‌ಬುಕ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟಿನ ಪ್ರತಿ

ಪಿಎಂ(PM) ಕಿಸಾನ್ ಯೋಜನೆಯ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಯಾವುದೇ ಸಮಯದಲ್ಲಿ ನೀವು ನಿಮ್ಮ ಪಿಎಂ (PM) ಕಿಸಾನ್ ಫಲಾನುಭವಿ ಸ್ಥಿತಿಯನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ:

  • ಹಂತ 1: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2: ಹೋಮ್‌ಪೇಜಿನ ಬಲಭಾಗದಲ್ಲಿರುವ ‘ನಿಮ್ಮ ಸ್ಟೇಟಸ್ ತಿಳಿಯಿರಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಿಮ್ಮ ನೋಂದಣಿ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
  • ಹಂತ 4: ‘ಡೇಟಾ ಪಡೆಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಿ.

ಮುಕ್ತಾಯ

ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿರುವ ಸಣ್ಣ ಪ್ರಮಾಣದ ರೈತರಿಗೆ ಪಿಎಂ (PM) ಕಿಸಾನ್ ಸಮ್ಮಾನ್  ನಿಧಿ ಯೋಜನೆಯು ಕೆಲವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ. ಈ ಉಪಕ್ರಮವು ಒದಗಿಸುವ  ನಿಯಮಿತ ಆದಾಯದ ಮೂಲವು ರೈತರು ತಮ್ಮ ಹಣಕಾಸಿನ ಪರಿಸ್ಥಿತಿಗೆ ಹಾನಿಯಾಗುವ ಅನಧಿಕೃತ ಹಣ ಸಾಲ ನೀಡುವ ಅಭ್ಯಾಸಗಳ ಕಡೆಗೆ ಆಕರ್ಷಿತರಾಗುವುದನ್ನು  ತಡೆಗಟ್ಟಬಹುದು.

FAQs

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸ್ವಯಂ-ನೋಂದಣಿ ಮಾಡುವುದು ಸಾಧ್ಯವೇ?

ಹೌದು. ಪಿಎಂ(PM) ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ಹೋಮ್‌ಪೇಜಿನ ಬಲ ಭಾಗದಲ್ಲಿರುವ ‘ಹೊಸ ರೈತರ ನೋಂದಣಿ’ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಯೋಜನೆಗೆ ಸ್ವಯಂ-ನೋಂದಣಿ ಮಾಡಬಹುದು. ವೆಬ್‌ಸೈಟ್ ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸುತ್ತದೆ, ಅಲ್ಲಿ ನೀವು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಬೇಕಾಗುತ್ತದೆ ಮತ್ತು ಸಲ್ಲಿಸಬೇಕಾಗುತ್ತದೆ.

ಪಿಎಂ (PM) ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೆವೈಸಿ (KYC) ಪೂರ್ಣಗೊಳಿಸುವುದು ಕಡ್ಡಾಯವೇ?

ಹೌದು. ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಪಿಎಂ(PM) ಕಿಸಾನ್ ಕೆವೈಸಿ(KYC) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್ ಸಿ (CSC)) ಭೇಟಿ ನೀಡುವ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಇ-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪಿಎಂ(PM) ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಾಡಿಗೆದಾರ ರೈತರು ಪ್ರಯೋಜನಗಳನ್ನು ಪಡೆಯಬಹುದೇ?

ಇಲ್ಲ. ಯೋಜನೆಯ ಪ್ರಯೋಜನಗಳು 2 ಹೆಕ್ಟೇರ್‌ಗಳಿಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರದ ರೈತರಿಗೆ ಮಾತ್ರ ಅನ್ವಯವಾಗುತ್ತವೆ. ಬಾಡಿಗೆದಾರ ರೈತರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಬೆಂಬಲ ನೀಡುವ ಸಹಾಯವಾಣಿ ಇದೆಯೇ?

ಹೌದು. ಯೋಜನೆ ಅಥವಾ ಅದರ ಪ್ರಯೋಜನಗಳಿಗೆ ಸಂಬಂಧಿಸಿದ ನಿಮ್ಮ ವಿಚಾರಣೆಗಳು ಅಥವಾ ಕುಂದುಕೊರತೆಗಳನ್ನು ಸ್ಪಷ್ಟಪಡಿಸಲು ನೀವು 011-24300606 ಅಥವಾ 155621 ಗೆ ಕರೆ ಮಾಡಬಹುದು.