ನಮಸ್ಕಾರ ಸ್ನೇಹಿತರೆ! ಏಂಜಲ್ ಬ್ರೋಕಿಂಗ್ ನ ಪೋಡ್ ಕ್ಯಾಸ್ಟ್ ಗೆ ನಿಮಗೆ ಸ್ವಾಗತ! DIVIDEND ಈ ಒಂದು ಶಬ್ದ ಕೇಳಿದ ತಕ್ಷಣ ಬಹಳಷ್ಟು ಹೂಡಿಕೆದಾರಿಗೆ ಖುಷಿ ಕೊಡುತ್ತೆ. ಯಾಕಂದ್ರೆ ಹೂಡಿಕೆದಾರರ ಪ್ರಕಾರ DIVIDEND ಅಂದ್ರೆ ಸುಲಭದ ಗಳಿಕೆಯ ಮಾರ್ಗ earnings in the pocket ಅಂತಾನೂ ಹೇಳಬಹುದು. ಆದರೆ DIVIDEND ಗೆ ಸಂಬಂಧಿಸಿದ ಕೆಲವೊಂದು ನಿಯಮಗಳು ಹೂಡಿಕೆದಾರರಲ್ಲಿ ಗೊಂದಲವನ್ನ ಮೂಡಿಸುತ್ತವೆ. ಉದಾಹರಣೆಗೆ : record date ಮತ್ತು ex-dividend date ಹಾಗಂದ್ರೆ ಏನು? ಮತ್ತು ಹೂಡಿಕೆದಾರ ಯಾವಾಗ ತಮ್ಮ ಲಾಭಂಶವನ್ನ ನಿರೀಕ್ಷಿಸಬಹುದು? ಹಾಗಾದ್ರೆ ಬನ್ನಿ ಇವತ್ತು dividend distribution process (ಲಾಭಾಂಶ ವಿತರಣಾ ಪ್ರಕ್ರಿಯೆಯ) ವಿವಿಧ ಹಂತಗಳನ್ನು ನೋಡೋಣ. ಈ ಹಂತಗಳನ್ನ dividend dates ಅಂತ ಕರೀತಾರೆ. ಯಾವುದೇ ಹೂಡಿಕೆದಾರರಿಗೆ ಈ ನಾಲ್ಕು dividend dates ಬಹಳ ಮಹತ್ವದಾಗಿರುತ್ತದೆ. ಅವು ಯಾವುದು ಅಂತ ನೋಡೋದಾದ್ರೆ ೧. Dividend announcement date ೨. Record date ೩ . Ex-dividend date ೪. Dividend payment date ಮೂಲತಃ dividend distribution ಅನ್ನೋದು ಒಂದ್ ಪ್ರಕ್ರಿಯೆ. dividend distribution ಅಲ್ಲೂ ಸಹ ಅನೇಕ ಹಂತಗಳಿವೆ ಉದಾಹರಣೆಗೆ: ನೀವ್ ಒಂದು networking party ಅಲ್ಲಿ ಇದ್ದೀರಿ ಮತ್ತು ಅಲ್ಲಿ ಲಕ್ಕಿ ಡ್ರಾ ಅನ್ನ ಘೋಷಿಸ್ತಾರೆ. ಅಲ್ಲಿ ಬಂದಿರು ವ ಅತಿಥಿಗಳಲ್ಲಿ ಯಾರ ಬುಸ್ಸಿನೆಸ್ ಕಾರ್ಡ್ ಡ್ರಾ ದಲ್ಲಿ ಗೆಲ್ಲುತ್ತೋ ಅವರು ಒಂದು ಸುಂದರವಾದ ಪ್ರವಾಸಿ ತಾಣಕ್ಕೆ ತಮ್ಮ ರಜಾದಿನವನ್ನ ಕಳೆಯೋದಕ್ಕೆ ಹೋಗ್ಬಹುದು. ಇದು ಮೊದಲ ಹಂತ. ನಂತರ ಎಲ್ಲ ಅತಿಥಿಗಳು ತಮ್ಮ ಬಿಸಿನೆಸ್ ಕಾರ್ಡ್ ಅನ್ನ ಫಿಶ್ ಬೌಲ್ ಅಲ್ಲಿ ಹಾಕ್ತಾರೆ ಘೋಷಿಸಿರುವ ಬಹುಮಾನ ಆಕರ್ಷಕವಾಗಿರೋದ್ರಿಂದ ಎಲ್ಲರೂ ಉತ್ಸುಕರಾಗಿರ್ತಾರೆ. ಈಗ ಆ ಲಕ್ಕಿ ಡ್ರಾ ಮಾಡುವ ಸಮಯ ಬಂದೇ ಬಿಡ್ತು ! ಮತ್ತು ಆ ಅದೃಷ್ಟವಂತರ ಹೆಸರು ಕೂಡ ಘೋಷಣೆ ಆಗೇ ಬಿಡುತ್ತೆ. ಇದು ಮೂರನೇ ಹಂತ. ಇನ್ನು ನಾಲ್ಕನೇ ಹಂತದಲ್ಲಿ ವಿನ್ನಿರ್ ಆಗಿರೋರು ತಮ್ಮ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡು ಅವರು ವಿನ್ ಆಗಿರುವ ವೊಚೆರ್ ನ ಸದುಪಯೋಗ ಪಡಿಸಿಕೊಳ್ತಾರೆ. ಇದೆ ರೀತಿ dividend distribution ಪ್ರಕ್ರಿಯೆಯಲ್ಲಿ ಬಹುಮಾನದ ಘೋಷಣೆ ಮತ್ತು ಅದು ಕೈ ಸೇರುವುದರ ನಡುವೆ ಕೆಲವು ಹಂತಗಳಿವೆ. ಪ್ರತಿಯೊಂದು ಹಂತಕ್ಕೂ ತನ್ನದೇ ಆದ ಮಹತ್ವವಿದೆ.ಮತ್ತು ಲಾಭಾಂಶ ವಿತರಣಾ (dividend distribution) ಪ್ರಕ್ರಿಯೆಯಲ್ಲಿ, ಪ್ರತಿ ಹಂತವೂ ಷೇರು ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. Dividend distribution date # 1: Dividend announcement date ಈ ದಿನ ಕಂಪನಿ ಯು X% dividend ಅನ್ನು ತನ್ನ ಷೇರುದಾರರಿಗೆ ಕೊಡೋದಾಗಿ ಘೋಷಿಸುತ್ತೆ . ಇಂತಹ ಸಂದರ್ಭದಲ್ಲಿ ಷೇರುಗಳ ಬೇಡಿಕೆಯು ಹೆಚ್ಚುತ್ತಿರುತ್ತದೆ ಯಾಕಂದ್ರೆ ಎಲ್ಲ ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಲಾಭಂಶವನ್ನ ತಕ್ಷಣಕ್ಕೆ ಮರಳಿ ಪಡಿಯೋದಕ್ಕೆ ಬಯಸ್ತಾ ಇರ್ತಾತಾರೆ. ಯಾಕಂದ್ರೆ ಸ್ಟಾಕ್ ಅನ್ನಖರೀದಿಸಿದ ತಕ್ಷಣ ಲಾಭಂಶ ಸಿಗೋದಾದ್ರೆ ಇದಕ್ಕಿಂತ ಉತ್ತಮ ಅವಕಾಶ ಮತ್ಯಾವುದು ಇಲ್ಲ ಅನ್ನೋದು ಅವರ ಭಾವನೆ. ಇನ್ನೊಂದೆಡೆ ಬೇಡಿಕೆಯು ಹೆಚ್ಚಿದಂತ ಸಂದರ್ಭದಲ್ಲಿ ಹಳೆಯ ಹೂಡಿಕೆದಾರರು ತಮ್ಮ ಷೇರುಗಳನ್ನ ಮಾರಾಟ ಮಾಡಲು ಉತ್ಸುಕರಾಗಿರುತ್ತಾರೆ ಯಾಕಂದ್ರೆ ಅವರು ಆ ಷೇರುಗಳನ್ನ ಕಡಿಮೆ ಬೆಲೆಗೆ ಖರೀದಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಇಂತಹ ಬಿರುಸಿನ ಚಟುವಟಿಕೆಯಿಂದಗಾಗಿ ಷೇರುಗಳ ಬೆಲೆಯಲ್ಲೂ ಅನಿಶ್ಚಿತತೆ ಕಾಣಬಹುದು . ಇಲ್ಲಿ ನಿಮಗೆ ಒಂದು ಪ್ರಶ್ನೆ ಕಾಡಬಹುದು ಅದೇನೆಂದ್ರೆ - dividend ಘೋಷಣೆ ಅದ್ ಮೇಲು ಸ್ಟಾಕ್ ಅನ್ನ ಖರೀದಿ ಮಾಡಿ dividend ಅನ್ನ ಪಡೀ ಬಹುದಾ ? ಮಾಡಬಹುದು! ಈ ಸಂದರ್ಭದಲ್ಲೇ record date ಮತ್ತು ex-dividend date ಪ್ರಮುಖ ಪಾತ್ರ ವಹಿಸ್ತಾವೆ. Dividend distribution date # 2: Record date ಈಗ ಕಂಪನಿ ಲಾಭಾಂಶವನ್ನು ಪಡೆಯಲು ಅರ್ಹರಾಗಿರುವ ಷೇರುದಾರರನ್ನು ಕಂಪನಿ ಗುರುತಿಸುತ್ತದೆ ಮತ್ತುಗಣನೆಗೆ ತೆಗೆದುಕೊಳ್ಳುತ್ತದೆ. Record date ನ ನಂತರ ಷೇರುಗಳ ಬೆಲೆ ಸ್ವಲ್ಪ ಕುಸಿಯುತ್ತದೆ ಯಾಕಂದ್ರೆ ಇದು next dividend ನ ಸಮಯ . ಕೆಲವು ಹೂಡಿಕೆದಾರರು ಲಾಭದ ನಿರೀಕ್ಷೆಯಲ್ಲಿರುತ್ತಾರೆ. ಕೆಲವು ಇಂಟ್ರಾ ಡೇ ಟ್ರೇಡರ್ಸ್ ತಮ್ಮದೇ ಆದ ತಂತ್ರಗಾರಿಕಾಯನ್ನ ಮಾಡಿದ್ರೆ ಕೆಲವು ದೀರ್ಘಕಾಲದ ಹೂಡಿಕೆದಾರರು ಷೇರುಗಳ ಬೆಲೆ ಕುಸಿದಿರುವುದರಿಂದ ಖರೀದಿಗೆ ಮುಂದಾಗುತ್ತಾರೆ. ಇಲ್ಲಿ ನಿಮಗೆ ಎದುರಾಗೋ ಇನ್ನೊಂದು ಪ್ರಶ್ನೆ ಅಂದ್ರೆ ರೆಕಾರ್ಡ್ - ಈ ರೆಕಾರ್ಡ್ - Record date ನ ಕೊನೆಯಲ್ಲಿ ತಯಾರಾಗೋದ್ರಿಂದ Record date ನ ಒಂದು ದಿನ ಮೊದಲು ಹೂಡಿಕೆದಾರ ಷೇರುಗಳನ್ನ ಖರೀದಿ ಮಾಡಿದ್ರೆ dividend ಸಿಗುತ್ತದೋ ಇಲ್ಲವೇ ಅಂತ ? ಇಲ್ಲ!. ನೀವು ಯಾವುದೇ ಷೇರುಗಳನ್ನ ಖರೀದಿ ಮಾಡಿದ್ರು ಅದು ನಿಮ್ಮ ಡಿಮ್ಯಾಟ್ ಅಕೌಂಟ್ ನಲ್ಲಿ ಎರಡು ದಿನದ ನಂತರ ಸಿಗುತ್ತದೆ ಅಲ್ವಾ! ಹಾಗಾದರೆ ನೀವು ರೆಕಾರ್ಡ್ ಡೇಟ್ ನ ಎರಡು ದಿನದ ಮೊದಲು ಷೇರುಗಳನ್ನ ಖರೀದಿಸ ಬೇಕಾಗುತ್ತದೆ , ಇಲ್ಲಿ ನಮಗೆ Dividend distribution date # 3: Ex-dividend date ಸಹಾಯಾಕ್ಕೆ ಬರುತ್ತದೆ. ಇದು ಷೇರುಗಳ ಖರೀದಿದಾರರಿಗೆ ಕೊನೆಯ ಅವಕಾಶ. ಅಂದರೆ ಯಾರು ಷೇರುಗಳನ್ನ ತಕ್ಷಣಕ್ಕೆ ಖರೀದಿ ಮಾಡಿ ಲಾಭವನ್ನ ಪಡೆಯಲು ಇಚ್ಚಿಸುತ್ತಾರೊ ಅಂತವರಿಗೆ. ಈ ದಿನದ ನಂತರ ಹೊಸ ಹೊಡಿಕೆದಾರರಿಗೆ DIVIDEND ಸಿಗೋದಿಲ್ಲ. ದಾಖಲೆಯ ದಿನಾಂಕ ಸೋಮವಾರ ಅಥವಾ ದೀಪಾವಳಿ ಅಥವಾ ಗಣರಾಜ್ಯೋತ್ಸವದ ನಂತರದ ದಿನ ಅಥವಾ ಇನ್ನಿತರ ಸಾರ್ವಜನಿಕ ರಜಾದಿನಗಳಂದು ಇದ್ದರೆ ಏನಾಗುತ್ತದೆ? ಸರಳವಾಗಿ ಮಾಜಿ ಲಾಭಾಂಶ ದಿನವನ್ನು ರೆಕಾರ್ಡ್ ದಿನಾಂಕದಿಂದ ಮತ್ತಷ್ಟು ಹಿಂದಕ್ಕೆ ತಳ್ಳಲಾಗುತ್ತದೆ, ಅಂದರೆ ಷೇರುದಾರರು ತಮ್ಮ ಡಿಮ್ಯಾಟ್ ಖಾತೆಯಲ್ಲಿ ತಮ್ಮ ಸ್ಟಾಕ್ ಅನ್ನು ರೆಕಾರ್ಡ್ ದಿನಾಂಕದಂದು ಸ್ವೀಕರಿಸುತ್ತಾರೆ. ನೀವು DIVIDEND ನ್ನ ಪಡೆಯೊದಕ್ಕೆ ಇಚ್ಚಿಸಿದ್ದಲ್ಲಿ ರೆಕಾರ್ಡ್ ಡೇಟ್ ಮತ್ತು ಎಕ್ಸ್ ಡಿವಿಡೆಂಟ್ ದಿನಾಂಕವನ್ನ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. Dividend distribution date # 4: Dividend payment date ಕೆಲವೊಮ್ಮೆ ನೀವು ಈ ದಿನಕ್ಕಾಗಿ ಬಹಳ ದಿನ ಕಾಯಬೇಕಾಗುತ್ತದೆ. ಯಾಕಂದ್ರೆ ಕಂಪೆನಿ ೩೦ ದಿನಗಳ ಒಳಗೆ ತನ್ನ ಷೇರುದಾರರಿಗೆ dividend ಮೊತ್ತವನ್ನ ಪಾವಾತಿಸಬೇಕಾಗುತ್ತದೆ. ಈಗಂತು ಎಲ್ಲರು ಆನ್ಲೈನ್ ನಲ್ಲಿ ಟ್ರೇಡಿಂಗ್ ಮಾಡುವುದರಿಂದ ಹೂಡಿಕೆದಾರರ ಬ್ಯಾಂಕ್ ಆಕೌಂಟ್ನ ಮಾಹಿತಿ ಪ್ರತಿ ಕಂಪನಿಯ ಬಳಿ ಇರುತ್ತೆ ಹಾಗಾಗಿ dividend ಹಣವನ್ನ ನೇರವಾಗಿ ಹೂಡಿಕೆದಾರರ ಖಾತೆಗೆ ಜಮೆ ಮಾಡಬೇಕಾಗುತ್ತದೆ . ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆಯೆ ಎಂದು ಖಚಿತಪಡಿಸಿ ಕೊಳ್ಳಬೇಕಾಗುತ್ತದೆ. ನೆನಪಿರಲಿ ೨೦೨೦ ರ ಬಜೆಟ್ ನ ಪ್ರಕಾರ ಪಾವಾತಿಯಾದ dividend ಗೆ ಹೊಡಿಕೆದಾರರಿಗೆ ಟ್ಯಾಕ್ಸ್ ಅನ್ನ ವಿದಿಸಲಾಗುತ್ತದೆ. ಟ್ಯಾಕ್ಸ್ ನ ಮೊತ್ತ ನಿಮ್ಮ ಟ್ಯಾಕ್ಸನ ಸ್ಲಾಬ್ ನ ಮೇಲೆ ಅವಲಂಬಿತವಾಗಿದೆ. ನಿಮ್ಮ ಟ್ಯಾಕ್ಸ್ ಸ್ಲಾಬ್ ಶೇ ೨೦ % ಕ್ಕಿಂತ ಕಡಿಮೆ ಇದ್ದರೆ ನಿಮಗೆ ಲಾಭ ಯಾಕಂದ್ರೆ ಈಗ ನೀವು ಪಾವತಿಸುವ ತೆರಿಗೆ ೨೦೨೦ ರ ಬಜೆಟಿಗೂ ಮುನ್ನ ಪಾವತಿಸಿದ ಡಿವಿಡೆಂಡ್ ವಿತರಣಾ ತೆರಿಗೆಗಿಂತ ಕಡಿಮೆಯಾಗಿದೆ. ಆದರೆ ನೀವು ತೆರಿಗೆಯ ವ್ಯಾಪ್ತಿಯಿಂದ ಹೊರಗಿದ್ದರೆ ನೀವು dividend ಮೇಲಿನ ತೆರಿಗೆಯನ್ನ ಪಾವತಿಸಬೇಕಾಗಿಲ್ಲ. ಆದರೆ ನೀವು ಹೆಚ್ಚಿನ ಟ್ಯಾಕ್ಸ್ ನ್ ಮಿತಿಗೆ ಒಳಪಟ್ಟಿದ್ದೇ ಆದಲ್ಲಿ ಭಾರಿ ಪ್ರಮಾಣದ ಟ್ಯಾಕ್ಸ್ ಅನ್ನ ಪಾವತಿಸ ಬೇಕಾಗುತ್ತದೆ. ಅದಕ್ಕಾಗಿಯೇ ಆದ್ದರಿಂದ ಹೆಚ್ಚಿನ ತೆರಿಗೆ-ಮಿತಿಗೆ ಒಳಪಡುವ ಹೂಡಿಕೆದಾರರು ಲಾಭಾಂಶ ಪ್ರಕಟಣೆ ಹಂತದಲ್ಲಿ ಬೆಲೆಗಳು ಏರಿದಾಗ ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಾರೆ. ಇದೆಲ್ಲವನ್ನ ಕೇಳಿಮೇಲೆ ನಿಮಗೆ ಒಂದು ವಿಷಯ ಸ್ಪಷ್ಟವಾಗಿರಬಹುದು ಅದೇನೆಂದ್ರೆ dividend distribution process ಸಮಯದಲ್ಲಿ ಹೂಡಿಕೆದಾರರಿಗೆ ಸ್ಟಾಕ್ ನ ಮೇಲೆ ಹೂಡಿಕೆ ಹಾಗು ತಮ್ಮ ಸ್ಟಾಕ್ ಗಳ ಮಾರಾಟಕ್ಕೆ ಎರಡಕ್ಕೂ ಅವಕಾಶ ಇರುತ್ತದೆ. ಹೂಡಿಕೆ ಮಾಡುವ ಮೊದಲು ಷೇರು ಮಾರುಕಟ್ಟೆಯ ಕಾರ್ಯಗಳನ್ನು ಯಾವಾಗಲೂ ಚೆನ್ನಾಗಿ ಅರ್ಥಮಾಡಿಕೊಳ್ಳಿ - ಈಈಗ ನೀವು ಈ ಪಾಡ್ಕ್ಯಾಸ್ಟ್ ಅನ್ನು ಕೇಳುವ ಮೂಲಕ ತಿಳಿದುಕೊಳ್ಳುತ್ತಿರುವಂತೆ. ಸ್ನೇಹಿತರೆ ಇದಿಷ್ಟು ಇವತ್ತಿನ ಪೋಡ್ ಕ್ಯಾಸ್ಟ್ ನಲ್ಲಿ ನೀ ತಿಳಿದುಕೊಂಡಿದ್ದೀರ. ಮುಂದಿನ ಪೋಡ್ ಕ್ಯಾಸ್ಟ್ ನಲ್ಲಿ ಇನ್ನಷ್ಟು ವಿಷಯಗಳನ್ನ ತಿಳಿಸ್ತೀನಿ ಅಲ್ಲಿವರೆಗೆ ಏಂಜಲ್ ಬ್ರೋಕಿಂಗ್ ನ ಕಡೆಯಿಂದ ಶುಭವಿದಾಯ. ಹ್ಯಾಪಿ ಇನ್ವೆಸ್ಟಿಂಗ್!. ಹೂಡಿಕೆಗೂ ಮುನ್ನ ಸಂಬಂಧ ಪಟ್ಟ ದಾಖಲೆಗಳನ್ನ ಸರಿಯಾಗಿ ಓದಿ . ಮಾರುಕಟ್ಟೆಯ ಅಪಾಯಗಳಿಂದ ಪಾರಾಗಿ.
What is Dividend Date? Record Date? And Ex-dividend Date? | Kannada