ನಮಸ್ಕಾರ ಸ್ನೇಹಿತರೆ! ಏಂಜಲ್ ಬ್ರೋಕಿಂಗ್ನ ಫೊಡ್ಕ್ಯಾಸ್ಟ್ಗೆ ನಿಮಗೆ ಸ್ವಾಗತ! ಸ್ನೇಹಿತರೆ ಸ್ಟಾಕ್ ಮಾರ್ಕೆಟ್ನಲ್ಲಿಸದಾ ಏರುಪೇರುಗಳು ನಡೀತಾನೆ ಇರುತ್ತೆ. ಹಾಗಾದರೆ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಕುಸಿತ ಕಂಡಾಗ ಏನ್ಮಾಡ್ಬೇಕು? ಅಂತಹ ಸಂದರ್ಭವನ್ನಎದುರಿಸುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಕಳೆದ ವರ್ಷ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಶೇ. 40ರಷ್ಟು ಕುಸಿತ ಕಂಡಾಗ ಬಹಳಷ್ಟು ಹೂಡಿಕೆದಾರರಿಗೆ ಆ ಪರಿಸ್ಥಿತಿಯನ್ನ ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ಆಗಿರಲಿಲ್ಲ. ಈ ಸಂಧರ್ಭದಲ್ಲಿ ನನ್ನ ಸ್ನೇಹಿತ ಕರಣ್ ತನ್ನ ಸಹೋದ್ಯೋಗಿಗಳಾದ ಪ್ರಿಯಾ ಮತ್ತು ಶಿಕರ್ ಜೊತೆಗೆ ನಡೆದ ಸಂಭಾಷಣೆಯ ಬಗ್ಗೆ ಹೇಳಿದ ಮಾತು ನೆನಪಾಗುತ್ತಿದೆ. ಪ್ರಿಯಾ ಮತ್ತು ಶಿಕರ್ ಕಳೆದ ಐದು ವರ್ಷಗಳಿಂದಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನ ಮಾಡ್ತಾ ಇದ್ದಾರೆ. ಇಬ್ಬರು ಮ್ಯೂಚುಯಲ್ ಫಂಡ್ ಹಾಗು ಷೇರುಗಳ ಮೇಲಿನ ಹೂಡಿಕೆಯಿಂದ ಸಾಕಷ್ಟು ಉಳಿತಾಯವನ್ನ ಮಾಡಿದ್ದರು. ಆದರೆ ಕಳೆದ ಬಾರಿ ಷೇರು ಮಾರುಕಟ್ಟೆಯಲ್ಲಿಆದಂತ ಕುಸಿತದಿಂದಾಗಿ ಒಬ್ಬರು ಇದರಲ್ಲಿ ಯಶಸ್ಸನ್ನ ಕಂಡುಕೊಂಡರೂ ಸಹ ಇನ್ನೊಬ್ಬರು ತಮ್ಮ ಜೀವಿತಾವಧಿಯ ಗಳಿಕೆಯನ್ನೆಲ್ಲ ಕಳೆದುಕೊಂಡಿದ್ದರು -ನಿಖರವಾಗಿ ಹೇಳೋದಾದರೆ ತನ್ನ ಐದು ವರ್ಷಗಳ ಹೂಡಿಕೆಯನ್ನ ಕಳೆದುಕೊಂಡಿದ್ದರು. ಆದರೆ ಗಮನಿಸಬೇಕಾದಂತ ಅಂಶ ಅಂದರೆ ಒಂದೇ ರೀತಿ ಹೂಡಿಕೆ ಮಾಡಿರುವಂತ ಇಬ್ಬರು ವ್ಯಕ್ತಿಗಳಿಗೆ ಈ ರೀತಿಯ ವ್ಯತಿರಿಕ್ತವಾಗದ ಪಲಿತಾಂಶ ಸಿಗೋದಕ್ಕೆ ಕಾರಣವೇನು? ನಾವಿವತ್ತು ಇದರ ಕುರಿತಾಗಿ ಸಾಕಷ್ಟು ಮಾಹಿತಿಯನ್ನ ತಿಳಿದಿಕೊಳ್ಳೋಣ. ಇದರೊಂದಿಗೆ ನಾನು ನಿಮಗೆ ಷೇರು ಮಾರುಕಟ್ಟೆಯ ಕುಸಿತದ ಸಂದರ್ಭದಲ್ಲಿ ಸದಾಕಾಲ ನೆನಪಿಟ್ಟುಕೊಳ್ಳ ಬೇಕಾಗಿರುವ 3 ಅಂಶಗಳನ್ನ ನಿಮಗೆ ತಿಳಿಸ್ತೀನಿ. ಹಾಗಾದ್ರೆ ಬನ್ನಿ ಒಂದೊಂದಾಗಿ ತಿಳಿದುಕೊಳ್ಳೋಣ. ಮೊದಲಿಗೆ 1 - ಪ್ರಮುಖವಾದ ಅಂಶ ಅಂದ್ರೆ ಶಾಂತವಾಗಿರೋದು. ಯಾಕಂದ್ರೆ ಸ್ನೇಹಿತರೆ ಒಬ್ಬ ಅನುಭವಿ ಹೂಡಿಕೆದಾರ ಷೇರು ಮಾರುಕಟ್ಟೆಯ ಕುಸಿತದ ಸಂದರ್ಭದಲ್ಲಿ ತನ್ನ ತಾಳ್ಮೆಯನ್ನ ಕಳೆದೊಕೊಳ್ಳೋದಿಲ್ಲ. ಇಂತಹ ಸಂದರ್ಭದಲ್ಲಿಷೇರು ಮರುಕಟ್ಟೆಯ ವ್ಯವಹಾರವನ್ನ ಅತ್ಯಂತ ತಾಳ್ಮೆಯಿಂದ ಶಾಂತಚಿತ್ತದಿಂದ ನಿರ್ವಹಿಸೋದು ಅಷ್ಟೇ ಮುಖ್ಯ. ಯಾಕಂದ್ರೆ ಷೇರು ಮಾರುಕಟ್ಟೆಯ ಇತಿಹಾಸವನ್ನ ಗಮನಿಸಿದ್ರೆ ಅಂದ್ರೆ ಮೂವತ್ತರಿಂದ ನೂರು ವರ್ಷಗಳ ಇತಿಹಾಸವನ್ನ ನೋಡಿದ್ರೆ ಒಂದು ಸಮಾನ್ಯವಾದ ಟ್ರೆಂಡ್ ಅನ್ನ ಗಮನಿಸಬಹುದು ಅದೇನೆಂದ್ರೆ ಪ್ರತಿಬಾರಿಯೂ ಕುಸಿತದ ನಂತರ ಷೇರು ಮಾರುಕಟ್ಟೆ ಚೇತರಿಕೆಯನ್ನ ಕಂಡಿರುವುದು ಗಮನಿಸಬಹುದು. ಹೀಗೆ ಪ್ರತೀ ಬಾರಿ ಆರ್ಥಿಕ ಕುಸಿತವನ್ನ ಕಂಡಾಗ ಬಹಳಷ್ಟು ಹೂಡಿಕೆದಾರರು ವಿಚಲಿತರಾಗುತ್ತಾರೆ ಮತ್ತು ದೀರ್ಘಕಾಲದ ಹೂಡಿಕೆಯ ಚಿಂತನೆಯಲ್ಲಿ ವಿಪಲಲರಾಗುತ್ತಾರೆ. ಆದರೆ ದೀರ್ಘಕಾಲದ ಹೂಡಿಕೆಯನ್ನ ಮಾಡಿದ ಅನುಭವಿ ಹೂಡಿಕೆದಾರರು ಈ ಷೇರು ಮಾರುಕಟ್ಟೆಯ ಕುಸಿತ ತಾತ್ಕಾಲಿಕ ಹಾಗು ಇದು ಸ್ವಲ್ಪ ಸಮಯದ ನಂತರ ಜಿಗಿಯುತ್ತದೆ ಅನ್ನೋದನ್ನ ಸರಿಯಾಗಿ ತಿಳಿದು ಕೊಂಡಿರ್ತಾರೆ . ಅಂದಹಾಗೆ ನೀವು ನಾನು ಅದಾಗಲೇ ಹೇಳಿದ ಪ್ರಿಯಾ ಮತ್ತು ಶಿಖರ್ ಅವರ ಷೇರು ಮಾರುಕಟ್ಟೆಯ ಅನುಭವವನ್ನ ತಿಳಿಯೋ ಕುತೂಹಲ ನಿಮಗೂ ಇದೇ ಅಲ್ವಾ? ನಂಗಂತೂ ಇದೆ! ನಾನು ಹೇಳುವ ಮುಂದಿನ ಅಂಶದಲ್ಲಿ ಈ ಇಬ್ಬರು ಹೂಡಿಕೆದಾರರ ನಿರ್ಧಾರಗಳು ಹೇಗೆ ವ್ಯತಿರಿಕ್ತವಾದ ಪಲಿತಾಂಶವನ್ನ ನೀಡಿದವು ಅನ್ನೋದರ ಬಗ್ಗೆ ನಿಮಗೆ ತಿಳಿಯುತ್ತೆ. ಎರಡನೆಯ ಪ್ರಮುಖವಾದ ಅಂಶ ಅಂದ್ರೆ - ೨- ಮಾರಾಟ ಮಾಡಬೇಡಿ (NEVER SELL) ನೀವೊಬ್ಬ ಅನುಭವಿ ಹೂಡಿಕೆದಾರರಾಗಿದ್ದರೆ ನಿಮಗೆ ಮೊದಲ ಮತ್ತು ಎರಡನೇ ಅಂಶಗಳಲ್ಲಿ ಅಷ್ಟೇನು ವ್ಯತ್ಯಾಸ ಕಾಣಿಸೋದಿಲ್ಲ. ಯಾಕಂದ್ರೆ ಸ್ಟಾಕ್ ಮಾರ್ಕೆಟ್ ನ್ ಕುಸಿತದ ಸಂದರ್ಭದಲ್ಲಿ ಹೂಡಿಕೆದಾರರು ವಿಚಲಿತರಾದಾಗ ಮಾತ್ರ ತಮ್ಮ ಷೇರುಗಳನ್ನ ಮಾರಾಟ ಮಾಡ್ತಾರೆ. ಹಾಗಾದ್ರೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಮಾರಾಟ ಮಾಡ್ಬೇಕಾ? ನಿಮಗೆ ಹಣದ ಅತಿಯಾದ ಅವಶ್ಯಕತೆ ಇದ್ದಲ್ಲಿ ಮಾತ್ರ ಮಾರಾಟ ಮಾಡಿ. ಆದರೆ ಇಂತಹ ಸಂದರ್ಭದ್ಲಲಿ ಎಮರ್ಜೆನ್ಸಿ ಫಂಡ್ ಅನ್ನ ಹೊಂದಿದ್ದರೆ ನಿಮ್ಮ ಸಹಾಯಕ್ಕೆ ಬರುತ್ತದೆ. ಆದರೂ ನಿಮಗೆ ಹಣದ ಅತಿಯಾದ ಅವಶ್ಯಕತೆ ಇದ್ದರೆ ಅಷ್ಟುಮಾತ್ರ ವಿಥ್ ಡ್ರಾ ಮಾಡಿ. ಆದರೂ ಸ್ಟಾಕ್ ಮಾರ್ಕೆಟ್ ಕುಸಿತ ಕಂಡಾಗ ಷೇರುಗಳನ್ನ ಮಾರಾಟಮಾಡುವುದು ಸರಿಯಲ್ಲ ಇದರಿಂದ ಹೆಚ್ಚಾಗಿ ನಷ್ಟ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಜೀವಮಾನದ ಉಳಿತಾಯವನ್ನ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಯಾಕಂದ್ರೆ ಇಂತಹ ಸಂದರ್ಭದಲ್ಲಿ ಹೆಚ್ಚಾಗಿ ಎಲ್ಲ ಷೇರುಗಳು ತಮ್ಮ ಬೆಲೆಯಲ್ಲಿ ಕುಸಿತವನ್ನ ಕಂಡಿರುತ್ತವೆ. ಕೆಲವೊಮ್ಮೆ ಕೆಲವೊಂದು ಷೇರುಗಳು ತಮ್ಮ ಮೂಲ ಬೆಲೆಯ ಅರ್ಧದಷ್ಟು ಕುಸಿತವನ್ನ ಕಾಣುತ್ತವೆ. ಇಂತಹ ಸಂದರ್ಭದಲ್ಲಿ ನಾನು ಮೊದಲು ಹೇಳಿದ ಅಂಶ ನಿಮ್ಮ ಸಹಾಯಯಾಕ್ಕೆ ಬರುತ್ತದೆ. ಅದೇ ತಾಳ್ಮೆ! ಯಾಕಂದ್ರೆ ನೀವು ತಾಳ್ಮೆಯಿಂದ ಸ್ವಲ್ಪ ಸಮಯ ಕಾದರೆ ಒಂದು ನಿಗದಿತ ಸಮಯದ ನಂತರ ಷೇರು ಮಾರುಕಟ್ಟೆ ಚೇತರಿಕೆಯನ್ನ ಕಾಣುತ್ತದೆ. ಮತ್ತು ಆರ್ಥಿಕತೆ ಚೇತರಿಕೆಯನ್ನ ಕಂಡಾಗ ನಿಮ್ಮ ಹೂಡಿಕೆ ಲಾಭದೊಂದಿಗೆ ಹಿಂತಿರುಗುತ್ತೆ. ಇಲ್ಲಿ ಪ್ರಿಯಾ ಮತ್ತು ಶಿಖರ್ ಇಬ್ಬರು ಪರಿಸ್ಥಿತಿಯನ್ನ ವ್ಯತಿರಿಕ್ತವಾದ ನಿರ್ಧಾರವನ್ನ ಕೈಗೊಂಡಿದ್ದರು. ಇಲ್ಲಿ ಶಿಖರ್ ವಿಚಲಿತನಾಗಿ ತನ್ನ ಷೇರುಗಳನ್ನ ಮಾರಾಟ ಮಾಡಿದ್ದ ಹಾಗು ತನ್ನ ಐದು ವರ್ಷದ ಹೂಡಿಕೆಯನ್ನ ಕಳೆದುಕೊಂಡಿದ್ದ. ಶಿಖರ್ ಗೆ ಸುಮಾರು ಶೇಕಡಾ 20ರಷ್ಟು ನಷ್ಟವಾಗಿತ್ತು. ಆದರೆ ಪ್ರಿಯಾಳ ಕಥೆ ಕೇಳಿದಮೇಲೆ ಶಿಖರ್ ಗೆ ತನ್ನ ನಿರ್ಧಾರದ ಬಗ್ಗೆ ವಿಷಾದ ಉಂಟಾಗಿದ್ದು ಸುಳ್ಳಲ್ಲ ಯಾಕೆ ಅಂತ ಮುಂದೆ ನೋಡೋಣ. ಮೂರನೇ ಪ್ರಮುಖ ಅಂಶ ಅಂದ್ರೆ - ಸರಿಯಾದ ಷೇರುಗಳ್ಳನ್ನ ಖರೀದಿಸುವುದು. ಸ್ನೇಹಿತರೆ ಸ್ಟಾಕ್ ಮಾರ್ಕೆಟ್ ನ ಕುಸಿತದ ಸಂದರ್ಭದಲ್ಲಿ ನೀವು ಕೆಲವೊಂದು ಷೇರುಗಳು ಸಾರ್ವಕಾಲಿಕ ಕುಸಿತವನ್ನ ಕಂಡಿರುವುದು ಕಾಣಬಹುದಾಗಿದೆ. ಅದು ಮೂರು ಐದು ಅಥವಾ ಹತ್ತು ವರ್ಷಗಳ ಸಾರ್ವಕಾಲಿಕ ಕುಸಿತವನ್ನ ಕಂಡಿದ್ದಿದೆ . ಕೆಲವೊಂದು ಅನುಭವಿ ಹೂಡಿಕೆದಾರರ ಹೂಡಿಕೆಯನ್ನ ಗಮನಿಸಿದರೆ ಅವರು ಇಂತಹ ಸಂದರ್ಭವನ್ನ ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹೇಗೇಂದ್ರೆ ಅಂತಃ ಸಂದರ್ಭದಲ್ಲಿ ಕೆಲವೊಂದು ಉತ್ತಮ ಷೇರುಗಳು ಕಡಿಮೆ ಬೆಲೆಯಲ್ಲಿ ದೊರಕುತ್ತವೆ ಅಂತಹ ಷೇರುಗಳಮೇಲೆ ಹೂಡಿಕೆ ಮಾಡುವುದು ಉತ್ತಮ. ಯಾಕಂದ್ರೆ ಒಂದು ವರ್ಷ ಅಥವಾ ಎರಡು ವರ್ಷದ ನಂತರ ಷೇರುಗಳು ಚೇತರಿಕೆ ಕಾಣುತ್ತವೆ ಮತ್ತು ಉತ್ತಮ ಲಾಭವನ್ನ ತಂದುಕೊಡುತ್ತವೆ. ಇಲ್ಲಿ ಪ್ರಿಯ ಮಾಡಿದ್ದೂ ಇದನ್ನೇ. ಆ ಸಂದರ್ಭದಲ್ಲಿ ಪ್ರಿಯಾಳ ಅಕೌಂಟ್ ನಲ್ಲಿ ಸ್ವಲ್ಪ ಹಣ ಇತ್ತು ಅದನ್ನ ಪ್ರಿಯ ಷೇರುಗಳ ಮೇಲೆ ಹಾಗು INDEX FUND ನ ಮೇಲೆ ಹೂಡಿಕೆ ಮಾಡಿದ್ದಳು. ಯಾವಾಗ ಷೇರು ಮಾರುಕಟ್ಟೆ ಚೇತರಿಕೆಯನ್ನ ಕಂಡಿತೋ ಆಗ ಅವಳು ತನ್ನ ಮೂಲ ಹೂಡಿಕೆಯ ಮೇಲೆ ಲಾಭವನ್ನ ಪಡೆದಿದ್ದಲ್ಲದೆ ತನ್ನ ಹೊಸ ಹೂಡಿಕೆಯ ಮೇಲು ಭಾರೀ ಲಾಭವನ್ನ ಕಂಡುಕೊಂಡಳು. ಹಾಗೆ ಸ್ನೇಹಿತರೆ! ಈ ಷೇರು ಮಾರುಕಟ್ಟೆ ಹೊಸಬರನ್ನ ಚಿಂತೆಗೀಡು ಮಾಡಿದರೂ ಸಹ ಅನುಭವಿ ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನ ನೀಡುತ್ತಿರುತ್ತದೆ. ಈಗ ನೀವೂ ಸ್ಟಾಕ್ ಮಾರ್ಕೆಟ್ ನ EXPERT ಆಗಬೇಕಾ ಹಾಗಾದ್ರೆ ನಾನು ಹೇಳಿರುವ ಈ ಮೂರು ಅಂಶಗಳನ್ನ ಸದಾ ನೆನಪಿಟ್ಟುಕೊಳ್ಳಿ. ಈ ಮೂರು ಅಂಶಗಳು ನಿಮ್ಮ ಗಮನದಲ್ಲಿ ಇದ್ದಾರೆ ಷೇರು ಮಾರುಕಟ್ಟ ಎನ್ನುವ ಈ ಸಾಗರದಲ್ಲಿ ಯಶಸ್ವಿ ಪಯಣ ನಿಮ್ಮದಾಗುತ್ತೆ . ಇದಿಷ್ಟು ಇವತ್ತಿನ ಪೋಡ್ ಕ್ಯಾಸ್ಟ್ ಅಲ್ಲಿ ಷೇರು ಮಾರುಕಟ್ಟೆಯ ಸಾಕಷ್ಟು ಉಪಯುಕ್ತ ಮಾಹಿತಿಯನ್ನ ನಿಮಗೆ ನೀಡಿದ್ದೀನಿ. ಇವತ್ತಿಗೆ ಇದಿಷ್ಟು ಸಾಕು ಅಂತ ಅನಿಸ್ತಿದೆ. ನಾನ್ ಈಗ ಷೇರು ಮಾರುಕಟ್ಟೆಯ ಸುದ್ದಿಯನ್ನ ನೋಡೋದಕ್ಕೆ ಹೋಗ್ತಾ ಇದೀನಿ . ಮುಂದಿನ ಪೋದ್ ಕ್ಯಾಸ್ಟ್ ನಲ್ಲಿ ಇನ್ನಷ್ಟು ವಿಷಯಗಳೊಂದಿಗೆ ಮತ್ತೆ ಸಿಗೋಣ. ಅಲ್ಲಿವರೆಗೆ HAPPY ಇನ್ವೆಸ್ಟಿಂಗ್! ಏಂಜಲ್ ಬ್ರೋಕಿಂಗ್ ಕಡೆಯಿಂದ ನಿಮೆಗೆ ಧನ್ಯವಾದ. ಹೂಡಿಕೆಗೂ ಮುನ್ನ ಸಂಬಂಧ ಪಟ್ಟ ದಾಖಲೆಗಳನ್ನ ಸರಿಯಾಗಿ ಓದಿ . ಮಾರುಕಟ್ಟೆಯ ಅಪಾಯಗಳಿಂದ ಪಾರಾಗಿ.
What to do when the stock market crashes? | Kannada