ಎಲ್ಐಸಿ ಯ - ಐಪಿಒ ಬಗ್ಗೆ ತಿಳಿಯ ಬೇಕಾದ ವಿಷಯಗಳು: ಹಲೋ ಫ್ರೆಂಡ್ಸ್, ಏಂಜಲ್ ಒನ್ ನ ಇನ್ನೊಂದು ಎಕ್ಸಾಯಿಟಿಂಗ್ ಆದ ಪೋಡ್ಕ್ಯಾಸ್ಟ್ ಗೆ ಸ್ವಾಗತ. ಸ್ನೇಹಿತರೇ, ಈ ಪಾಡ್‌ಕ್ಯಾಸ್ಟ್‌ನಲ್ಲಿ ನಾವು ಎಲ್‌ಐಸಿ - ಐಪಿಒ ಬಗ್ಗೆ ಮಾತನಾಡೋಣ. ಸ್ನೇಹಿತರೆ ಎಲ್ಐಸಿ ಒಂದು ಬಹಳ ಹಳೆಯ ಮತ್ತು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿರುವ ಕಂಪನಿ . ಬಹಳಷ್ಟು ಇನ್ವೆಸ್ಟರ್ಗಳು ಎಲ್ಐಸಿ ಪಾಲಿಸಿ(policies) ಅನ್ನ ಹೊಂದಿರುತ್ತಾರೆ ಅಥವಾ ಒಂದು ಸಮಯದಲ್ಲಿ ಹೊಂದಿದ್ರು . ಇನ್ನೊಂದು ಮಾತು ಅಂದ್ರೆ ಎಲ್ಐಸಿ ಅಂದ್ರೆ ಇನ್ಸೂರೆನ್ಸ್ ನ ಬ್ಯುಸಿನೆಸ್; ಬಹಳಷ್ಟು ಇನ್ವೆಸ್ಟರ್ಸ್ ಅಂದುಕೊಂಡಿರ್ತಾರೆ ಇನ್ಸುರೆನ್ಸಗೆ ಯಾವಾಗಲು ಬೇಡಿಕೆ ಇರುತ್ತೆ , ಆದ್ದರಿಂದ ಇದು ಇನ್ವೆಸ್ಟ್ಮೆಂಟ್ ಗೆ ಒಂದು ಒಳ್ಳೆಯ ಆಯ್ಕೆ ಅಂತ. ಆದರೂ, ಒಬ್ಬ ಸ್ಮಾರ್ಟ್ ಇನ್ವೆಸ್ಟರ್ಸ್ ಎಲ್ಐಸಿ ಯ ಕುರಿತು ಸಾಕಷ್ಟು ಆಳವಾಗಿ ತಿಳಿಯಲು ಬಯಸುತ್ತಾನೆ. ಇಂದು ಮಾರ್ಕೆಟ್ನಲ್ಲಿ ಸಾಕಷ್ಟು ಇನ್ಸೂರೆನ್ಸ್ ಕಂಪನಿಗಳಿವೆ . ಆದರೆ ಒಂದುಕಾಲದಲ್ಲಿ ಮರ್ಕಟ್ನಲ್ಲಿ ಎಲ್ಐಸಿ ಯ ಮೊನೊಪೋಲಿ ಇತ್ತು. ಆದರೆ ಈಗ ಎಲ್ಐಸಿ ಗೆ ಬಹಳಷ್ಟು ಕಾಂಪಿಟಿಶನ್ ಇದೆ . ಈಗ ನಿಮಗೂ ಎಲ್ಐಸಿ ಬಗ್ಗೆ ತಿಳಿದುಕೊಳ್ಳೋದಕ್ಕೆ ಆಸಕ್ತಿ ಇದೆ ಅಲ್ವಾ? . ಆದ್ದರಿಂದಲೇ ನೀವು ಈ ಪಾಡ್ಕ್ಯಾಸ್ಟ್ ಅನ್ನ ಕೇಳ್ತಾ ಇದಿರಿ . ಹಾಗಾದ್ರೆ ಬನ್ನಿ ಎಲ್ಐಸಿ ಐಪಿಒ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ . ನಾವು ಈ ವಿಷಯವನ್ನ ಒಂದು ಸರಿಯಾದ ಕ್ರಮದಲ್ಲಿ, ಮೂರು ಭಾಗದಲ್ಲಿ ತಿಳಿದುಕೊಳ್ಳೋಣ - ಮೊದಲಿಗೆ ಐಪಿಒ ಬಗ್ಗೆ ಮಾತನಾಡುವುದರೊಂದಿಗೆ ಪ್ರಾರಂಭಿಸೋಣ- ಇದು ಯಾವಾಗ ಆಗುತ್ತೆ, ಇದು ಹೇಗೆ ವಿಭಿನ್ನವಾಗಿದೆ, ಮತ್ತು ಐಪಿಒ ದ ಗಾತ್ರ ಇತ್ಯಾದಿ ಗಳ ಕುರಿತು . ಮತ್ತು ಈ ಪ್ಯಾಂಡಮಿಕ್ ನ ಸಮಯದಲ್ಲಿ ಹಾಗು ಅದಕ್ಕೂ ಮುನ್ನ ಎಲ್ ಐ ಸಿ ಯಾ ಕಾರ್ಯಕ್ಷಮತೆ ಹೇಗಿತ್ತು ಅನ್ನೋದನ್ನ ನೋಡೋಣ. ಇದರೊಂದಿಗೆ ಎಲ್.ಐ.ಸಿ ಜೊತೆಗೆ ಇತರ ಇನ್ಸೂರೆನ್ಸ್ ಗಳ ಕುರಿತಾಗಿ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಣ,ಮತ್ತು ಅವುಗಳ ಐಪಿಒಗಳ ಕುರಿತಾಗಿಯೂ ನೋಡೋಣ. ----------------------------------------------------- ಪಾರ್ಟ್-1 :ಐ ಪಿ ಓದ ಕುರಿತು : ಐಪಿಒ ಗೆ ಯಾಕಿಷ್ಟು ಮಹತ್ವ ? ಮೊದಲನೆಯದು ಎಲ್‌ಐಸಿ ಐಪಿಒ ಭಾರತದ ಅತಿದೊಡ್ಡ ಐಪಿಒ ಆಗಿದೆ. ಇದರ ದಿನಾಂಕ ಇನ್ನು ಬಿಡುಗಡೆ ಆಗಿಲ್ಲ, ಆದರೆ ಇದು ಅಕ್ಟೋಬರ್ ಮತ್ತು ಡಿಸೆಂಬರ್ ನ ನಡುವೆ ಬರುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ 2021 ರಲ್ಲಿಯೇ ಈ ಐಪಿಒ ಆಗುವ ಸಂಭವ ಇದೆ. ಎರಡನೆಯದ್ದು ಕಂಪನಿ ಇನ್ನು ತನ್ನ ರೆಡ್ ಹಿಯರಿಂಗ್ ಪ್ರಾಸ್ಪೆಕ್ಟಸ್ ಫೈಲ್ ಮಾಡಿಲ್ಲ. ಓಕೆ, ಈಗ ಎಲ್.ಐ.ಸಿ ಯ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಎಲ್.ಐ.ಸಿ ಯಲ್ಲಿ ಭಾರತ ಸರಕಾರದ ಸಾಕಷ್ಟು ಹೂಡಿಕೆ ಇದೆ . ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸುವ ಸಲುವಾಗಿ ಎಲ್ಐಸಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ಸರ್ಕಾರ ಬಯಸಿದೆ. ಸರಕಾರ ಎಲ್.ಐ.ಸಿ ಯಲ್ಲಿರುವ ತನ್ನ 6% ರಿಂದ 7% ಶೇರ್ ಅನ್ನ ಮಾರಾಟ ಮಾಡುವುದರಿಂದ 90,000 ಕೋಟಿ ಸಂಗ್ರಹಿಸುವ ಗುರಿಯನ್ನ ಹೊಂದಿದೆ . ಸರಕಾರದ ಡಿಸ್ಇನ್ವೆಸ್ಟ್ಮೆಂಟ್ ಗುರಿ ಬಹಳ ದೊಡ್ಡದಿದೆ. ಅಂದ್ರೆ 2.51 ಲಕ್ಷ ಕೋಟಿಗಳು. ಅಂದ್ರೆ ಅದು 45% ಎಲ್.ಐ.ಸಿ.ಯಾ ಐಪಿಒ ದಿಂದ ಬರುತ್ತದೆ. ಮೂರನೆಯ ವಿಷಯ policyholder ಗಳ ಕುರಿತು: ಎಲ್.ಐ.ಸಿ.ಯಾ ಐಪಿಒ ಗೂ ಮುನ್ನ ಒಂದು ಕೋಟಿಗೂ ಅಧಿಕ ಡಿಮ್ಯಾಟ್ ಅಕೌಂಟ್ ತೆರೆಯುವ ಸಾಧ್ಯತೆ ಇದೆ. ಐಪಿಒ ದ ಗಾತ್ರ, ಎಲ್‌ಐಸಿ ಹೆಸರಿನ ಜನಪ್ರಿಯತೆ, ಅದರ ದೊಡ್ಡ ಪ್ರಮಾಣದ ಪಾಲಿಸಿದಾರರಿಂದ ಉತ್ಪತ್ತಿಯಾಗುವ buzz , ಮತ್ತು ಸರಕಾರದ ಪಾಲುದಾರಿಕೆಯ ಕಾರಣದಿಂದಾಗಿ ಎಲ್.ಐ.ಸಿ.ಯ ಐಪಿಒದ ಕುರಿತಾದ ಹೆಚ್ಚಿನ ಪ್ರಚಾರ ಆಗ್ತಾ ಇಲ್ಲ. ಪಾರ್ಟ್ 2- ಎಲ್.ಐ.ಸಿ.ಯ performance, ಫೈನಾನ್ಸಿಯಲ್ ಸ್ಟೇಟಸ್ ಮತ್ತು ವ್ಯಾಲ್ಯೂಯೇಷನ್ ಹೆಡ್ಲೈನ್ ನೋಡಿದ ತಕ್ಷಣ ಯಾವುದೇ ಐ.ಪಿ.ಓ ಆಕರ್ಷಕವಾಗಿ ಕಾಣಿಸುತ್ತೆ, ಆದರೆ ಹೂಡಿಕೆಗೂ ಮುನ್ನ ಕಂಪನಿಯ ಬಿಸಿನೆಸ್ ಮತ್ತು ಫೈನಾಸಿಯಲ್ಸ್ ಅನ್ನ ಗಮನಿಸುವುದು ಮುಖ್ಯ. ನಾನಿಲ್ಲಿ ಕೇವಲ ಹೈಲೈಟ್ಸ್ ಅನ್ನ ಹೇಳ್ತಾ ಇದೀನಿ, ನೀವು ನನ್ನ ಮಾತನ್ನ ಕೇಳಿ ಡಿಸೈಡ್ ಮಾಡಬೇಡಿ. ಕಂಪನಿಯ ಕುರಿತಾದ ಮುಖ್ಯ ವಿಷಯವನ್ನ ನೀವೇ ಖುದ್ದಾಗಿ ಗಮನಿಸಿ. ಬನ್ನಿ ಈಗ ಹೈಲೈಟ್ಸ್ ನೋಡೋಣ: ಎಲ್.ಐ.ಸಿ ಭಾರತದ ಅತಿದೊಡ್ಡ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್. ಇದರ ಒಟ್ಟು ಮೌಲ್ಯ 32 ಲಕ್ಷ ಕೋಟಿ. ಸಾಂಕ್ರಾಮಿಕದ ತೀವ್ರತೆಯ ಸಮಯದಲ್ಲಿ, ಅಂದ್ರೆ ಏಪ್ರಿಲ್ 2020 ರಿಂದ ಸೆಪ್ಟೆಂಬರ್ 2020 ತನಕದ ಅವಧಿಯಲ್ಲಿ ಎಲ್ಐಸಿ ಯ ಕ್ಯಾಪಿಟಲ್ ಮಾರ್ಕೆಟ್ ಹೂಡಿಕೆ 260,000 ಕೋಟಿ ರೂ. ಮತ್ತು ರಿಟರ್ನ್ಸ್ 15,000 ಕೋಟಿ ರೂ. ಕಳೆದ ವರ್ಷ ಇದೇ ಅವಧಿಯಲ್ಲಿ ಹೂಡಿಕೆಯ ಮೊತ್ತ ಸುಮಾರು 244,000 ರೂ. ಮಾರ್ಕೆಟ್ ಡಿಪ್ ನ ಸಮಯದಲ್ಲಿ ಎಲ್ಐಸಿ ಲಾಭ ಪಡೆದುಕೊಂಡಿತು. ಎಲ್‌ಐಸಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ವಿವಿಧ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಮೌಲ್ಯಮಾಪನ ಸುಮಾರು 12 ರಿಂದ 15 ಲಕ್ಷ ಕೋಟಿ ರೂ . ಮತ್ತು ಕೆಲವು ಖಾಸಗಿ ಕಂಪನಿಗಳು ಸುಮಾರು 9 ರಿಂದ 10 ಲಕ್ಷ ಕೋಟಿ ರೂ ಗಳ ಮೌಲ್ಯ ಮಾಪನ ಮಾಡಿವೆ. ಎಲ್‌ಐಸಿ ಸುಮಾರು 28 ಕೋಟಿ ರೂ.ಗಳಿಂದ 35 ಕೋಟಿ ರೂ ಪಾಲಿಸಿ ಹೊಂದಿದೆ. ಪ್ರೀಮಿಯಂ ಕಲೆಕ್ಷನ್ ನ ಒಟ್ಟು ಮೊತ್ತ 45 ಕೋಟಿಯಿಂದ 50 ಕೋಟಿ ರೂ . ಪಾರ್ಟ್ 3 - ಎಲ್.ಐ.ಸಿ ವರ್ಸ್ಸ್ ಇಟ್ಸ್ ಪೀರ್ಸ್(LIC versus its peers ) ಎಲ್.ಐ.ಸಿ ಯಾ ಹೈಲೈಟ್ಸ್ ಅನ್ನ ನೋಡಿದೀವಿ, ಈಗ ಸ್ವಲ್ಪ ಇನ್ನಷ್ಟು ನಿಖರವಾಗಿ ತಿಳಿದುಕೊಳ್ಳೋಣ. ಇಲ್ಲಿ ಗಮನಿಸಬೇಕಾದ ಕೆಲವೊಂದು ಅಂಕಿ ಅಂಶಗಳಿವೆ. ಏಪ್ರಿಲ್ ನಿಂದ ಸೆಪ್ಟೆಂಬರ್ 2020 ರವರೆಗೆ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿದ್ದಾಗ ಎಲ್ಐಸಿಯ ಮಾರ್ಕೆಟ್ ಶೇರ್ ಅನ್ನ ನೋಡೋಣ, ಎಲ್‌ಐಸಿಯ ವಾರ್ಷಿಕ ವರದಿಯ ಪ್ರಕಾರ, ಪಾಲಿಸಿಯ ಸಂಪೂರ್ಣ ಸಂಖ್ಯೆಗೆ ಸಂಬಂಧಿಸಿದಂತೆ, 2019-2020ರ ಹಣಕಾಸಿನ ವರ್ಷದ ಮೇ ಯಲ್ಲಿನ 69% ಗೆ ಹೋಲಿಸಿದರೆ ಎಲ್‌ಐಸಿಯ ಮಾರುಕಟ್ಟೆ ಪಾಲು 67% - ಇತ್ತು. ಮೊದಲ ವರ್ಷದ ಪ್ರೀಮಿಯಂಗಳಿಗೆ ಸಂಬಂಧಿಸಿದಂತೆ ಎಲ್ಐಸಿಯ ಮಾರುಕಟ್ಟೆ ಪಾಲು 70% ರಷ್ಟಿದೆ. ಕ್ಯಾಪಿಟಲ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ 260,000 ಕೋಟಿ ರೂ. ಮತ್ತು ರಿಟರ್ನ್ಸ್ 15,000 ಕೋಟಿ ರೂ. ಮಾರ್ಚ್ 2021 ರ ಹೊತ್ತಿಗೆ, ಎಲ್ಐಸಿ ತನ್ನ ಪೀರ್ ಕಂಪೆನಿಗಳಿಗಿಂತ ದೊಡ್ಡ ನೆಟ್‌ವರ್ಕ್ ಹೊಂದಿದೆ: ಇತರ 20 ಇನ್ಸೂರೆನ್ಸ್ ಕಂಪನಿಗಳ 11 ಲಕ್ಷ ಏಜೆಂಟರಿಗೆ ಹೋಲಿಸಿದರೆ ಎಲ್.ಐ.ಸಿಯ 13.5 ಲಕ್ಷ ಏಜೆಂಟರು ಫೀಲ್ಡ್ ನಲ್ಲಿದ್ದಾರೆ. ಅಂದರೆ 20 ವಿಮಾ ಕಂಪೆನಿಗಳು ಎಲ್‌ಐಸಿಯ ಮಾರಾಟ ಜಾಲಕ್ಕೆ ಹೊಂದಿಕೆಯಾಗಲ್ಲ. ಪ್ಯಾಂಡಮಿಕ್( pandamic) ನ ಮೊದಲು ಎಲ್.ಐ.ಸಿ ಯ ಪರ್ಫಾರ್ಮೆನ್ಸ್( performance) ಉತ್ತಮವಾಗಿತ್ತು . ಇವೆಲ್ಲವೂ ಮಾರ್ಚ್ 2020 ಕ್ಕೂ ಮೊದಲಿನ ಅಂಕಿ ಅಂಶಗಳಾಗಿವೆ: ಆ ಸಮಯದಲ್ಲಿ, ಎಲ್.ಐ.ಸಿಯಾ ಸೇಲ್ಸ್ ನೆಟ್ವರ್ಕ್ ಡಬಲ್ ಇತ್ತು ಆಗ 22 ಲಕ್ಷ ಏಜೆಂಟ್ಗಳಿದ್ದರು. ಈಗ ಇತರ ಇನ್ಸೂರೆನ್ಸ್ ಕಂಪನಿಗಳ ಪರ್ಫಾರ್ಮೆನ್ಸ್(performance) ಅನ್ನ ನೋಡೋಣ : 2 ಜನರಲ್ ಇನ್ಸೂರೆನ್ಸ್ ಕಂಪನಿಗಳು ಇತ್ತೀಚೆಗೆ ಸಾರ್ವಜನಿಕವಾಗಿ ಬಂದಿವೆ, ಅವುಗಳೆಂದರೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಮತ್ತು ಜನರಲ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ. ಜನರಲ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಐಪಿಒ ದಲ್ಲಿ, ಶೇರುಗಳು ಆಫರ್ ಬೆಲೆ 912 ರೂ ಇತ್ತು ಮತ್ತು ಅದೇ ಷೇರುಗಳಿಗೆ ಈಗ ಸ್ಟಾಕ್ ಮಾರ್ಕೆಟ್ ಅಲ್ಲಿ 200 ರೂ. ಇದೆ - ಅಂದ್ರೆ ಈ ಪಾಡ್ಕ್ಯಾಸ್ಟ್ ಅನ್ನ ಬರೆಯುವ ಸಮಯದಲ್ಲಿ. ನ್ಯೂ ಇಂಡಿಯಾ ಅಶ್ಯೂರೆನ್ಸ್ ನ ಐಪಿಒ ಷೇರುಗಳ ಆಫರ್ ಬೆಲೆ 770 ರಿಂದ 800 ರೂಗಳಾಗಿದ್ದು, ಪ್ರಸ್ತುತ ಈ ಪಾಡ್ಕ್ಯಾಸ್ಟ್ ಅನ್ನ ಬರೆಯುವ ಸಮಯದಲ್ಲಿ ಇದು ಸುಮಾರು 168 ರೂ. ಆಗಿದೆ. ಐಪಿಒದಲ್ಲಿ ಇನ್ವೆಸ್ಟ್ ಮಾಡುವುದಕ್ಕೂ ಮೊದಲು ನಿಮ್ಮ ರಿಸ್ಕ್ ಟೇಕಿಂಗ್ ಕ್ಯಾಪಾಸಿಟಿ ಅನ್ನ ನೋಡಿ ಮತ್ತು ಕಂಪನಿಯ ಕುರಿತಾಗಿ ವಿವರಗಳನ್ನ ಓದಿ. ಕೊನೆಯಲ್ಲಿ, ಒಂದು ವಿಷಯ ನೆನಪಿಡಿ ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡುವುದು ಯಾವತ್ತು ರಿಸ್ಕ್ ನಿಂದ ಕೂಡಿರುತ್ತೆ . ಈ ಪಾಡ್ಕ್ಯಾಸ್ಟ್ ಅನ್ನ ಶೈಕ್ಷಣಿಕ ಉದ್ದೇಶದಿಂದ ಮಾಡಲಾಗಿದೆ ಆದ್ದರಿಂದ ಹೂಡಿಕೆದಾರರು ತಮ್ಮ ಸ್ವಂತ ರಿಸರ್ಚ್ ಅನ್ನ ಮಾಡಲೇಬೇಕು. ಇಂತಹ ಇನ್ನಷ್ಟು ಕುತೂಹಲಕಾರಿ ಪಾಡ್ಕ್ಯಾಸ್ಟ್ ಕೇಳುವುದಕ್ಕಾಗಿ- ನಮ್ಮ ಯೌಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅನ್ನ ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.